ಸಮಂತಾ, ನಾಗಚೈತನ್ಯ ಡಿವೋರ್ಸ್ ನಿಜ ಆಯ್ತು- 2ನೇ ಮದುವೆ ಬಗ್ಗೆ ಜ್ಯೋತಿಷಿ ಭವಿಷ್ಯ

Public TV
2 Min Read

ಟಿ ಸಮಂತಾ(Samantha)- ನಾಗಚೈತನ್ಯ ಅಕ್ಕಿನೇನಿ (Nagachaitanya) ಡಿವೋರ್ಸ್ (Divorce) ಆಗುತ್ತಾರೆ ಅಂತಾ ಕೆಲ ವರ್ಷಗಳ ಹಿಂದೆ ಖ್ಯಾತ ಜ್ಯೋತಿಷಿ ವೇಣು ಸ್ವಾಮಿ ಭವಿಷ್ಯ ನುಡಿದಿದ್ದರು. ಅದರಂತೆಯೇ ಆಯ್ತು, ಈಗ ಇವರಿಬ್ಬರಿಗೂ ವಿವಾಹ(Wedding) ಯೋಗವಿದೆ ಎಂದು ಹೇಳಿ 2ನೇ ಮದುವೆ ಬಗ್ಗೆ ಜ್ಯೋತಿಷಿ ಭವಿಷ್ಯ ನುಡಿದಿದ್ದಾರೆ. ಇದನ್ನೂ ಓದಿ:60ನೇ ವಸಂತಕ್ಕೆ ಕಾಲಿಟ್ಟ ಸುಮಲತಾ- ಸಂಭ್ರಮದಲ್ಲಿ ಭಾಗಿಯಾದ ಸ್ಟಾರ್ಸ್

ಟಾಲಿವುಡ್ (Tollywood) ಖ್ಯಾತ ಜ್ಯೋತಿಷಿ ವೇಣು ಸ್ವಾಮಿ ಅವರು ಸೆಲೆಬ್ರಿಟಿಗಳ ವೈಯಕ್ತಿಕ ಜೀವನ, ವೃತ್ತಿ ಜೀವನದ ಬಗ್ಗೆ ಭವಿಷ್ಯ ಹೇಳುತ್ತಿರುತ್ತಾರೆ. ಈಗ ಮತ್ತೆ ಸಮಂತಾ- ನಾಗಚೈತನ್ಯ ವೈವಾಹಿಕ ಬದುಕಿನ ಬಗ್ಗೆ ಮಾತನಾಡುವ ಮೂಲಕ ಸಂಚಲನ ಮೂಡಿಸಿದ್ದಾರೆ. ನಾಗಚೈತನ್ಯ- ಸಮಂತಾ ಡಿವೋರ್ಸ್ ಬಗ್ಗೆ ನಾನು ಮೊದಲು ಹೇಳಿದ್ದೆ. ನಾನು ಡಿವೋರ್ಸ್ (Divorce) ಬಗ್ಗೆ ಹೇಳಿದಾಗ ಅನೇಕರು ನನ್ನ ಟೀಕಿಸಿದ್ದರು. ನಾನು ಹೇಳಿದಂತೆ ಆಯ್ತು. ಇವರಿಬ್ಬರು ಮತ್ತೆ ಒಂದಾಗೋದು ಸಾಧ್ಯವೇ ಇಲ್ಲ. ಇವರಿಬ್ಬರಿಗೂ ಎರಡನೇ ವಿವಾಹದ ಯೋಗವಿದೆ. ವೃತ್ತಿ ವಿಚಾರದಲ್ಲಿ ಸಮಂತಾ ಸ್ಟ್ರಾಂಗ್ ಆಗಿದ್ದರು, ಹಾಗಾಗಿ ಹೀಗೆ ಆಯ್ತು ಎಂದು ವೇಣು ಸ್ವಾಮಿ ಭವಿಷ್ಯ ಹೇಳಿದ್ದಾರೆ.

