ವೇಣುಗೋಪಾಲ್ ಸರ್ಕಾರದ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡಿಲ್ಲ, ಸಲಹೆ ನೀಡಿದ್ದಾರೆ: ಡಿಕೆಶಿ

1 Min Read

ಬೆಂಗಳೂರು: ಎಐಸಿಸಿ ಜನರಲ್ ಸೆಕ್ರೆಟರಿ ಕೆ.ಸಿ.ವೇಣುಗೋಪಾಲ್ (KC Venugopal) ಅವರು ರಾಜ್ಯ ಸರ್ಕಾರದ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡಿಲ್ಲ. ಅವರು ಸಲಹೆ ನೀಡಿದ್ದಾರೆ ಎಂದು ಡಿಸಿಎಂ ಡಿಕೆಶಿವಕುಮಾರ್ (DK Shivakumar) ಸಮರ್ಥನೆ ಮಾಡಿಕೊಂಡಿದ್ದಾರೆ.

ಕೋಗಿಲು ಬಳಿ ಅಕ್ರಮ ಲೇಔಟ್ ತೆರವು ವಿಚಾರದಲ್ಲಿ ವೇಣುಗೋಪಾಲ್ ಮಾಡಿದ್ದ ಟ್ವೀಟ್ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಕೆಸಿ ವೇಣುಗೋಪಾಲ್ ಅವರು ಜನರಲ್ ಸೆಕ್ರೆಟರಿ. ಅವರಿಗೆ ಸಲಹೆ ನೀಡೋದಕ್ಕೆ ಎಲ್ಲಾ ಅಧಿಕಾರ ಇದೆ. ಏನಾದರೂ ಇದ್ದರೆ ನಾವು ಸಲಹೆ ಪಡೆದುಕೊಳ್ಳುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಮಾದಕವಸ್ತು ಹಾವಳಿ – ಸಿಎಂ ಎಚ್ಚೆತ್ತುಕೊಳ್ಳದಿದ್ರೆ ಉಡ್ತಾ ಕರ್ನಾಟಕ ಆಗಲಿದೆ: ಬೊಮ್ಮಾಯಿ

ನಾನು ಪರಿಶೀಲನೆ ಮಾಡಿದ್ದೇನೆ. ಅಲ್ಲಿ ಒಬ್ಬ ಹಲವರಿಂದ ಹಣ ಪಡೆದು ಶೆಡ್ ಹಾಕಿದ್ದಾನೆ. ಹೀಗಾಗಿ ನಾವು ನೋಟಿಸ್ ಕೊಟ್ಟಿದ್ದೇವೆ. ಅವರು ಲೋಕಲ್ ಜನ ಆಗಿದ್ರೆ ಬೇರೆ ಪರಿಹಾರ ನೀಡುವ ಬಗ್ಗೆ ಚರ್ಚೆ ನಡೆಯುತ್ತಿದೆ. ರಾಜೀವ್ ಗಾಂಧಿ ಹೌಸಿಂಗ್ ಸ್ಕೀಮ್‌ನಲ್ಲಿ ಪರಿಹಾರ ನೀಡುತ್ತೇವೆ. ವೇಣುಗೋಪಾಲ್ ಅವರು ಅಧಿಕಾರದಲ್ಲಿ ಹಸ್ತಕ್ಷೇಪ ಮಾಡುತ್ತಿಲ್ಲ. ಸಲಹೆ ನೀಡಿದ್ದಾರೆ. ಸಲಹೆ ನೀಡಲು ಅವರಿಗೆ ಹಕ್ಕಿದೆ. ಬಿಜೆಪಿ ನಾಯಕರು ಸಲಹೆ ನೀಡಿಲ್ವಾ? ಅನೇಕ ವಿಷಯದಲ್ಲಿ ಸಲಹೆ ನೀಡಿದ್ದಾರೆ ಅವರಿಗೆ ಹಕ್ಕಿದೆ ಎಂದು ಹೇಳಿದ್ದಾರೆ.

ಸಿಎಂ ಅವರಿಗೆ ಹೇಳಿದ್ದೇವೆ. ಕಾಂಗ್ರೆಸ್‌ಗೆ ಇತಿಹಾಸ ಇದೆ. ನಾವು ಜಾತಿ ಮೇಲೆ ರಾಜಕೀಯ ಮಾಡಿಲ್ಲ. ನಾನು ಪಟ್ಟಿ ತರಿಸಿದ್ದೇನೆ ಎಷ್ಟು ಜನರಿದ್ದಾರೆ ಅಂತ. ನಾಳೆ ಸಿಎಂ ಇದರ ಬಗ್ಗೆ ಮೀಟಿಂಗ್ ಕರೆದಿದ್ದಾರೆ. ನಾಳೆ (ಡಿ.29) ಸಭೆ ಮಾಡಿ ತೀರ್ಮಾನ ಮಾಡ್ತೀವಿ. ಬಿಜೆಪಿ ಅವರಿಗೆ ನಾನು ಉತ್ತರ ಕೊಡಲ್ಲ. ನ್ಯೂಸ್‌ನಲ್ಲಿ ಇರಬೇಕು ಅಂತ ಮಾತಾಡ್ತಾರೆ. ಅವರಲ್ಲಿಯೇ ಕಾಂಪಿಟೇಷನ್ ಇದೆ. ದಿನ ಒಂದೊಂದು ಹೇಳಿಕೆ ಕೊಡ್ತಾರೆ. ಬಿಜೆಪಿ ಅವರ ಯಾವುದೇ ಹೇಳಿಕೆಗೆ ನಾವು ಸೊಪ್ಪು ಹಾಕೊಲ್ಲ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಮೈಸೂರು | ಹುಣಸೂರಿನಲ್ಲಿ ಹಾಡಹಗಲೇ ಗನ್‌ ತೋರಿಸಿ ಚಿನ್ನದಂಗಡಿ ದರೋಡೆ

 

Share This Article