ವೈಕುಂಠ ಏಕಾದಶಿ – ಮಾಲೂರಿನ ಚಿಕ್ಕ ತಿರುಪತಿ ದೇವಸ್ಥಾನಕ್ಕೆ ಹರಿದು ಬಂದ ಭಕ್ತಸಾಗರ

1 Min Read

ಕೋಲಾರ: ನಾಡಿನೆಲ್ಲೆಡೆ ಇಂದು ವೈಕುಂಠ ಏಕಾದಶಿ (Vaikunta Ekadasi)  ಸಂಭ್ರಮ ಮನೆ ಮಾಡಿದ್ದು, ಕೋಲಾರ (Kolar) ಜಿಲ್ಲೆ ಮಾಲೂರು (Malur) ತಾಲೂಕಿನ ಚಿಕ್ಕ ತಿರುಪತಿ ದೇವಾಲಯಕ್ಕೆ (Chikka Tirupati Temple)  ಭಕ್ತ ಸಾಗರವೇ ಹರಿದು ಬಂದಿದೆ.

ವೈಕುಂಠ ಏಕಾದಶಿ ಹಿನ್ನೆಲೆ ಚಿಕ್ಕ ತಿರುಪತಿ ದೇವಾಲಯದಲ್ಲಿ ಶ್ರೀ ಪ್ರಸನ್ನ ವೆಂಕಟೇಶ್ವರ ಸ್ವಾಮಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿದೆ. ದೇವಸ್ಥಾನ ಪ್ರವೇಶದ ಬಾಗಿಲ ಬಳಿ ವೈಕುಂಠ ದ್ವಾರ ನಿರ್ಮಾಣ ಮಾಡಿದ್ದು, ಅದೇ ದ್ವಾರದ ಮೂಲಕ ಭಕ್ತಾದಿಗಳಿಗೆ ಪ್ರವೇಶ ಕಲ್ಪಿಸಲಾಗಿದೆ. ವೈಕುಂಠ ದ್ವಾರದ ಮೂಲಕ ಪ್ರವೇಶ ಮಾಡಿದರೆ ಸ್ವರ್ಗದ ಬಾಗಿಲು ತೆರೆಯುವ ನಂಬಿಕೆಯಿದೆ. ನಸುಕಿನ ಜಾವದಿಂದ ಭಕ್ತರು ತಿಮ್ಮಪನ ದರ್ಶನ ಪಡೆಯುತ್ತಿದ್ದಾರೆ. ಇದನ್ನೂ ಓದಿ: ರಿವರ್ಸ್‌ ತೆಗೆಯುವಾಗ ಬಸ್‌ ಡಿಕ್ಕಿ; 4 ಮಂದಿ ಸಾವು – 9 ಜನರಿಗೆ ಗಾಯ

ಚಿಕ್ಕ ತಿರುಪತಿ ದೇವಸ್ಥಾನ ಮುಜರಾಯಿ ಇಲಾಖೆಗೆ ಸೇರಿದ್ದು, ದೇವಸ್ಥಾನದ ಆವರಣವನ್ನು ವಿವಿಧ ಹೂವುಗಳಿಂದ ಸಿಂಗರಿಸಲಾಗಿದೆ. ಇಂದು ಸಂಜೆಯವರೆಗೆ ಒಂದು ಲಕ್ಷ ಜನರು ದರ್ಶನ ಪಡೆಯುವ ಸಾಧ್ಯತೆ ಇದೆ. ಚಿಕ್ಕ ತಿರುಪತಿ ಆಂಧ್ರದ ದೊಡ್ಡ ತಿರುಪತಿಯಷ್ಟೇ ಶ್ರೇಷ್ಠತೆ ಹೊಂದಿದೆ. ಬೆಂಗಳೂರು, ತಮಿಳುನಾಡು ಸೇರಿದಂತೆ ರಾಜ್ಯದ ಬೇರೆ ಬೇರೆ ಕಡೆಗಳಿಂದ ಭಕ್ತರು ಇಲ್ಲಿಗೆ ಆಗಮಿಸಿದ್ದು, ಭಕ್ತಾಧಿಗಳಿಗೆ ದೇವಸ್ಥಾನ ಮಂಡಳಿ ಹಾಗೂ ದಾನಿಗಳಿಂದ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ಭದ್ರತೆಗಾಗಿ ದೇವಸ್ಥಾನದಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ. ಇದನ್ನೂ ಓದಿ: ಉತ್ತರ ಕನ್ನಡ| ಒಂದೇ ವರ್ಷದಲ್ಲಿ 704 ಕಡೆ ಆನೆ ದಾಳಿಯಿಂದ ಬೆಳೆ ಹಾನಿ; 23 ಲಕ್ಷ ಹಣ ಪರಿಹಾರ ಬಾಕಿ

Share This Article