ಬೆಂಗಳೂರು: ಆನ್‍ಲೈನ್ ಬೆಟ್ಟಿಂಗ್ ಕೇಸ್ ಸಂಬಂಧ ಇಡಿ ಕಸ್ಟಡಿಯಲ್ಲಿರುವ ಶಾಸಕ ವೀರೇಂದ್ರ ಪಪ್ಪಿ (Veerendra Puppy) ತನಿಖೆಗೆ ಯಾವುದೇ ಸಹಕಾರ ನೀಡ್ತಿಲ್ಲ ಎಂದು ತಿಳಿದುಬಂದಿದೆ.
ವಿಚಾರಣೆ ವೇಳೆ (ED Investigation) ಅಧಿಕಾರಿಗಳ ಪ್ರಶ್ನೆಗೆ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ಹಣಕಾಸು ವ್ಯವಹಾರದ ಡಿಟೇಲ್ಸ್ ಬಗ್ಗೆ ಕೇಳಿದ್ರೆ ಅಡಿಟರ್‌ನ ಕೇಳ್ಬೇಕು ಎನ್ನುತ್ತಿದ್ದಾರೆ. ಇದರಿಂದ ಇಡಿಗೆ ದೊಡ್ಡ ತಲೆನೋವಾಗಿದೆ. ಹಣಕಾಸು ವ್ಯವಹಾರ ಸಂಬಂಧ 17 ಬ್ಯಾಂಕ್‍ಗಳಿಗೆ ಇಡಿ ಪತ್ರ ಬರೆದಿದ್ದು, 5 ವರ್ಷಗಳ ಅಕೌಂಟ್ ಸ್ಟೇಟ್ಮೆಂಟ್ ಕೇಳಿದೆ. ಇದನ್ನೂ ಓದಿ: ಗೇಮಿಂಗ್ ಆ್ಯಪ್‌ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ – ವೀರೇಂದ್ರ ಪಪ್ಪಿ 4 ದಿನ ಇಡಿ ಕಸ್ಟಡಿಗೆ
ಶ್ರೀಲಂಕಾ, ನೇಪಾಳ, ಗೋವಾದಲ್ಲೂ ವಿರೇಂದ್ರ ಪಪ್ಪಿ ವ್ಯವಹಾರ ಸಂಬಂಧ ಇಡಿ ಶೋಧಕ್ಕೆ ಮುಂದಾಗಿದೆ. ಇಂಟರ್ ನ್ಯಾಷನಲ್ ಕೆಸಿನೋ ಕಾಡ್ರ್ಸ್‍ಗಳು ಪತ್ತೆಯಾಗಿರೋದ್ರಿಂದ ಅದರ ಬಗ್ಗೆಯೂ ತನಿಖೆಗೆ ಮುಂದಾಗಿದೆ. ಇಡಿ ದಾಳಿ ವೇಳೆ 17 ಬ್ಯಾಂಕ್ ಅಕೌಂಟ್ ಜೊತೆ 12 ಕೋಟಿ ರೂ. ನಗದು, 1 ಕೋಟಿ ಮೌಲ್ಯದ ವಿದೇಶಿ ಕರೆನ್ಸಿ ಪತ್ತೆಯಾಗಿತ್ತು. ಜೊತೆಗೆ 6 ಕೋಟಿ ಮೌಲ್ಯದ ಚಿನ್ನಾಭರಣ, 10 ಬೆಳ್ಳಿ ಆಭರಣ ಸೀಜ್ ಮಾಡಿತ್ತು. ಆಗಸ್ಟ್ 28ರಂದು ವೀರೇಂದ್ರ ಪಪ್ಪಿ ಇಡಿ ಕಸ್ಟಡಿ ಮುಗಿಯಲಿದೆ.
ಚಿತ್ರದುರ್ಗ ಜಿಲ್ಲೆಯಾದ್ಯಂತ 6, ಬೆಂಗಳೂರು ನಗರ 10, ಜೋಧ್‌ಪುರ 3, ಹುಬ್ಬಳ್ಳಿ 1, ಮುಂಬೈ 2 ಮತ್ತು ಗೋವಾದಲ್ಲಿರುವ ಪಪ್ಪೀಸ್ ಕ್ಯಾಸಿನೊ ಗೋಲ್ಡ್, ಓಷನ್ ರಿವರ್ಸ್ ಕ್ಯಾಸಿನೊ, ಪಪ್ಪೀಸ್ ಕ್ಯಾಸಿನೊ ಪ್ರೈಡ್, ಓಷನ್ 7 ಕ್ಯಾಸಿನೊ, ಬಿಗ್ ಡ್ಯಾಡಿ ಕ್ಯಾಸಿನೊಗಳ ಮೇಲೆ ದಾಳಿ ನಡೆಸಲಾಗಿತ್ತು. ವೀರೇಂದ್ರ ಪಪ್ಪಿ ಕಿಂಗ್ 567, ರಾಜ 567, ಪಪ್ಪೀಸ್ 003, ರತ್ನ ಗೇಮಿಂಗ್ ಇತ್ಯಾದಿಗಳ ಹೆಸರಿನಲ್ಲಿ ಹಲವಾರು ಆನ್‌ಲೈನ್ ಬೆಟ್ಟಿಂಗ್ ಸೈಟ್‌ಗಳನ್ನು ನಡೆಸುತ್ತಿದ್ದಾರೆ.
ವೀರೇಂದ್ರ ಪಪ್ಪಿ ಸಹೋದರ ಕೆಸಿ ತಿಪ್ಪೇಸ್ವಾಮಿ ದುಬೈನಿಂದ ಡೈಮಂಡ್ ಸಾಫ್ಟ್ಟೆಕ್, ಟಿಆರ್‌ಎಸ್ ಟೆಕ್ನಾಲಜೀಸ್, ಪ್ರೈಮ್ 9 ಟೆಕ್ನಾಲಜೀಸ್ ಎಂಬ 3 ವ್ಯವಹಾರ ಸಂಸ್ಥೆಗಳನ್ನು ನಿರ್ವಹಿಸುತ್ತಿದ್ದಾರೆ. ಈ ಘಟಕಗಳು ಕೆಸಿ ವೀರೇಂದ್ರ ಅವರ ಕಾಲ್ ಸೆಂಟರ್ ಸೇವೆಗಳು ಮತ್ತು ಗೇಮಿಂಗ್ ವ್ಯವಹಾರಕ್ಕೆ ಸಂಬಂಧಿಸಿವೆ ಎಂದು ಇ.ಡಿ ತಿಳಿಸಿದೆ. ಇದನ್ನೂ ಓದಿ: