ಇಬ್ರು ಹುಡ್ಗೀರು ನನ್ನ ಮಗಳ ಜೀವನ ಸರಿ ಮಾಡಿದ್ದಾರೆ: ವೈಷ್ಣವಿ ಗೌಡ ತಾಯಿ

Public TV
3 Min Read

– ಮಿಲಿಟರಿ ಹುಡುಗ ಬೇಕು ಅಂತಾ ನಮ್ಮ ತಂದೆ ಆಸೆ: ಭಾನು ರವಿಕುಮಾರ್
– ಮಗಳ ಬಗ್ಗೆ ಸುಮ್ನೆ ಟ್ರೋಲ್ ಮಾಡ್ಬೇಡಿ ವೈಷ್ಣವಿ ತಂದೆ ಮನವಿ

ಬೆಂಗಳೂರು: ನನ್ನ ಮಗಳ ಜೀವನ ಸರಿ ಆಗಲಿ ಎಂದು ಇಬ್ರು ಹುಡುಗಿಯರು ಮುಂದೆ ಬಂದು ನಿಜ ಸ್ಥಿತಿ ಅರಿವು ಮಾಡಿಕೊಟ್ಟರು. ಅವರಿಗೆ ಧನ್ಯವಾದ ಹೇಳುತ್ತೇನೆ ಎಂದು ವೈಷ್ಣವಿ ಗೌಡ (Vaishnavi Gowda) ಅವರ ತಾಯಿ ಭಾನು ರವಿಕುಮಾರ್ ಹೇಳಿದರು.

ಈ ಹಿಂದೆ ಮಗಳ ನಿಶ್ಚಯವಾಗಿ ಮುರಿದು ಬಿದ್ದ ಕುರಿತು ಮಾತನಾಡಿದ ಅವರು, ವೈಷ್ಣವಿ ತನ್ನದಲ್ಲದ ತಪ್ಪಿಗೆ ಏನೇನೋ ಅನುಭವಿಸಬೇಕಾಯ್ತು. ಆ ಹುಡುಗನ ಬಗ್ಗೆ ಆ ಸಮಯದಲ್ಲಿ ಮಾತನಾಡಿ, ನಮಗೆ ಉಪಕಾರ ಮಾಡಿರುವ ಇಬ್ಬರು ಹುಡುಗಿಯರಿಗೆ ಧನ್ಯವಾದ ಹೇಳುತ್ತೇನೆ. ಏನೂ ಅನ್ನೋದನ್ನ ಗೊತ್ತು ಮಾಡಿದ್ದೀರಿ. ಆ ಹುಡುಗಿಯರು ಯಾರೂ ಅಂತ ಗೊತ್ತಿಲ್ಲ. ವೈಷ್ಣವಿ ಕಷ್ಟದ ಸಮಯದಲ್ಲಿ ನೀವೆಲ್ಲಾ ಅವಳ ಜೊತೆ ಇದ್ರಿ. ನಿಮಗೂ ಧನ್ಯವಾದ ಎಂದು ಕೃತಜ್ಞತೆ ಸಲ್ಲಿಸಿದರು. ಇದನ್ನೂ ಓದಿ: ನಮ್ದು ಅರೇಂಜ್ ಮ್ಯಾರೇಜ್ – ನಾವು ಬೆಂಗಳೂರಿನಲ್ಲೇ ಇರ‍್ತೀವಿ: ವೈಷ್ಣವಿ ಗೌಡ

ಈಗ ನಿಶ್ಚಯವಾಗಿರುವ ಮಗಳ ಮದುವೆ ಬಗ್ಗೆ ಪ್ರತಿಕ್ರಿಯಿಸಿ, ಉತ್ತರದಿಂದ ದಕ್ಷಿಣದ ಸಂಬಂಧ ಇದು. ದೇವರು ಎಲ್ಲಾ ನಿಶ್ಚಯ ಮಾಡಿರುತ್ತಾನೆ. ವೈಷ್ಣವಿಗೆ ಈ ಗಂಡು ನಾವು ನೋಡಿರೋದು. ಮ್ಯಾಟ್ರಿಮೋನಿಯಲ್ಲಿ (Matrimony) ನೋಡಿ ನಿಶ್ಚಯ ಮಾಡಿರುವುದು. ಅವರಿಬ್ಬರಿಗೂ ಒಬ್ಬರಿಗೊಬ್ಬರು ಅರ್ಥ ಮಾಡಿಕೊಳ್ಳಲು ಸಮಯ ಕೊಟ್ಟದ್ದೆವು ಎಂದು ತಿಳಿಸಿದರು.

ಮಿಲಿಟರಿ ಹುಡುಗ ಬೇಕು:
ಮಿಲಿಟರಿಯಲ್ಲಿ ಕೆಲಸ ಮಾಡೋ ಹುಡುಗ ಬೇಕು ಎಂದು ನಮ್ಮ ತಂದೆಗೆ ಆಸೆ ಇತ್ತು. ನಮ್ಮ ಫ್ಯಾಮಿಲಿಯಲ್ಲಿ ಹಿಂದೆ ಯಾರೂ ಇರಲಿಲ್ಲ. ಈಗ ದೇಶಸೇವೆ ಮಾಡೋವ್ರು ಬಂದ್ರು ಅನ್ನೋದು ಖುಷಿ ಇದೆ. ಕೆಲವರು ಮಗಳ ಬಗ್ಗೆ ಏನೇನೋ ಮಾತಾಡ್ತಾರೆ. ಟ್ರೋಲ್ ಮಾಡುತ್ತಾರೆ. ನಿಜಾಂಶ ಏನೂ ಎಂದು ಸರಿಯಾಗಿ ತಿಳಿದುಕೊಂಡಿರಬೇಕಾಗುತ್ತದೆ ಎಂದರು. ಇದನ್ನೂ ಓದಿ: ‘ಅಗ್ನಿಸಾಕ್ಷಿ’ ನಟಿ ವೈಷ್ಣವಿ ಗೌಡ ಎಂಗೇಜ್‌ಮೆಂಟ್ ಫೋಟೋ ಗ್ಯಾಲರಿ

