ವಾಮಂಜೂರು ಶಾರದಾ ಮಹೋತ್ಸವದ ಕಾರ್ಯಾಲಯ ಉದ್ಘಾಟನೆ

Public TV
1 Min Read

ಮಂಗಳೂರು: ವಾಮಂಜೂರು ಶಾರದಾ ಮಹೋತ್ಸವ (Vamanjoor Sharada Mahotsav) ಹಿನ್ನೆಲೆಯಲ್ಲಿ ಅದರ ಕಾರ್ಯಾಲಯವನ್ನು ಶುಕ್ರವಾರ ಉದ್ಘಾಟಿಸಲಾಯಿತು.

ಶ್ರೀರಕ್ತೇಶ್ವರಿ ಮತ್ತು ‌ಪಂಚದೇವತಾ ಸಾನಿಧ್ಯ ಶ್ರೀರಾಮನಗರ, ವಾಮಂಜೂರು‌ ಹಾಗೂ ವಾಮಂಜೂರು ಸಾರ್ವಜನಿಕ ಶ್ರೀಶಾರದಾ ಪೂಜಾ‌ ಸಮಿತಿ ವತಿಯಿಂದ ಅ.9 ‌ರಿಂದ 13‌ ರ ವರೆಗೆ ವಾಮಂಜೂರಿನ‌ ಕೇಂದ್ರ ಮೈದಾನದಲ್ಲಿ ‘ವಾಮಂಜೂರು ಶಾರದಾ ಮಹೋತ್ಸವ’ ನಡೆಯಲಿದೆ. ಇದರ‌ ಕಾರ್ಯಾಲಯವನ್ನ ವಾಮಾಂಜೂರಿನ‌ ಬಾವ ಬಿಲ್ಡರ್ಸ್‌ನ ಕಟ್ಟಡದಲ್ಲಿ ಇಂದು ಉದ್ಘಾಟನೆ ಮಾಡಲಾಯಿತು. ಇದನ್ನೂ ಓದಿ: ತಮ್ಮ ತಪ್ಪುಗಳನ್ನು ಮುಚ್ಚಿಹಾಕಲು ವಿಪಕ್ಷ ನಾಯಕರನ್ನು ಟಾರ್ಗೆಟ್ ಮಾಡಿದ್ದಾರೆ: ಸರ್ಕಾರದ ವಿರುದ್ಧ ವಿಜಯೇಂದ್ರ ಕಿಡಿ

ಶಾರದಾ ಮಹೋತ್ಸವ ಸಮಿತಿಯ ಅಧ್ಯಕ್ಷ ರಾಜೇಶ್ ಕೊಟ್ಟಾರಿ, ಪ್ರಮುಖರಾದ ಚಂದ್ರಶೇಖರ ರಾಮನಗರ, ಸದಾನಂದ ಪೂಜಾರಿ, ಮೋಹನ್ ಪಚ್ಚನಾಡಿ, ರಾಕೇಶ್ ಶೆಟ್ಟಿ ಅಮೃತನಗರ, ಅಜಯ್ ಮಂಗಳನಗರ, ಬಿಪಿನ್ ವಾಮಂಜೂರು, ಗೋಪಾಲ್ ದೇವಿನಗರ, ಸುರೇಂದ್ರ ಗುರುಪುರ, ನವೀನ್ ಅಮೃತನಗರ, ವೆಂಕಪ್ಪ‌ ಅಮೃತ ನಗರ, ನವೀನ್‌ ಶೆಟ್ಟಿ ಸಂತೋಷ್ ನಗರ ಹಾಗೂ ಸಮಿತಿ‌ ಸದಸ್ಯರು ಉಪಸ್ಥಿತರಿದ್ದರು.

Share This Article