ಪುರುಷರಿಗೂ ಪ್ರಯಾಣ ಉಚಿತ ಮಾಡಿ: ವಾಟಾಳ್ ಆಗ್ರಹ

Public TV
1 Min Read

ಬೆಂಗಳೂರು: ರಾಜ್ಯ ಸರ್ಕಾರ ಮಹಿಳೆಯರಿಗೆ ಮಾತ್ರ ಗೃಹಲಕ್ಷ್ಮೀ (Gruhalakshmi) ಯೋಜನೆ ನೀಡಿ, ಮನೆ ಯಜಮಾನರು ತಲೆ ತಗ್ಗಿಸುವಂತೆ ಮಾಡಿದೆ. ಈ ಮೂಲಕ ಮನೆಯ ಯಜಮಾನನಿಗೆ ಅವಮಾನ ಮಾಡುತ್ತಿದೆ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ (Vatal Nagaraj) ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಗ್ಯಾರಂಟಿಗಳು ಮಹಿಳೆಯರ ಕಡೆ ಮಾತ್ರ ಹೋಗಬಾರದು, ಪುರುಷರ ಕಡೆಗೂ ಅದು ಬರಬೇಕು. ಪುರುಷರಿಗೂ ಬಸ್ ಪ್ರಯಾಣ ಉಚಿತ ಮಾಡಿ. ಗೃಹಲಕ್ಷ್ಮೀ ಯೋಜನೆಯಂತೆ ಪುರುಷರಿಗೂ ಹಣ ನೀಡಬೇಕು. ಮಹಿಳೆಯರಿಗೆ ಈ ಯೋಜನೆಗಳನ್ನು ನೀಡಿರುವುದು ನನಗೆ ಖುಷಿ ಕೊಟ್ಟಿದೆ. ಹಾಗೆಯೇ ಇದನ್ನು ಪುರುಷರಿಗೂ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಜನ ಸಂಕಷ್ಟದಲ್ಲಿದ್ದರೆ, ನೀರೋ ಕ್ರಿಕೆಟ್ ನೋಡ್ತಿದ್ದ: ಸಿಎಂ ವಿರುದ್ಧ ಹೆಚ್‍ಡಿಕೆ ಕಿಡಿ

ಮೈಸೂರಿನ ಸುಂದರವಾದ ದಸರಾ ಉತ್ಸವವನ್ನು ವಿನೂತನ ಚಳುವಳಿಗೆ ಉಪಯೋಗಿಸುತ್ತಿದ್ದೇವೆ. ದಸರಾಗೆ ಬೇರೆ ಬೇರೆ ರಾಜ್ಯಗಳಿಂದ ಸಾಕಷ್ಟು ಜನ ಬರುತ್ತಾರೆ. ಕರ್ನಾಟಕದ ಮೂಲೆ ಮೂಲೆಯಿಂದ ಮಹಿಳೆಯರು ಪುರುಷರು ಅಧಿಕವಾಗಿ ಬರುತ್ತಾರೆ. ಈ ಸಂದರ್ಭವನ್ನು ಬಳಸಿಕೊಂಡು ನಾನು ಸರ್ಕಾರದ ಮುಂದೆ ಈ ವಿಚಾರವನ್ನು ಇಡುತ್ತಿದ್ದೇನೆ ಎಂದಿದ್ದಾರೆ.

ಪ್ರತಿಭಟನೆಗೆ ನೇರವಾಗಿ ಅವರು ಬಿಎಂಟಿಸಿ (BMTC) ಬಸ್ ನಿಲ್ದಾಣದ ಒಳಗೆ ಕಾರಿನಲ್ಲಿ ಬಂದಿದ್ದಾರೆ. ಖಾಸಗಿ ವಾಹನಗಳಿಗೆ ಪ್ರವೇಶ ನಿಷೇಧವಿದ್ದರೂ ಲೆಕ್ಕಿಸದೇ ಒಳಗೆ ಬಂದು ಪ್ರತಿಭಟನೆ ನಡೆಸಿದ್ದಾರೆ. ಇದನ್ನೂ ಓದಿ: ನವರಾತ್ರಿ ಹಬ್ಬ – ಆಯುಧ ಪೂಜೆ ಮಾಡೋದು ಯಾಕೆ? ಪುರಾಣ ಕಥೆ ಏನು?

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್