ವಿಎಓ/ಜಿಟಿಟಿಸಿ ಪರೀಕ್ಷೆ ಹೊಸದಾಗಿ ಅರ್ಜಿ ಸಲ್ಲಿಸಲು ಸೆ.19ರಿಂದ ಅವಕಾಶ: ಕೆಇಎ

Public TV
1 Min Read

ಬೆಂಗಳೂರು: ಸರ್ಕಾರ ಇತ್ತೀಚಿಗೆ ಬಿ ಮತ್ತು ಸಿ ವರ್ಗದ ಹುದ್ದೆಗಳ ನೇಮಕ ಸಂದರ್ಭದಲ್ಲಿ ಅರ್ಜಿ ಸಲ್ಲಿಸಲು ಗರಿಷ್ಠ ಮೂರು ವರ್ಷ ವಯೋಮಿತಿ ಸಡಿಲ ಮಾಡಿರುವ ಕಾರಣ ಗ್ರಾಮ ಆಡಳಿತಾಧಿಕಾರಿ ಮತ್ತು ಜಿಟಿಟಿಸಿಯ (GTTC) ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಸೆ.19ರಿಂದ ಮತ್ತೊಮ್ಮೆ ಅವಕಾಶ ನೀಡಲಾಗಿದೆ ಎಂದು ಕೆಇಎ (KEA) ಕಾರ್ಯನಿರ್ವಾಹಕ ನಿರ್ದೇಶಕ ಪ್ರಸನ್ನ ವಿವರಿಸಿದ್ದಾರೆ.

ವಯೋಮಿತಿ ಸಡಿಲಿಕೆಯ ಲಾಭ ಪಡೆಯುವವರು ಸೇರಿ ಇತರ ಅರ್ಹರು ಸೆ.28ರವರೆಗೆ ಅರ್ಜಿ ಸಲ್ಲಿಸಬಹುದು. ಶುಲ್ಕ ಪಾವತಿಗೆ ಸೆ.29 ಕೊನೆಯ ದಿನ. ಈ ಹಿಂದೆ ಅರ್ಜಿ ಸಲ್ಲಿಸಿದವರು ಪುನಃ ಅರ್ಜಿ ಸಲ್ಲಿಸುವ ಅಗತ್ಯ ಇಲ್ಲ ಎಂದು ವಿವರಿಸಿದರು. ಇದನ್ನೂ ಓದಿ: ಮಹಿಳಾ ವೈದ್ಯರಿಗೆ ನೈಟ್ ಶಿಫ್ಟ್ ತೆಗೆದು ಅಧಿಸೂಚನೆ – ಮಮತಾ ಸರ್ಕಾರಕ್ಕೆ ಸುಪ್ರೀಂ ಚಾಟಿ

ಆದರೆ ಈ ಹುದ್ದೆಗಳಿಗೆ ಈ ಹಿಂದೆ ನಿಗದಿಪಡಿಸಿದ್ದ ದಿನಾಂಕಗಳಂದೇ ಪರೀಕ್ಷೆ ನಡೆಯಲಿದೆ. ಹೊಸದಾಗಿ ಅರ್ಜಿ ಸಲ್ಲಿಸಿದವರಿಗೆ ಕಡ್ಡಾಯ ಕನ್ನಡ ಪರೀಕ್ಷೆಯನ್ನು ಅ.26ರಂದು ನಡೆಸಲಾಗುತ್ತದೆ. ಅದರ ನಂತರ ಎಲ್ಲರಿಗೂ ಅ.27ರಂದು ಪತ್ರಿಕೆ-1 ಮತ್ತು 2ರ ಪರೀಕ್ಷೆ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಅಕ್ಟೋಬರ್ 3ಕ್ಕೆ ಪಿಎಸ್‌ಐ ಪರೀಕ್ಷೆಗೆ ಮರು ದಿನಾಂಕ ನಿಗದಿ- ಕೆಇಎ

Share This Article