ಸತ್ತು 14 ವರ್ಷಗಳೇ ಕಳೆದ್ರೂ ಚುನಾವಣೆಯಲ್ಲಿ ಇಂದಿಗೂ ವೀರಪ್ಪನ್ ಹೆಸರು ಬಳಕೆ

Public TV
1 Min Read

ಚಾಮರಾಜನಗರ: ನರಹಂತಕ ವೀರಪ್ಪನ್ ಸತ್ತು 14 ವರ್ಷಗಳು ಉರುಳಿದ್ರೂ ಆತನ ಹೆಸರು ಇಂದಿಗೂ ಸಹ ಚುನಾವಣೆ ಸಂದರ್ಭದಲ್ಲಿ ಪ್ರಚಲಿತಕ್ಕೆ ಬರುತ್ತಿದ್ದು, ಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ತನ್ನ ಪುತ್ರನನ್ನು ಗೆಲ್ಲಿಸಲು ತಾಯಿಯೊಬ್ಬರು ವೀರಪ್ಪನ್ ಹೆಸರನ್ನು ಎಳೆದು ತರುತ್ತಿದ್ದಾರೆ.

ಕಾಡುಗಳ್ಳ ವೀರಪ್ಪನ್ ಹತ್ಯೆ ನಡೆದು 14 ವರ್ಷ ಕಳೆದಿದೆ. ಆದರೂ ವೀರಪ್ಪನ್ ಹೆಸರಲ್ಲಿ ಚಾಮರಾಜನಗರದ ಹನೂರಿನಲ್ಲಿ ಚುನಾವಣಾ ರಾಜಕೀಯ ನಡೆಯುತ್ತಿದೆ. ಬಿಜೆಪಿ ಅಭ್ಯರ್ಥಿ ಪ್ರೀತಂ ಪರ ಮಾಜಿ ಶಾಸಕಿ ಪರಿಮಳಾ ನಾಗಪ್ಪ ಅವರು ವೀರಪ್ಪನ್ ದಾಳ ಉರುಳಿಸಿದ್ದಾರೆ. ವೀರಪ್ಪನ್ ಇದ್ದಾಗ ಹೆದರಿಸಿ ಕಾಂಗ್ರೆಸ್‍ಗೆ ವೋಟ್ ಹಾಕಿಸುತ್ತಿದ್ದ. ಈಗ ಅವನಿಲ್ಲ, ನನ್ ಮಗನಿಗೆ ಮತ ನೀಡಿ ಗೆಲ್ಲಿಸಿ ಅಂತಾ ಹೋದಲ್ಲಿ ಬಂದಲ್ಲಿ ಮನವಿ ಮಾಡುತ್ತಿದ್ದಾರೆ.

ಯಾವಗಾಲೂ ಕಾಡಲ್ಲೆ ಇರುತ್ತಿದ್ದ ವೀರಪ್ಪನ್ ಚುನಾವಣೆ ಸಮಯದಲ್ಲಿ ಮಾತ್ರ ಕಾಡಂಚಿನ ಗ್ರಾಮಗಳಲ್ಲಿ ಕಾಣಿಸಿಕೊಳ್ಳೂತ್ತಿದ್ದನು. ಆಗಿನ ಕಾಂಗ್ರೆಸ್ ಅಭ್ಯರ್ಥಿ ರಾಜೂಗೌಡರ ಪರ ಪ್ರಚಾರ ಮಾಡುತ್ತಿದ್ದನು ಎಂಬುದನ್ನು ಜನ ಈಗಲೂ ಮರೆತಿಲ್ಲ ಎಂದು ಸ್ಥಳಿಯ ಬಸವರಾಜು ಹೇಳಿದ್ದಾರೆ.

ವೀರಪ್ಪನ್ ಮೃತಪಟ್ಟು ದಶಕವೇ ಆದರೂ ಆತನನ್ನ ಚುನಾವಣೆ ರಾಜಕೀಯಕ್ಕೆ ಎಳೆದು ತರೋದು ನಿಂತಿಲ್ಲ.

Share This Article
Leave a Comment

Leave a Reply

Your email address will not be published. Required fields are marked *