ಬಾಬರಿ ಮಸೀದಿ ಕೇಸ್ ಬಳಿಕ ನಾವು ಅದೇ ಹಾದಿಯಲ್ಲಿ ಸಾಗುತ್ತಿದ್ದೇವೆ: ಓವೈಸಿ

Public TV
1 Min Read

ಹೈದರಾಬಾದ್: ಜ್ಞಾನವಾಪಿ ಮಸೀದಿ (Gyanvapi Masjid) ವಿಚಾರದಲ್ಲಿ ಅಸಮಾದಾನ ವ್ಯಕ್ತಪಡಿಸಿರುವ ಎಐಎಂಐಎಂ (AIMIM) ನಾಯಕ ಅಸಾದುದ್ದೀನ್ ಓವೈಸಿ (Asaduddin Owaisi)ವಾರಣಾಸಿ ನ್ಯಾಯಾಲಯದ ಆದೇಶವನ್ನು ಬಾಬರಿ ಮಸೀದಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ (Supreme Court) ನೀಡಿದ ತೀರ್ಪಿನೊಂದಿಗೆ ಹೋಲಿಸಿದ್ದಾರೆ.

ಅಲ್ಲದೇ ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಮೊರೆ ಹೋಗಲು ಕರೆ ನೀಡಿದ್ದು, ವಾರಣಾಸಿಯ ಅಂಜುಮನ್ ಮಸೀದಿ ಸಮಿತಿಯವರು ವಾರಣಾಸಿ ಜಿಲ್ಲಾ ನ್ಯಾಯಾಲಯದ (Varanasi Court) ತೀರ್ಪಿನ ವಿರುದ್ಧ ಹೈಕೋರ್ಟ್‌ (UP HighCourt)  ಮೇಲ್ಮನವಿ ಸಲ್ಲಿಸುವ ವಿಶ್ವಾಸವಿದೆ ಎಂದು ಓವೈಸಿ ಹೇಳಿದ್ದಾರೆ. ಇದನ್ನೂ ಓದಿ: ಜ್ಞಾನವಾಪಿ ಕೇಸ್‌ ಪೂಜಾ ಸ್ಥಳಗಳ ಕಾಯ್ದೆಯ ವ್ಯಾಪ್ತಿಗೆ ಒಳಪಡಲ್ಲ: ವಾರಣಾಸಿ ಕೋರ್ಟ್‌ ಹೇಳಿದ್ದೇನು?

ಈ ಕುರಿತು ಮಾಧ್ಯಮಗಳೊಂದಿಗೆ ಅವರಿಂದು ಮಾತನಾಡಿ, ಜ್ಞಾನವಾಪಿ ಮಸೀದಿ ಪ್ರಕರಣದಲ್ಲಿ ವಾರಾಣಸಿ ಜಿಲ್ಲಾ ನ್ಯಾಯಾಲಯದ ಆದೇಶವು ಅಸ್ಥಿರಗೊಳಿಸುವ ಪರಿಣಾಮ ಬೀರುತ್ತದೆ. ಇದರಿಂದ ದೇಶದಲ್ಲಿ ಸಮಸ್ಯೆಗಳೂ ಸೃಷ್ಟಿಯಾಗುತ್ತವೆ ಎಂದು ಓವೈಸಿ ಅಭಿಪ್ರಾಯಪಟ್ಟಿದ್ದಾರೆ.

ಈಗ ದಾವೆಗಳ ಹೂಡುವ ಪ್ರಕ್ರಿಯೆ ಆರಂಭವಾಗಲಿದ್ದು, ಈ ಬೆಳವಣಿಗೆಯು ಪ್ರಸ್ತುತ ಸಮಾಜವನ್ನು 1980 ಮತ್ತು 1990ರ ದಶಕಗಳ ಹಿಂದಕ್ಕೆ ಕೊಂಡೊಯ್ಯುತ್ತದೆ. ಈ ಅವಧಿಯ ದಶಕವನ್ನು ಮರುಪ್ರವೇಶಿಸಿದರೆ ದೇಶದಲ್ಲಿ ಅಸ್ಥಿರತೆ ಉಂಟಾಗುತ್ತದೆ ಎಂದು ಓವೈಸಿ ಹೇಳಿದ್ದಾರೆ. ಇದನ್ನೂ ಓದಿ: ಜ್ಞಾನವಾಪಿ ಕೇಸ್‌ – ಹಿಂದೂ ಮಹಿಳೆಯರಿಗೆ ಗೆಲುವು, ಅರ್ಜಿ ವಿಚಾರಣೆಗೆ ಯೋಗ್ಯ

ಆರಾಧನಾ ಸ್ಥಳಗಳ ಕಾಯಿಯ್ದೆಯ ಪ್ರಸ್ತುತತೆ ಏನು? (The Places of Worship Act) ಬಾಬರಿ ಮಸೀದಿ ತೀರ್ಪಿನ ಸಂದರ್ಭದಲ್ಲಿ 1947ರ ಆಗಸ್ಟ್ 15ರ ನಂತರ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸುಪ್ರೀಂ ಕೋರ್ಟ್ ಹೇಳಿದೆ. ಆದರೆ ಈಗ ಈ ವಿಷಯಕ್ಕೆ ಕಾಯಿದೆ ಅಡ್ಡಿಯಿಲ್ಲ ಎಂದು ಹೇಳುತ್ತಿದ್ದಾರೆ ಎಂದು ಹೇಳಿದ್ದಾರೆ.

ಬಾಬರಿ ಮಸೀದಿ ಪ್ರಕರಣದ ಬಳಿಕ ನಾವು ಅದೇ ಹಾದಿಯಲ್ಲಿ ಸಾಗುತ್ತಿದ್ದೇವೆ. ಬಾಬರಿ ಮಸೀದಿಯ ತೀರ್ಪು ಬಂದಾಗ, ನಂಬಿಕೆಯ ಆಧಾರದ ಮೇಲೆ ಈ ತೀರ್ಪು ನೀಡಿದ್ದರಿಂದ ದೇಶದಲ್ಲಿ ಸಮಸ್ಯೆಗಳು ಉಂಟಾಗುತ್ತವೆ ಎಂದು ಎಲ್ಲರಿಗೂ ಎಚ್ಚರಿಸಿದ್ದೆ ಎಂದಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *