ಚಾ.ನಗರದಲ್ಲಿ ವಜ್ರ ಬಸ್ ಕಳ್ಳತನ ಕೇಸ್ – ಟೋಲ್ ಕಟ್ಟಲು ಹಣ ಇಲ್ಲದೇ ಬಸ್ ಬಿಟ್ಟು ಕಳ್ಳ ಪರಾರಿ

Public TV
1 Min Read

ಚಾಮರಾಜನಗರ: ವಜ್ರ ಬಸ್ ಕಳವಿನ ಪ್ರಕರಣ ಸುಖಾಂತ್ಯ ಕಂಡಿದೆ. ಚಾಮರಾಜನಗರದಲ್ಲಿ ಕಳುವಾಗಿದ್ದ ಬಸ್ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಪತ್ತೆಯಾಗಿದೆ.

ಈ ಕುರಿತು ವಜ್ರ ಬಸ್‌ನ ಮಾಲೀಕ ಸೋಮನಾಯಕ ಮಂಗಳವಾರ ಮಾಹಿತಿ ಕೊಟ್ಟಿದ್ದಾರೆ. ತಡರಾತ್ರಿ 1 ಗಂಟೆಯಲ್ಲಿ ಬಸ್ ಕಳುವಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಬಸ್ ಕಳುವಾದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದೆ. ಬಸ್ ಕಳ್ಳತನ ಮಾಡಿದವನು ಬೆಂಗಳೂರಿನ‌ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಟೋಲ್ ಕಟ್ಟಲು ಹಣ ಇಲ್ಲದೇ ಬಸ್ ಬಿಟ್ಟು ಪರಾರಿಯಾಗಿದ್ದಾನೆ ಎಂದು ತಿಳಿಸಿದ್ದಾರೆ.

ಕಳುವಾಗಿದ್ದ ಬಸ್ ನಮಗೆ ಸಿಕ್ಕಿದೆ. ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದು, ನಮಗೆ ನೆರವಾಯಿತು ಎಂದು ಬಸ್‌ ಮಾಲೀಕ ಹೇಳಿದ್ದಾರೆ.

ಬಸ್ ಕಳ್ಳತನವಾದ ದೃಶ್ಯವು ಕೂಡ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ನಗರದ ಎಲ್‌ಐಸಿ ಬಳಿ ಬಸ್ ನಿಲ್ಲಿಸಿದ್ದಾಗ ಕಳ್ಳ ಬಸ್ ಕದ್ದೊಯ್ದಿದ್ದ.

Share This Article