ಮೆಗಾಸ್ಟಾರ್ ಕುಟುಂಬದಲ್ಲಿ ಹೊಸ ಸ್ಟಾರ್ ಜನನ

Public TV
1 Min Read

ಟಾಲಿವುಡ್ ಸಿನಿಮಾ ಇಂಡಸ್ಟ್ರಿಗೆ ಮೆಗಾಸ್ಟಾರ್ ಕುಟುಂಬ ಡಜನ್‌ಗೂ ಹೆಚ್ಚು ಕಲಾವಿದರನ್ನ ಕೊಟ್ಟಿದೆ. ಹೀಗಾಗಿ, ಈ ಕುಟುಂಬದಲ್ಲಿ ಜನಿಸುವ ಪ್ರತಿ ಮಗವೂ ಭವಿಷ್ಯದ ಸ್ಟಾರ್ ಎಂದೇ ಊಹಿಸಲಾಗುತ್ತೆ. ಇದೀಗ ಕುಟುಂಬದಲ್ಲಿ ಸಂತಸ ಮನೆ ಮಾಡಿದ್ದು, ಮೆಗಸ್ಟಾರ್ ಚಿರಂಜೀವಿ (Chiranjeevi) ಮತ್ತೆ ತಾತ ಆಗಿದ್ದಾರೆ. ಚಿರಂಜೀವಿ ಸಹೋದರನ ಪುತ್ರನಿಗೆ ಗಂಡು ಮಗು ಜನಿಸಿದೆ. ಈ ಖುಷಿಯ ಸುದ್ದಿಯನ್ನು ಚಿರಂಜೀವಿ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡು ತಮಗಾದ ಸಂತಸ ವ್ಯಕ್ತಪಡಿಸಿದ್ದಾರೆ.

ಮೆಗಾಸ್ಟಾರ್‌ ಪುತ್ರಿಯರಿಗೂ ಹೆಣ್ಣುಮಕ್ಕಳು, ಹಾಗೂ ರಾಮ್‌ಚರಣ್‌ಗೂ ಹೆಣ್ಣು ಮಗುವಿದೆ. ಆದರೆ ಇದೀಗ ಕುಟುಂಬದಲ್ಲಿ ಓರ್ವ ಗಂಡು ಮಗು ಜನಿಸಿದೆ. ಮೆಗಾಸ್ಟಾರ್ ಸಹೋದರ ನಾಗ್‌ಬಾಬು ಪುತ್ರ ನಟ ವರುಣ್ ತೇಜ್ ಹಾಗೂ ಲಾವಣ್ಯ ತ್ರಿಪಾಠಿ ದಂಪತಿಗೆ ಇದೀಗ ಗಂಡು ಮಗು ಜನಿಸಿದೆ. ಇದನ್ನೂ ಓದಿ: ಕೋರ್ಟ್ ಆದೇಶ ಬಳಿಕ ದರ್ಶನ್‌ಗೆ ರಿಲ್ಯಾಕ್ಸ್ – ದಿಂಬು, ಚಾಪೆ ಜೊತೆಗೆ ಎರಡು ಜಮ್ಖಾನ ನೀಡಿದ ಅಧಿಕಾರಿಗಳು

ಈ ಸುದ್ದಿಯನ್ನು ಮೊದಲು ಇನ್‌ಸ್ಟಾಗ್ರಾಮ್‌ನಲ್ಲಿ ವರುಣ್ ತೇಜ್ ಸಂತಸ ಹಂಚಿಕೊಡಿದ್ದರು. ಇದೀಗ ಕುಟುಂಬಕ್ಕೆ ಆಗಮಿಸಿರುವ ಹೊಸ ಪುಟ್ಟ ಸದಸ್ಯನ ಕುರಿತು ಮೆಗಾಸ್ಟಾರ್ ಮನಬಿಚ್ಚಿ ಮಾತನಾಡಿದ್ದಾರೆ. ‘ನಮ್ಮ ಜಗತ್ತಿಗೆ ಆಗಮಿಸಿರುವ ಪುಟಾಣಿಗೆ ಸ್ವಾಗತ, ಕೋನಿಡೇಲ ಕುಟುಂಬದ ಹೊಸ ಸದಸ್ಯ ನಿನ್ನ ಮೇಲೆ ನಮ್ಮ ಪ್ರೀತಿ ಆಶೀರ್ವಾದ ಸದಾ ಇರುತ್ತೆ’ ಎಂದು ಹೇಳುವ ಮೂಲಕ ಮಗುವನ್ನು ಎತ್ತಿಕೊಂಡಿರುವ ಫೋಟೋ ಪೋಸ್ಟ್ ಮಾಡಿದ್ದಾರೆ.

Share This Article