ವೀರಶೈವ ಲಿಂಗಾಯತರು ಬಿಜೆಪಿಗೇ ಮತ ಹಾಕಿ ಗೆಲ್ಲಿಸಿ – ಬಿಎಸ್‌ವೈ ಮನವಿ

Public TV
1 Min Read

ಶಿವಮೊಗ್ಗ: 2ಎ ಮೀಸಲಾತಿ (2A Reservation) ಹೋರಾಟದಲ್ಲಿ ಪಂಚಮಸಾಲಿ, ಬಿಎಸ್‌ವೈ ನಿವೃತ್ತಿಯಿಂದ ವೀರಶೈವ ಲಿಂಗಾಯತರ ಮತ ಬಿಜೆಪಿಗೆ ಕೈತಪ್ಪಲಿದೆ ಎಂಬ ಆತಂಕ, ರಣತಂತ್ರದ ಮಧ್ಯೆ ಯಡಿಯೂರಪ್ಪ (BS Yediyurappa) ಹೇಳಿಕೆ ಕೊಟ್ಟಿದ್ದು, ಬಿಜೆಪಿ ಗೆಲ್ಲಿಸುವಂತೆ ಮನವಿ ಮಾಡಿದ್ದಾರೆ.

ಶಿವಮೊಗ್ಗದಲ್ಲಿಂದು (Shivamogga) ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನನಗೆ 80 ವರ್ಷವಾದ ಹಿನ್ನೆಲೆಯಲ್ಲಿ ಮತ್ತೊಬ್ಬರಿಗೆ ಅವಕಾಶ ಸಿಗಬೇಕೆಂಬ ನಿಟ್ಟಿನಲ್ಲಿ ಈ ತೀರ್ಮಾನ ಮಾಡಿದ್ದೇನೆ. ಇದು ಹೊರತುಪಡಿಸಿದರೆ, ಬೇರೇನೂ ಕಾರಣವಿಲ್ಲ. ನಾನು ಚುನಾವಣೆಗೆ (Election) ನಿಲ್ಲದೇ ಇರಬಹುದು. ಆದರೆ ಸಕ್ರಿಯ ರಾಜಕಾರಣದಲ್ಲಿದ್ದು, ರಾಜ್ಯಾದ್ಯಂತ ಸುತ್ತಾಡಿ ಪಕ್ಷವನ್ನು ಅಧಿಕಾರಕ್ಕೆ ತರುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದ್ದಾರೆ.

ಜನರು ಅಪಾರ್ಥ ಮಾಡಿಕೊಳ್ಳದೇ ಮೊದಲಿನಂತೆ ಬಿಜೆಪಿಗೆ ಬೆಂಬಲ ನೀಡಿ ಗೆಲ್ಲಿಸಬೇಕು. ವೀರಶೈವ ಲಿಂಗಾಯತ ಬಂಧುಗಳು ಬಿಜೆಪಿಗೇ ಮತ ಹಾಕಿ ಗೆಲ್ಲಿಸಬೇಕು ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಕುವೆಂಪು ನಾಡಗೀತೆಯಲ್ಲೇ `ಏಕ್ ಭಾರತ್ ಶ್ರೇಷ್ಠ ಭಾರತ್’ ಪರಿಕಲ್ಪನೆಯಿದೆ – ಮೋದಿ ಕನ್ನಡ ಗುಣಗಾನ

ಇದುವರೆಗೂ ನನಗೆ ಎಲ್ಲಾ ಅವಕಾಶಗಳನ್ನ ಪ್ರಧಾನಿ ಮೋದಿ (Narendra Modi), ಅಮಿತ್ ಶಾ (Amit Shah) ಕೊಟ್ಟಿದ್ದಾರೆ. ಇದೇ ಫೆಬ್ರವರಿ 27 ರಂದು ಪ್ರಧಾನಿ ಮೋದಿ ಶಿವಮೊಗ್ಗ ಬಂದು, ಏರ್‌ಪೋರ್ಟ್ ಉದ್ಘಾಟನೆ ಮಾಡಲಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: BJP ಕಚೇರಿಗೆ ತೆರಳುತ್ತಿದ್ದ ಕೇಂದ್ರ ಸಚಿವರ ಬೆಂಗಾವಲು ವಾಹನಕ್ಕೆ ಕಲ್ಲು ತೂರಾಟ – ಪರಿಸ್ಥಿತಿ ಉದ್ವಿಗ್ನ

Share This Article
2 Comments

Leave a Reply

Your email address will not be published. Required fields are marked *