ಪ್ರೀತಿಯ ಬಂಟಿ ಕಳೆದುಕೊಂಡ ‘ಅಗ್ನಿಸಾಕ್ಷಿ’ ನಟಿ ವೈಷ್ಣವಿ

Public TV
1 Min Read

‘ಅಗ್ನಿಸಾಕ್ಷಿ’ ನಟಿ ವೈಷ್ಣವಿ ಗೌಡ (Vaishnavi Gowda) ಅವರ ಪ್ರೀತಿಯ ಶ್ವಾನ ಇನ್ನಿಲ್ಲ. ನಟಿ, ಬೇಬಿ ಬ್ರದರ್ ಬಂಟಿ ಸಾವಿನ ಬೇಸರದಲ್ಲಿದ್ದಾರೆ. ನೆಚ್ಚಿನ ಶ್ವಾನದ ಜೊತೆಯಿರುವ ಫೋಟೋ ಹಂಚಿಕೊಂಡು ವೈಷ್ಣವಿ ಭಾವುಕರಾಗಿದ್ದಾರೆ.

ಬಿಗ್ ಬಾಸ್, ಅಗ್ನಿಸಾಕ್ಷಿ ಸೀರಿಯಲ್ ಮೂಲಕ ಗಮನ ಸೆಳೆದ ವೈಷ್ಣವಿ ಗೌಡ (Vaishnavi Gowda) ಇದೀಗ ವೈಯಕ್ತಿಕ ವಿಚಾರವಾಗಿ ಮತ್ತೆ ಸುದ್ದಿಯಲ್ಲಿದ್ದಾರೆ. ನಟಿಯ ಅಚ್ಚುಮೆಚ್ಚಿನ ಶ್ವಾನ ಬಂಟಿ ನಿಧನವಾಗಿದೆ. ಇದನ್ನೂ ಓದಿ:ವರ್ಕೌಟ್ ಫೋಟೋ ಹಂಚಿಕೊಂಡ ‘ಜೊತೆ ಜೊತೆಯಲಿ’ ನಟಿ

 

View this post on Instagram

 

A post shared by Vaisshnavi (@iamvaishnavioffl)

ಪ್ರೀತಿಯ ಬಂಟಿ(Bunty), ಎರಡು ಮುದ್ದಾದ ಫೋಟೋ ಹಂಚಿಕೊಂಡು, ‘ಮಿಸ್ ಯೂ ಮೈ ಬೇಬಿ ಬ್ರದರ್’ ನೀನು ನನಗೆ ಸ್ಪೆಷಲ್ ಎಂದು ನಟಿ ಬರೆದುಕೊಂಡಿದ್ದಾರೆ. ಸೋಷಿಯಲ್ ಮೀಡಿಯಾ ಮೂಲಕ ನಟಿ ತಮ್ಮ ಅಳಲು ತೊಡಿಕೊಂಡಿದ್ದಾರೆ. ಬಂಟಿ ನಿಧನಕ್ಕೆ ಹರ್ಷಿಕಾ, ದಿವ್ಯಾ ಉರುಡುಗ, ಶುಭಾ ಪೂಂಜಾ ಕಂಬನಿ ಮಿಡಿದಿದ್ದಾರೆ.

ಮೂರು ದಿನಗಳ ಬಂಟಿ ಇಹಲೋಕ ತ್ಯಜಿಸಿತ್ತು. ಮೇ.21ರಂದು ಬಂಟಿ ಹುಟ್ಟಿದ ದಿನ ಬಂಟಿಗೆ ವಿಶ್ ಮಾಡುವ ಮೂಲಕ ಮಿಸ್ಸಿಂಗ್ ಯೂ ಎಂದು ನಟಿ ವೈಷ್ಣವಿ ಮತ್ತೆ ಭಾವುಕರಾಗಿದ್ದಾರೆ. ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.

Share This Article