ನಾವು 2017ರಲ್ಲಿ ಎಲ್‌ಎಲ್‌ಬಿ ಓದಿ ವಕೀಲೆ ಆಗಿದ್ದೀನಿ. ಜೊತೆಗೆ ಸೈಕಾಲಜಿಯಲ್ಲಿ ಎಂಎಸ್‌ಸಿ ಓದಿದ್ದೇನೆ. ನನ್ನಂತೆ ನನ್ನ ಮಗಳಿಗೂ ಮದುವೆ ಬಳಿಕ ಪ್ರೋತ್ಸಾಹ ಕೊಡುವ ಗಂಡ ಸಿಕ್ಕಿದ್ದಾರೆ ಎಂದು ಖುಷಿ ಇದೆ. ಆಗೋದೆಲ್ಲ ಒಳ್ಳೆಯದಕ್ಕೆ ಅನ್ನೋದಕ್ಕೆ ಇದುವೇ ಸಾಕ್ಷಿ ಎಂದು ಸಂತಸ ವ್ಯಕ್ತಪಡಿಸಿದರು.

ಮಗಳು ಬಯಸಿದಂತೆ ಸಂಬಂಧ ಸಿಕ್ಕಿದೆ
ವೈಷ್ಣವಿ ತಂದೆ ರವಿಕುಮಾರ್ ಅವರು ಮಗಳ ಮದುವೆ (Marriage) ಬಗ್ಗೆ ಪ್ರತಿಕ್ರಿಯಿಸಿ, ನಮಗೆ ಒಳ್ಳೆಯ ಅಳಿಯ ಸಿಕ್ಕಿದ್ದಾರೆ. ವೈಷ್ಣವಿ ನಿಮ್ಮೆಲ್ಲರ ಮನೆ ಮಗಳು ಎಲ್ಲರಿಗೂ ತಿಳಿಸಿಯೇ ಮದುವೆ ಮಾಡುತ್ತೇವೆ. ಅವಳು ಬಯಸಿದಂತೆ ಸಂಬMಧ ಸಿಕ್ಕಿದೆ. ದೇಶ ಸೇವೆ ಮಾಡುವ ಅಳಿಯ ಸಿಕ್ಕಿದ್ದಾರೆ ಎಂದರು.

ಮಗಳ ಬಗ್ಗೆ ಸುಮ್ನೆ ಟ್ರೋಲ್ ಮಾಡ್ಬೇಡಿ
ಇಬ್ಬರಿಗೂ ಇಕ್ವೇಲ್ ಆಗಿಯೇ, ಗಂಡು ಹೆಣ್ಣಿಗೆ ಏನು ವಯಸ್ಸಿರಬೇಕೋ ಅದು ಇದೆ. ಮಿಲಿಟರಿ ಅಂದ್ಮೇಲೆ, ಹೈಟ್, ವೆಯಿಟ್, ಕಲರ್ ಎಲ್ಲಾ ಸರಿ ಇದೆ. ಮ್ಯಾಚ್ ಆಗಿದೆ. ಅದೇ ಥರ ಜೋಡಿ ಸರಿಯಾಗಿದೆ. ಸುಮ್ನೆ ಏನೇನೋ ಟ್ರೋಲ್ ಮಾಡಬೇಡಿ ಎಂದು ಟ್ರೋರ‍್ಸ್ಗಳಲ್ಲಿ ಮನವಿ ಮಾಡಿದರು. ಇದನ್ನೂ ಓದಿ: ಅದ್ಧೂರಿಯಾಗಿ ಎಂಗೇಜ್‌ಮೆಂಟ್‌ ಮಾಡಿಕೊಂಡ ನಟಿ ವೈಷ್ಣವಿ ಗೌಡ

ಮೊದಲು ನನ್ನ ಮಗಳು ದೇವಿ ಸೀರಿಯಲ್‌ಗೆ ಸೆಲೆಕ್ಟ್ ಆಗಿ, ಇಲ್ಲಿವರೆಗೂ ಅಭಿನಯಿಸಿಕೊಂಡು ಬಂದಿದ್ದಾಳೆ. ನನ್ನ ಮಗಳು ನಾನ್ ವೆಜ್ (Non-Veg) ತಿನ್ನಲ್ಲ. ಅವರೂ ವೆಜಿಟೇರಿಯನ್ ಕುಟುಂಬ. ಅಲ್ಲಿಗೆ ಸರಿ ಹೋಯ್ತು ನೋಡಿ. ದೇವರೇ ಒಬ್ಬರಿಗೊಬ್ಬರನ್ನ ಜೋಡಿ ಮಾಡಿರುತ್ತಾನೆ. ವೈಷ್ಣವಿ ನಿಮ್ಮ ಮನೆ ಮಗಳು ಎಲ್ಲರನ್ನೂ ಕರೆದು ಮುಚ್ಚುಮರೆ ಏನೂ ಇಲ್ಲದೇ, ಮದುವೆ ಮಾಡುತ್ತೇವೆ ಎಂದರು.

Share This Article