ಮತ್ತೆ ಒಂದಾದ ‌’ಬಾವಲ್‌’ ಜೋಡಿ- ಜಾನ್ವಿ ಜೊತೆ ವರುಣ್‌ ಧವನ್‌ ರೊಮ್ಯಾನ್ಸ್

Public TV
1 Min Read

ಬಾಲಿವುಡ್‌ನ ಹಾಟ್ ಬ್ಯೂಟಿ ಜಾನ್ವಿ ಕಪೂರ್ (Janhvi Kapoor) ಜೊತೆ ವರುಣ್ ಧವನ್ (Varun Dhawan) ಹೊಸ ಸಿನಿಮಾಗಾಗಿ ಕೈಜೋಡಿಸುತ್ತಿದ್ದಾರೆ. ‘ಬಾವಲ್’ ಬಳಿಕ ಮತ್ತೆ ಶ್ರೀದೇವಿ ಪುತ್ರಿ ಜೊತೆ ವರುಣ್ ಧವನ್ ರೊಮ್ಯಾನ್ಸ್ ಮಾಡಲಿದ್ದಾರೆ. ಸಿನಿಮಾ ತಯಾರಿ ಕುರಿತು ಮತ್ತು ಸ್ಕ್ರಿಪ್ಟ್‌ ಕೈಗೆ ಸಿಕ್ಕಿರುವ ಅಪ್‌ಡೇಟ್‌ ಅನ್ನು ವರುಣ್‌ ಶೇರ್‌ ಮಾಡಿದ್ದಾರೆ. ಈ ಸಿನಿಮಾಗಾಗಿ ಎದುರು ನೋಡ್ತಿರೋದಾಗಿ ಸಾಮಾಜಿಕ ಜಾಲತಾಣದಲ್ಲಿ ನಟ ಸಂತಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:ಆಡಿ Q7 ಐಷಾರಾಮಿ ಕಾರು ಖರೀದಿಸಿದ ಅಶ್ವಿನಿ ಪುನೀತ್ ರಾಜ್‌ಕುಮಾರ್

‘ಸನ್ನಿ ಸಂಸಕ್ರಿ ಕಿ ತುಳಸಿ ಕುಮಾರಿ’ (Sunny Sansakri Ki Tulsi Kumari) ಸಿನಿಮಾದಲ್ಲಿ ವರುಣ್ ಧವನ್ ಮತ್ತು ಜಾನ್ವಿ ಕಪೂರ್ ಜೋಡಿಯಾಗಿ ಕಾಣಿಸಿಕೊಳ್ತಿದ್ದಾರೆ. ಸನ್ನಿ ಸಂಸಕ್ರಿ ಆಗಿ ವರುಣ್ ಧವನ್ ನಟಿಸಿದ್ರೆ, ಜಾನ್ವಿ ಕಪೂರ್ ತುಳಸಿ ಕುಮಾರಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಲವ್ ಸ್ಟೋರಿ ಸಿನಿಮಾಗೆ ಶಶಾಂಕ್ ಖೈತಾನ್ ನಿರ್ದೇಶನ ಮಾಡಲಿದ್ದಾರೆ.

 

View this post on Instagram

 

A post shared by Dharma Productions (@dharmamovies)

ಜ್ಯೂ.ಎನ್‌ಟಿಆರ್ ಮತ್ತು ರಾಮ್ ಚರಣ್ ಜೊತೆಗಿನ ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿಯಿರುವ ಜಾನ್ವಿ ಸದ್ಯದಲ್ಲೇ ವರುಣ್ ಧವನ್ ಜೊತೆಗಿನ ಸಿನಿಮಾ ತಂಡಕ್ಕೆ ಸೇರಿಕೊಳ್ಳಲಿದ್ದಾರೆ. ಈ ಸಿನಿಮಾವನ್ನು ಕರಣ್ ಜೋಹರ್ ನಿರ್ಮಾಣ ಮಾಡಲಿದ್ದಾರೆ. ಮುಂದಿನ ವರ್ಷ ಏ.18ಕ್ಕೆ ಈ ಸಿನಿಮಾ ರಿಲೀಸ್ ಆಗಲಿದೆ.

ಕಳೆದ ವರ್ಷ ‘ಬಾವಲ್’ ಸಿನಿಮಾದಲ್ಲಿ ವರುಣ್- ಜಾನ್ವಿ ಜೋಡಿಯಾಗಿ ನಟಿಸಿದ್ದರು. ಈ ಸಿನಿಮಾಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ಮತ್ತೆ ಹೊಸ ಸಿನಿಮಾ ಒಂದಾಗಿರುವ ಈ ಜೋಡಿಯನ್ನು ಕಣ್ತುಂಬಿಕೊಳ್ಳಲು ಫ್ಯಾನ್ಸ್ ಎದುರು ನೋಡ್ತಿದ್ದಾರೆ.

Share This Article