ವೈಕುಂಠ ಏಕಾದಶಿ ಸಂಭ್ರಮ; ದೇವಾಲಯಗಳಲ್ಲಿ ಭಕ್ತರ ದಂಡು – ವಿಶೇಷ ಪೂಜೆ ಸಲ್ಲಿಕೆ

1 Min Read

– ಎಲ್ಲೆಡೆ ಗೋವಿಂದ ನಾಮ ಸ್ಮರಣೆ

ಬೆಂಗಳೂರು: ನಾಡಿನೆಲ್ಲೆಡೆ ಇಂದು ಪವಿತ್ರಾ ವೈಕುಂಠ ಏಕಾದಶಿ (Vaikunta Ekadasi) ಸಂಭ್ರಮ ಮನೆಮಾಡಿದೆ. ಭಕ್ತರು ದೇವಾಲಯಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.

ಬೆಂಗಳೂರಿನ ವೈಯಾಲಿಕಾವಲ್ ಟಿಟಿಡಿ ದೇವಾಲಯದಲ್ಲಿ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ. ಮಧ್ಯರಾತ್ರಿ 1:30 ರಿಂದ ಮಾರನೇ ದಿನ ರಾತ್ರಿ 11 ಘಂಟೆಯ ತನಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. 80 ಸಾವಿರ ಭಕ್ತರು ಬರುವ ನಿರೀಕ್ಷೆ ಇದೆ. ಪ್ರತ್ಯೇಕ ಬ್ಯಾರಿಕೇಡ್ ಹಾಕಿ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬೆಳಗಿನ ಜಾವದಿಂದಲೇ ದರ್ಶನಕ್ಕೆ ಭಕ್ತರು ಆಗಮಿಸುತ್ತಿದ್ದಾರೆ. ಇದನ್ನೂ ಓದಿ: ಬಂಡೀಪುರದಲ್ಲಿ ಹೊಸ ವರ್ಷಾಚರಣೆಗೆ ಕಡಿವಾಣ – ಅರಣ್ಯ ಇಲಾಖೆಯ ಕಾಟೇಜ್‌ನಲ್ಲಿ ವಾಸ್ತವ್ಯಕ್ಕೂ ಬ್ರೇಕ್

ವರ್ಷದಲ್ಲಿ 24 ಏಕಾದಶಿಗಳು ಬರಲಿವೆ. ವೈಕುಂಠ ಏಕಾದಶಿಗೆ ವಿಶೇಷ ಮಹತ್ವವಿದೆ. ವೈದಿಕ ಜ್ಯೋತಿಷದ ಪ್ರಕಾರ, ಈ ದಿನದಂದು ವಿಷ್ಣುವಿನ ನಿವಾಸದ ದ್ವಾರಗಳು ತೆರೆದಿರುತ್ತವೆ. ಹಾಗಾಗಿಯೇ, ವೈಕುಂಠ ಏಕಾದಿನ ದಿನ ಭಕ್ತರು ಉಪವಾಸ ಮಾಡಲಿದ್ದಾರೆ. ಇದರಿಂದ ಭಕ್ತರ ಪ್ರಾರ್ಥನೆ ಇಡೇರುತ್ತವೆ ಎಂಬ ನಂಬಿಕೆ ಇದೆ.

ವೈಕುಂಠ ಏಕಾದಶಿ ಹಿನ್ನೆಲೆ ಇಸ್ಕಾನ್ ಟೆಂಪಲ್‌ಗೆ ಭಕ್ತರ ದಂಡು ಹರಿದುಬರುತ್ತಿದೆ. ಬೆಳಗಿನ ಜಾವದಿಂದಲೇ ದರ್ಶನಕ್ಕಾಗಿ ಕ್ಯೂ ನಲ್ಲಿ ಭಕ್ತರು ನಿಂತಿದ್ದಾರೆ. ಇಸ್ಕಾನ್ ದೇಗುಲಕ್ಕೆ ಶಾಸಕ ಗೋಪಾಲಯ್ಯ ಕುಟುಂಬ ಭೇಟಿ ನೀಡಿದ್ದಾರೆ.

ನೆಲಮಂಗಲದ ಶ್ರೀದೇವಿ ಭೂದೇವಿ ಶ್ರೀರಂಗನಾಥ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. 800 ವರ್ಷಗಳಿಗೂ ಹಳೆಯದಾದ ಪುರಾತನ ದೇವಾಲಯವಿದು. ದೇವಾಲಯದ ಉತ್ತರ ಬಾಗಿಲ ಮೂಲಕ ಭಕ್ತರು ವೈಕುಂಠನ ದರ್ಶನ ಪಡೆಯುತ್ತಿದ್ದಾರೆ. ದೇವಾಲಯಕ್ಕೆ 25 ಸಾವಿರಕ್ಕೂ ಅಧಿಕ ಭಕ್ತಾಧಿಗಳು ಬರುವ ನಿರೀಕ್ಷೆ ಇದೆ. ಇದನ್ನೂ ಓದಿ: ಹೊಸ ವರ್ಷಾಚರಣೆಗೆ ಗುಡ್‌ನ್ಯೂಸ್‌ – ಮಧ್ಯರಾತ್ರಿ 2 ಗಂಟೆವರೆಗೂ BMTC ಬಸ್ ಸೇವೆ

Share This Article