ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರೋ ಬೋಧಕ ಹುದ್ದೆ ಹಂತ ಹಂತವಾಗಿ ಭರ್ತಿ: ಡಾ.ಸುಧಾಕರ್

Public TV
2 Min Read

ಬೆಂಗಳೂರು: ವಿಶ್ವವಿದ್ಯಾಲಯಗಳಲ್ಲಿ (Universities) ಖಾಲಿ ಇರೋ ಬೋಧಕ ಹುದ್ದೆಗಳನ್ನು (Teaching Post) ಹಂತ ಹಂತವಾಗಿ ಭರ್ತಿ ಮಾಡುವುದಾಗಿ ಉನ್ನತ ಶಿಕ್ಷಣ ಸಚಿವ ಡಾ. ಸುಧಾಕರ್ (MC Sudhakar) ತಿಳಿಸಿದ್ದಾರೆ.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿಯ ಸಂಕನೂರು ಪ್ರಶ್ನೆ ಕೇಳಿದರು. ಕರ್ನಾಟಕದ ವಿಶ್ವವಿದ್ಯಾಲಯಗಳಲ್ಲಿ ಬೋಧಕ, ಬೋಧಕ ಹುದ್ದೆ ಸಾಕಷ್ಟು ಖಾಲಿ ಇದೆ. ನಿಧನ, ನಿವೃತ್ತಿಯಿಂದ ಖಾಲಿ ಆಗಿರುವ ಹುದ್ದೆ ಭರ್ತಿ ಆಗಿಲ್ಲ. 70% ಹುದ್ದೆ ಖಾಲಿ ಇವೆ. ಹೀಗೆ ಆದರೆ ವಿವಿಗಳು ಮುಚ್ಚುವ ಸ್ಥಿತಿ ಬರಲಿವೆ. ಕೂಡಲೇ ಖಾಲಿ ಹುದ್ದೆ ಭರ್ತಿ ಮಾಡಬೇಕು. ವಿವಿಗಳಲ್ಲಿ ನಿವೃತ್ತಿ ಆಗಿರುವ ನೌಕರರಿಗೆ ಪಿಂಚಣಿ ಹಣವನ್ನು ಸರ್ಕಾರವೇ ಕೊಡಬೇಕು ಎಂದು ಆಗ್ರಹ ಮಾಡಿದರು. ಇದನ್ನೂ ಓದಿ: ಯುವನಿಧಿ ಯೋಜನೆ ಅಡಿ 10 ಲಕ್ಷ ಫಲಾನುಭವಿಗಳಿಗೆ ಸಹಾಯದ ಗುರಿ- ಶರಣ ಪ್ರಕಾಶ್ ಪಾಟೀಲ್

