ಭೂ ವಿವಾದದ ತೀರ್ಪು 108 ವರ್ಷದ ಬಳಿಕ ಪ್ರಕಟ

Public TV
1 Min Read

ಪಾಟ್ನಾ: ದೇಶದಲ್ಲಿ ನ್ಯಾಯದಾನ ವಿಳಂಬಕ್ಕೆ ಇದು ಒಂದು ಉದಾಹರಣೆ. ನಾಲ್ಕು ತಲೆಮಾರುಗಳ ಸುದೀರ್ಘ ನಿರೀಕ್ಷಣೆ, ಲೆಕ್ಕವಿಲ್ಲದಷ್ಟು ವಿಚಾರಣೆ. ಎಷ್ಟೋ ವಾದ-ಪ್ರತಿವಾದಗಳ ಭಾರತದ ಅತ್ಯಂತ ಹಳೆಯ ಪ್ರಕರಣ ಎಂದು ಭಾವಿಸಲಾದ ಒಂದು ಭೂವಿವಾದದ ತೀರ್ಪು ಬರೋಬ್ಬರಿ 108 ವರ್ಷದ ಬಳಿಕ ಹೊರಬಿದ್ದಿದೆ.

ಬಿಹಾರದ ಭೋಜ್‍ಪುರಿ ಜಿಲ್ಲಾ ಕೋರ್ಟ್ ಮೇ 11 ರಂದು ತೀರ್ಪು ನೀಡಿದೆ. ಕೊಯಿಲ್‍ವಾರ್ ಗ್ರಾಮದ ದರ್ಬಾರಿ ಸಿಂಗ್ ಎಂಬುವವರು ಅಜಾರ್ ಖಾನ್ ವಿರುದ್ಧ 1914ರಲ್ಲಿ ಆರಾ ಸಿವಿಲ್ ಕೋರ್ಟ್ ದಾಖಲಿಸಿದ್ದರು. ಈವರೆಗೂ ಎರಡು ಕುಟುಂಬಗಳು ರಾಜಿಗೆ ಮುಂದಾಗಲಿಲ್ಲ. ಈ ವಿವಾದದ ತೀರ್ಪು ಇದೀಗ ಹೊರಬಿದ್ದಿದೆ.

ತೀರ್ಪಿನ ಪರಿಣಾಮ 91 ವರ್ಷದ ಸರ್ಕಾರದ ವಶದಲ್ಲಿದ್ದ 3 ಎಕರೆ ಭೂಮಿ ಈಗ ದರ್ಬಾರಿ ಸಿಂಗ್ ಕುಟುಂಬದ ನಾಲ್ಕನೇ ತಲೆಮಾರಿನ ವ್ಯಕ್ತಿಗೆ ಹಸ್ತಾಂತರ ಆಗಲಿದೆ

ಕೋಯಿಲ್‍ವಾರ್ ಗ್ರಾಮದಲ್ಲಿ ಈಗ ಒಂದು ಎಕರೆ ಭೂಮಿ ಬೆಲೆ 5 ಕೋಟಿ ರೂಪಾಯಿ. ಹೀಗಾಗಿ ಸೋತವರು ಹೈಕೋರ್ಟ್, ಸುಪ್ರೀಂಕೋರ್ಟ್ ಮೆಟ್ಟಿಲೇರುವ ಸಂಭವವೂ ಇದೆ.

Share This Article
Leave a Comment

Leave a Reply

Your email address will not be published. Required fields are marked *