ಪತಿ ಜೊತೆಗೆ ಬಂಗೀ ಜಂಪ್‌ ಮಾಡಿ ಸಂಭ್ರಮಿಸಿದ ವೈಷ್ಣವಿ ಗೌಡ

Public TV
1 Min Read

ತ್ತೀಚೆಗೆ ಮದುವೆಯಾದ ಸೀರಿಯಲ್‌ ನಟಿ ವೈಷ್ಣವಿ ಗೌಡ (Vaishnavi Gowda) ಅವರು ಪತಿ ಅನುಕೂಲ್ ಮಿಶ್ರಾ (Ankool Mishra) ಜೊತೆಗೂಡಿ ಬಂಗೀ ಜಂಪ್‌ (Bungee Jump) ಮಾಡಿದ್ದಾರೆ.

ಉತ್ತರಾಖಂಡ ಋಷಿಕೇಶ ಬಳಿ ಇರುವ ಶಿವಪುರಿಯಲ್ಲಿ ಹಿಮಾಲಯನ್‌ ಬಂಗೀಯಲ್ಲಿ (Himalayan Bungee Jumping)  ದಂಪತಿ ಬಂಗೀ ಜಂಪ್‌ ಮಾಡಿ ಸಂಭ್ರಮಿಸಿದ್ದಾರೆ. ಈ ಹಿಂದೆ ಅನುಕೂಲ್ ಮಿಶ್ರಾ ಅವರು ಒಬ್ಬರೇ ಬಂಗೀ ಜಂಪ್‌ ಮಾಡಿದ್ದರು. ಈಗ ಪತ್ನಿ ವೈಷ್ಣವಿ ಜೊತೆಗೆ ಬಂಗೀ ಜಂಪ್‌ ಮಾಡಿದ್ದಾರೆ. ಇದನ್ನೂ ಓದಿ: ನಮ್ದು ಅರೇಂಜ್ ಮ್ಯಾರೇಜ್ – ನಾವು ಬೆಂಗಳೂರಿನಲ್ಲೇ ಇರ‍್ತೀವಿ: ವೈಷ್ಣವಿ ಗೌಡ

 

View this post on Instagram

 

A post shared by Vaisshnavi (@iamvaishnavioffl)

ಹಿಮಾಲಯನ್ ಬಂಗೀ, ಹಿಮಾಲಯನ್ ಫ್ರೀಸ್ಟೈಲ್ ಬಂಗೀ, ಹಿಮಾಲಯನ್ ಜೋಡಿ ಬಂಗೀ ಹೆಸರಿನಲ್ಲಿ ಇಲ್ಲಿ ಜಂಪ್‌ ಮಾಡಬಹುದು. ದಂಪತಿ 111 ಮೀಟರ್‌ ಎತ್ತರದಿಂದ ಜಂಪ್‌ ಮಾಡಬೇಕಾಗುತ್ತದೆ. ಈ ಜೋಡಿ ಬಂಗೀ ಜಂಪಿಗೆ ಇಬ್ಬರಿಗೆ ಸೇರಿ 8,000 ರೂ. ಶುಲ್ಕ ವಿಧಿಸಲಾಗುತ್ತದೆ. ಇದನ್ನೂ ಓದಿ: ಇಬ್ರು ಹುಡ್ಗೀರು ನನ್ನ ಮಗಳ ಜೀವನ ಸರಿ ಮಾಡಿದ್ದಾರೆ: ವೈಷ್ಣವಿ ಗೌಡ ತಾಯಿ

ಆರೋಗ್ಯ ಹೊಂದಿರುವ 14 – 99 ವರ್ಷದ ಒಳಗಿನ ವ್ಯಕ್ತಿಗಳು ಬಂಗೀ ಜಂಪ್‌ ಮಾಡಬಹುದು. ಪ್ರತಿ ವ್ಯಕ್ತಿಗೆ 45 – 120 ಕೆಜಿ ತೂಕದ ಒಳಗಿರಬೇಕು. ಜೋಡಿಯಾಗಿ ಹಾರುವಾಗ ಗರಿಷ್ಠ ಒಟ್ಟು ತೂಕ 205 ಕೆಜಿ ಮೀರಬಾರದು.

ಗರ್ಭಿಣಿಯರು, ಹೃದಯದ ಸಮಸ್ಯೆ ಹೊಂದಿರುವವರು, ಇತ್ತೀಚಿಗೆ ಶಸ್ತ್ರಚಿಕಿತ್ಸೆಗೆ ಒಳಗಾದವರು. ಮೂಳೆ ಸಮಸ್ಯೆ ಹೊಂದಿರುವವರು, ಜಿಗಿತದ ಮೊದಲು ಮದ್ಯ ಸೇವನೆ ಮಾಡಿದವರಿಗೆ ಬಂಗೀ ಬಂಗೀ ಜಂಪ್‌ ಮಾಡಲು ನಿರ್ಬಂಧವಿದೆ.

Share This Article