ಬಿಸಿಲಿನಿಂದ ಬೇಸತ್ತ ಕೊಡಗಿನ ಜನತೆಗೆ ತಂಪೆರೆದ ವರುಣ

Public TV
1 Min Read

ಮಡಿಕೇರಿ: ಬಿಸಿಲಿನ ತಾಪದಿಂದ ತತ್ತರಿಸಿ ಹೋಗಿದ್ದ ತಾಲೂಕಿನ (Madikeri) ಜನರಿಗೆ ಮಳೆರಾಯ (Rain) ತಂಪೆರೆದಿದ್ದಾನೆ. ಇಲ್ಲಿನ ಮೂರ್ನಾಡು ಹಾಗೂ ಕಿಗ್ಗಲೂ ಗ್ರಾಮದಲ್ಲಿ ಧಿಡೀರ್ ಮಳೆಯಾಗಿದ್ದು ಗ್ರಾಮಗಳ ಸುತ್ತಮುತ್ತ ಕೂಲ್ ಕೂಲ್ ವಾತಾವರಣ ಸೃಷ್ಟಿಯಾಗಿದೆ.

ಈ ವರ್ಷ ವಾಡಿಕೆಗಿಂತ ಕಡಿಮೆ ಮಳೆಯಾದ ಪರಿಣಾಮ ಕೊಡಗಿನ ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಾಗಿತ್ತು. ಅಲ್ಲದೇ ಪ್ರಸ್ತುತ ಜಿಲ್ಲೆಯ ಹಲವೆಡೆಯ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಎದುರಾಗಿದೆ. ಕಾಡು ಪ್ರಾಣಿಗಳಿಗೂ ನೀರಿಲ್ಲದೇ ನಾಡಿನತ್ತ ಲಗ್ಗೆ ಇಡುತ್ತಿವೆ. ಇಂತಹ ಹೊತ್ತಿನಲ್ಲಿ ಮಳೆಯಾಗಿದ್ದು ಜನ ಸಂಭ್ರಮಿಸಿದ್ದಾರೆ. ಇದನ್ನೂ ಓದಿ: ರಾಜವಂಶಸ್ಥ ಯದುವೀರ್ ಸ್ಪರ್ಧಿಸಿದ್ರೆ ಕಾಂಗ್ರೆಸ್‌ಗೆ ಲಾಭನಾ? ನಷ್ಟನಾ?

ಮಳೆ ಇಲ್ಲದೇ ಕಂಗಾಲಾಗಿದ್ದ ಕಾಫಿ ಬೆಳೆಗಾರರ ಮೋಗದಲ್ಲಿ ಈಗ ಮಂದಹಾಸ ಮೂಡಿದೆ. ಇನ್ನೂ ನಾಪೋಕ್ಲು ಅಯ್ಯಗೇರಿ, ಭಾಗಮಂಡಲ ವ್ಯಾಪ್ತಿಯಲ್ಲಿ ಮೋಡ ಕವಿದಿದ್ದು, ವಾತಾವರಣ ತಂಪಾಗಿದೆ. ಮಳೆಯಿಂದಾಗಿ ವಾಹನ ಸವಾರರು ಕೆಲವೆಡೆ ಪರದಾಡಿದ್ದಾರೆ. ಇದನ್ನೂ ಓದಿ: ಜಪಾನ್‌ ಖಾಸಗಿ ಉಪಗ್ರಹ ಉಡಾವಣೆಯಾದ ಕೆಲವೇ ಸೆಕೆಂಡುಗಳಲ್ಲಿ ಸ್ಫೋಟ

Share This Article