ಜಾತಕ ಮ್ಯಾಚ್ ಆಗದೆ ಮದುವೆಯಾದ್ರೆ ಡಿವೋರ್ಸ್ ಆಗತ್ತೆ. ಜಾತಕ ಮ್ಯಾಚ್ ಆಗದೆ ಮದುವೆ ಆದರೆ ಏನೇನೋ ಸಮಸ್ಯೆ ಆಗುತ್ತದೆ. ನಾಗಚೈತನ್ಯ- ಸಮಂತಾ ವಿಚ್ಛೇದನದ ಬಗ್ಗೆ ಮಾತನಾಡಿದ್ವಿ. ಆದರೆ ಅವರ ಸಮಸ್ಯೆ ಅವರಿಗೆ ಗೊತ್ತಿರುತ್ತದೆ. ಅಭಿಷೇಕ್ ಬಚ್ಚನ್ ನೋಡಿ ಒಂದು ಕ್ಯಾಮೆರಾ ಬಂದ್ರೆ, ಐಶ್ವರ್ಯಾ ರೈ ನೋಡಿ 10 ಕ್ಯಾಮೆರಾ ಬರುತ್ತದೆ. ಸೆಲೆಬ್ರಿಟಿಗಳ ಸ್ಟೇಟಸ್ ಕಾಪಾಡಿಕೊಳ್ಳೋದು ತುಂಬ ಕಷ್ಟ. ಇಬ್ಬರೂ ಒಂದೇ ರೀತಿ ಸ್ಟೇಟಸ್ ಮೆಂಟೇನ್ ಮಾಡಿಕೊಳ್ಳೋದು ಕಷ್ಟ. ಹೀಗಾಗಿಯೇ ತಾರಾ ಜೋಡಿಗಳು ವಿಚ್ಛೇದನ ಪಡೆಯೋದು. ಇದನ್ನೂ ಓದಿ:Salaar: ಪ್ರಭಾಸ್‌ ಸಿನಿಮಾ ಬಗ್ಗೆ ಹೊರಬಿತ್ತು ಬಿಗ್‌ ಅಪ್‌ಡೇಟ್

ನಾಗಾರ್ಜುನ ಕುಟುಂಬದಲ್ಲಿ ತುಂಬ ದೋಷಗಳಿವೆ, ಹೀಗಾಗಿ ಅವರ ಕುಟುಂಬದಲ್ಲಿ ತುಂಬ ಡಿವೋರ್ಸ್ ಆಗುತ್ತಿದೆ. ನಾಗಾರ್ಜುನ ಅವರಿಗೆ ಲಕ್ಷ್ಮೀ ಎನ್ನುವವರ ಜೊತೆ ವಿಚ್ಛೇದನ ಆದ ಬಳಿಕ ಅವರು ಅಮಲಾ ಜೊತೆ ಮದುವೆಯಾದರು. ನಾಗಾರ್ಜುನ, ಅಮಲಾ ಮಗ ಅಖಿಲ್‌ಗೆ ನಿಶ್ಚಿತಾರ್ಥ ಮುರಿದು ಹೋಗಿದೆ. ಅಖಿಲ್ ಜೀವನದಲ್ಲಿ ಅವರ ತಾಯಿ ಮಧ್ಯಸ್ತಿಕೆ ವಹಿಸಿದ್ರೆ ಮದುವೆ ಆಗೋದು ಕಷ್ಟ, ನಾಗಾರ್ಜುನ ನಿರ್ಧಾರ ತಗೊಂಡರೆ ಸರಿ ಹೋಗತ್ತೆ ಎಂದಿದ್ದಾರೆ. ಒಟ್ನಲ್ಲಿ ಜ್ಯೋತಿಷಿ ವೇಣು ಸ್ವಾಮಿ ಆಡಿರುವ ಮಾತು ಸಖತ್‌ ವೈರಲ್‌ ಆಗಿದೆ. ಅನೇಕ ಚರ್ಚೆಗಳಿಗೆ ಗ್ರಾಸವಾಗಿದೆ.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್