ಇದಕ್ಕೆ ಸಚಿವ ಸುಧಾಕರ್ ಉತ್ತರ ನೀಡಿ, ವಿಶ್ವವಿದ್ಯಾಲಯಗಳಲ್ಲಿ ಕಾಲ ಕ್ರಮೇಣ ಹುದ್ದೆಗಳು ಖಾಲಿ ಆಗಿದೆ. ಹಿಂದಿನ ಸರ್ಕಾರಗಳು ಯಾರೂ ನೇಮಕ ಮಾಡಿಕೊಂಡಿಲ್ಲ. ರಾಜ್ಯದಲ್ಲಿ ಸುಮಾರು 2,800 ಬೋಧಕ ಹುದ್ದೆ ಖಾಲಿ ಇದೆ. ಜನಪದ ವಿವಿ ನೇಮಕಾತಿ ಸಮಯದಲ್ಲಿ ದೊಡ್ಡ ಸಮಸ್ಯೆ ಆಗಿತ್ತು. ಹೀಗಾಗಿ ಇದಕ್ಕಾಗಿ ವಿಶೇಷ ನಿಯಮ ಮಾಡಿ ಕೆಇಎ ಸಂಸ್ಥೆ ಮೂಲಕ ಹುದ್ದೆ ನೇಮಕಾತಿಗೆ ಅನುಮತಿ ಕೊಡಲು ರಾಜ್ಯಪಾಲರಿಗೆ ಮನವಿ ಸಲ್ಲಿಕೆ ಮಾಡಲಾಗಿದೆ. ಕೆಲವೊಂದಕ್ಕೆ ರಾಜ್ಯಪಾಲರು ಅನುಮತಿ ಕೊಟ್ಟಿದ್ದಾರೆ. ಸಿಎಂ ಅವರ ಗಮನಕ್ಕೂ ಖಾಲಿ ಇರುವ ಬಗ್ಗೆ ಮನವರಿಕೆ ಮಾಡಲಾಗಿದೆ. ಸಿಎಂ ಅವರು ಕೂಡಾ ಖಾಲಿ ಹುದ್ದೆ ತುಂಬೋದಕ್ಕೆ ಉತ್ಸುಕರಾಗಿದ್ದಾರೆ. ಹಂತ ಹಂತವಾಗಿ ಖಾಲಿ ಹುದ್ದೆ ಭರ್ತಿ ಮಾಡುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ರಾಜ್ಯದಲ್ಲಿ ವಿದ್ಯುತ್ ಕೊರತೆ ಇದ್ರೂ ರೈತರಿಗೆ 7 ಗಂಟೆ ವಿದ್ಯುತ್ ಪೂರೈಕೆ: ಕೆ.ಜೆ.ಜಾರ್ಜ್

ಎಲ್ಲಾ ವಿಶ್ವವಿದ್ಯಾಲಯಗಳ ಪರಿಶೀಲನೆಗೆ ಸಚಿವ ಸಂಪುಟ ಉಪ ಸಮಿತಿ ರಚನೆ ಮಾಡಲಾಗಿದೆ. ಕೆಲವು ವಿವಿಗಳಲ್ಲಿ ಅನಗತ್ಯವಾಗಿ ಹುದ್ದೆ ಭರ್ತಿ ಮಾಡಲಾಗಿದೆ. ಈ ಬಗ್ಗೆಯೂ ಪರಿಶೀಲನೆ ಮಾಡಿ ಆದಷ್ಟೂ ಬೇಗ ಖಾಲಿ ಹುದ್ದೆ ಭರ್ತಿ ಮಾಡುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಕೇವಲ 1 ಪಂದ್ಯವಾಡಿ 869 ಕೋಟಿ ನಷ್ಟ – ಭಾರೀ ಸಂಕಷ್ಟದಲ್ಲಿ ಪಾಕ್‌ ಬೋರ್ಡ್‌

ವಿವಿ ನಿವೃತ್ತಿ ನೌಕರರಿಗೆ ಪಿಂಚಣಿ ಕೊಡೋದಕ್ಕೆ ಸರ್ಕಾರ 50% ವಿವಿ 50% ಹಣ ಕೊಡಬೇಕು ಅಂತ ನಿಯಮ ಇದೆ. ಕೆಲವು ವಿವಿ ವಿಭಾಗ ಮಾಡೋವಾಗ ಸರಿಯಾಗಿ ವ್ಯವಸ್ಥೆ ವಿಭಾಗ ಮಾಡಿಲ್ಲ. ಹೀಗಾಗಿ ಸರ್ಕಾರದ ಮೇಲೆ ಇದು ಹೊರೆ ಬೀಳುತ್ತದೆ. ಈ ವರ್ಷ 91 ಕೋಟಿ ಹಣ ಸರ್ಕಾರ ಪಿಂಚಣಿಗೆ ಕೊಟ್ಟಿದೆ. ಪೂರ್ತಿ ಹಣ ಸರ್ಕಾರ ಕೊಡಬೇಕೆಂದರೆ ಅದು ಸಾಧ್ಯವಿಲ್ಲ ಎಂದರು. ಇದನ್ನೂ ಓದಿ: ಮಳವಳ್ಳಿ ಫುಡ್ ಪಾಯಿಸನ್ ಕೇಸ್ – ಆರು ಮಂದಿ ಮೇಲೆ ಎಫ್‌ಐಆರ್

Share This Article