ಮೃಣಾಲ್ ಠಾಕೂರ್ ಫ್ಯಾನ್ಸ್‌ಗೆ ಡಬಲ್ ಧಮಾಕ!

Public TV
1 Min Read

ಬಾಲಿವುಡ್ ಬೆಡಗಿ ಮೃಣಾಲ್ ಠಾಕೂರ್ (Mrunal Thakur) ಹೊಸ ಸಿನಿಮಾಗಳ ಅಪ್‌ಡೇಟ್‌ಗಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ಗುಡ್‌ನ್ಯೂಸ್ ಸಿಕ್ಕಿದೆ. ‘ಸೀತಾ ರಾಮಂ’ ನಟಿಯ ಹೊಸ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಆಗಿದೆ.‌ ಇದನ್ನೂ ಓದಿ:‘ಸಿಂಧೂರ’ ಆಯ್ತು, ಈಗ ಭಗವದ್ಗೀತೆ ಶ್ಲೋಕ- ಭಾರತೀಯ ಸಂಸ್ಕೃತಿ ಪ್ರದರ್ಶಿಸಿದ ಐಶ್ವರ್ಯಾ ರೈ!

‘ಫ್ಯಾಮಿಲಿ ಸ್ಟಾರ್’ ಚಿತ್ರದ ಬಳಿಕ ಯಾವೆಲ್ಲಾ ಚಿತ್ರದಲ್ಲಿ ನಟಿಸ್ತಿದ್ದಾರೆ ಎಂಬುದರ ಬಗ್ಗೆ ನಟಿ ಕಡೆಯಿಂದ ಅಪ್‌ಡೇಟ್ ಸಿಕ್ಕಿರಲಿಲ್ಲ. ಇದೀಗ ಹೊಸ ಸಿನಿಮಾದ ರಿಲೀಸ್ ಡೇಟ್ ಸಮೇತ ಸಿಹಿಸುದ್ದಿ ಸಿಕ್ಕಿದೆ. ವರುಣ್ ಧವನ್, ಪೂಜಾ ಹೆಗ್ಡೆ ಜೊತೆ ನಟಿಸಿರುವ ‘ಹೈ ಜವಾನಿ ತೋ ಇಷ್ಕ್ ಹೋನಾ ಹೈ’ ಚಿತ್ರವು ಮುಂದಿನ ವರ್ಷ ಏ.10ರಂದು ರಿಲೀಸ್ ಮಾಡೋದಾಗಿ ಚಿತ್ರತಂಡ ತಿಳಿಸಿದೆ. ಇದನ್ನೂ ಓದಿ: ಬೇಕಂತಲೇ ಪಿತೂರಿ ಮಾಡಲಾಗಿದೆ, ನನ್ನ ಗಂಡನಿಗೆ ನ್ಯಾಯ ಸಿಗೋವರೆಗೂ ಹೋರಾಡ್ತೀನಿ: ಮಡೆನೂರು ಮನು ಪತ್ನಿ

 

View this post on Instagram

 

A post shared by Tips Films (@tipsfilmsofficial)

ಡಬಲ್ ಧಮಾಕ ಎಂಬಂತೆ, ಅಡವಿ ಶೇಷ್ ಜೊತೆ ಮೃಣಾಲ್ ನಟಿಸಿರುವ ‘ಡಕಾಯಿಟ್’ ಗ್ಲಿಂಪ್ಲ್ ಅನ್ನು ಮೇ 26ರಂದು ರಿಲೀಸ್ ಮಾಡೋದಾಗಿ ಚಿತ್ರತಂಡ ಅನೌನ್ ಮಾಡಿದೆ. ಈ ವರ್ಷದ ಅಂತ್ಯದಲ್ಲಿ ಚಿತ್ರ ರಿಲೀಸ್ ಮಾಡುವ ಪ್ಲ್ಯಾನ್ ಚಿತ್ರತಂಡಕ್ಕಿದೆ. ಸದ್ಯದಲ್ಲೇ ಈ ಬಗ್ಗೆ ಹೆಚ್ಚಿನ ಮಾಹಿತಿ ಸಿಗಲಿದೆ.

ಸನ್ ಆಫ್ ಸರ್ದಾರ್ 2, ತೂಮ್ ಹೋ ತೋ, ಪೂಜಾ ಮೇರಿ ಜಾನ್ ಸಿನಿಮಾಗಳು ಮೃಣಾಲ್ ಕೈಯಲ್ಲಿವೆ. ಒಟ್ಟು 5 ಸಿನಿಮಾಗಳಲ್ಲಿ ನಟಿ ತೊಡಗಿಸಿಕೊಂಡಿದ್ದಾರೆ.

Share This Article