ಹಗಲಿನಲ್ಲಿ ಚುನಾವಣಾ ರ‍್ಯಾಲಿ, ರಾತ್ರಿ ಕರ್ಫ್ಯೂ: ವರುಣ್ ಗಾಂಧಿ ವ್ಯಂಗ್ಯ

Public TV
2 Min Read

ನವದೆಹಲಿ: ದೇಶದಲ್ಲಿ ಓಮಿಕ್ರಾನ್ ಭೀತಿಯ ಹಿನ್ನೆಲೆಯಲ್ಲಿ ನೈಟ್ ಕರ್ಫ್ಯೂ ಘೋಷಿಸಿ, ಹಗಲು ವೇಳೆಯಲ್ಲಿ ಚುನಾವಣಾ ಜಾಥಾ ನಡೆಸುವ ತಮ್ಮದೇ ಪಕ್ಷದ ಸರ್ಕಾರದ ವಿರುದ್ಧ ಬಿಜೆಪಿ ಸಂಸದ ವರುಣ್‌ಗಾಂಧಿ ವ್ಯಂಗ್ಯವಾಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಉತ್ತರ ಪ್ರದೇಶದಲ್ಲಿರುವ ಸೀಮಿತ ವೈದ್ಯಕೀಯ ಸೌಲಭ್ಯಗಳನ್ನು ಗಮನಿಸಿ, ಈ ಸಮಯದಲ್ಲಿ ಓಮಿಕ್ರಾನ್ ಸ್ಫೋಟ ತಡೆಯಬೇಕೆ? ಅಥವಾ ನಮ್ಮ ಚುನಾವಣಾ ಶಕ್ತಿಯನ್ನು ತೋರಿಸಬೇಕೆ? ಎಂಬುದನ್ನು ಜನರೇ ನಿರ್ಧರಿಸಬೇಕು ಎಂದಿದ್ದಾರೆ. ಬಿಜೆಪಿ, ಕಾಂಗ್ರೆಸ್, ಸಮಾಜವಾದಿ ಪಕ್ಷಗಳು ತಮ್ಮ ಸಾಮರ್ಥ್ಯವನ್ನು ತೋರಿಸಲು ಬೃಹತ್ ರ‍್ಯಾಲಿ ಆಯೋಜಿಸುತ್ತಿರುವುದು ಕಳವಳಕ್ಕೆ ಕಾರಣವಾಗಿದೆ ಎಂದು ಹೇಳಿದ್ದಾರೆ.

ಕೊರೊನಾ ಹೆಚ್ಚಳವಾಗುತ್ತಿದ್ದರೂ ಚುನಾವಣೆ ನಡೆಯುವ ಯಾವ ರಾಜ್ಯಗಳು ಮುನ್ನೆಚ್ಚರಿಕೆಯನ್ನು ತೆಗೆದುಕೊಂಡಿಲ್ಲ. ಯಾವುದೇ ಸಾರ್ವಜನಿಕ ರ‍್ಯಾಲಿಗಳಿಗೆ ನಿರ್ಬಂಧವನ್ನು ಹೇರಿಲ್ಲ. ಆದರೆ ನೈಟ್ ಕರ್ಫ್ಯೂವನ್ನು ಜಾರಿ ತಂದಿರುವುದು ಸಮಂಜಸವಾದ ನಿರ್ಧರವೇ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ರನ್ನು ಪ್ರಶ್ನಿಸಿದ್ದಾರೆ.

ರಾತ್ರಿ ಕರ್ಫ್ಯೂ ಮಾಡಿ ಹಗಲಿನಲ್ಲಿ ಲಕ್ಷಾಂತರ ಜನರನ್ನು ಜಾಥಾಕ್ಕೆ ಕರೆಯುವುದು ಸಾಮಾನ್ಯರ ಗ್ರಹಿಕೆಗೂ ಮೀರಿದೆ ಎಂದು ವರುಣ್ ಗಾಂಧಿ ಟ್ವೀಟ್ ಮಾಡಿದ್ದಾರೆ. ಉತ್ತರ ಪ್ರದೇಶದ ಸ್ಥಿತಿಯನ್ನು ನೋಡಿದರೇ ಅಲ್ಲಿಯ ಸರ್ಕಾರಕ್ಕೆ ಓಮಿಕ್ರಾನ್ ತಡೆಯುವುದಕ್ಕಿಂತ ಚುನಾವಣಾ ಬಲವನ್ನು ತೋರಿಸುವುದೇ ಅವರ ಪ್ರಮುಖ ಆದ್ಯತೆಯಾಗಿದೆ ಎಂದು ನಾವು ತಿಳಿಯಬೇಕು ಎಂದು ಹರಿಹಾಯ್ದಿದ್ದಾರೆ.  ಇದನ್ನೂ ಓದಿ: ಓಮಿಕ್ರಾನ್ ಭೀತಿ – ಡಿ.30ರಿಂದ ಕೇರಳದಲ್ಲಿ ನೈಟ್ ಕರ್ಫ್ಯೂ

ಜನ ಸಂಚಾರವೂ ರಾತ್ರಿ ಸಮಯಕ್ಕಿಂತ ಹಗಲಿನಲ್ಲಿ ಹೆಚ್ಚಿರುತ್ತದೆ. ಇದರಿಂದ ಕೊರೊನಾ ಹೆಚ್ಚಳವಾಗುತ್ತದೆ. ಅದರಿಂದಾಗಿ ಹಗಲಿನಲ್ಲಿ ಹೆಚ್ಚು ನಿರ್ಬಂಧಗಳನ್ನು ಹಾಕಬೇಕು. ಕೊರೊನಾ ತಡೆಗೆ ಜನರನ್ನು ಮನೆಯಲ್ಲಿರುವಂತೆ ಪ್ರೇರೆಪಿಸಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಮನೆಯಲ್ಲಿ ಬೆಂಕಿ ಹಚ್ಚಿಕೊಂಡು ವೈದ್ಯ ಆತ್ಮಹತ್ಯೆ

ವರುಣ್ ಗಾಂಧಿ ಅವರು ತಮ್ಮದೇ ಪಕ್ಷದ ವಿರುದ್ಧ ಕಿಡಿಕಾರುತ್ತಿರುವುದು ಇದೇ ಮೊದಲೇನಲ್ಲ. ಹಿಂದೆ ಅನೇಕ ಬಾರಿ ಈ ರೀತಿಯ ಹೇಳಿಕೆಗಳನ್ನು ನೀಡಿದ್ದರು. ಇತ್ತೀಚೆಗಷ್ಟೇ ಬಿಜೆಪಿ ಸಂಸದ ವರುಣ್ ಗಾಂಧಿ ಅವರು, ರೈತ ಆಂದೋಲನದ ಸಂದರ್ಭದಲ್ಲಿ ಹುತಾತ್ಮರಾದ ಪ್ರತಿಭಟನಾಕಾರರಿಗೆ ಪರಿಹಾರ ನೀಡುವಂತೆ ಪ್ರಧಾನಿಗೆ ಪತ್ರ ಬರೆದಿದ್ದಾರೆ. ಇದನ್ನೂ ಓದಿ: ಸ್ಥಳೀಯಾಡಳಿತಗಳ ಚುನಾವಣೆ ಯಶಸ್ವಿ – ಡಿ.30ಕ್ಕೆ ಫಲಿತಾಂಶ

Share This Article
Leave a Comment

Leave a Reply

Your email address will not be published. Required fields are marked *