ಕೇಂದ್ರದಿಂದ ಕೊಬ್ಬರಿ ಹಣ ಬಿಡುಗಡೆ; 24 ಸಾವಿರ ರೈತರ ಖಾತೆಗೆ 346 ಕೋಟಿ ರೂ. ಜಮೆ: ಸೋಮಣ್ಣ

Public TV
1 Min Read

ತುಮಕೂರು: ಜಿಲ್ಲೆಯಲ್ಲಿ ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿಸಿದ್ದ ಕೊಬ್ಬರಿ (Copra) ಬಾಕಿ ಹಣ 346.50 ಕೋಟಿ ರೂ.ಗಳನ್ನು 24,600 ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ ಎಂದು ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ (V Somanna) ತಿಳಿಸಿದ್ದಾರೆ.

ಸುಮಾರು 27 ಸಾವಿರ ರೈತರಿಂದ ಒಟ್ಟು 3.15 ಲಕ್ಷ ಕ್ವಿಂಟಲ್ ಉಂಡೆ ಕೊಬ್ಬರಿಯನ್ನು ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿಸಲಾಗಿತ್ತು. ಜಿಲ್ಲೆಯ ರೈತರಿಗೆ (Farmers) ಒಟ್ಟು 378 ಕೋಟಿ ರೂ. ಹಣ ಪಾವತಿಸಬೇಕಿತ್ತು. ಆಗಸ್ಟ್ 5ರ ವರೆಗೆ 346.50 ಕೋಟಿ ರೂ. ಜಮೆ ಮಾಡಿಸಲಾಗಿದೆ. ಇದರಿಂದ ಶೇ.92ರಷ್ಟು ರೈತರಿಗೆ (Farmers) ಹಣ ಪಾವತಿಸಿದಂತಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಬಾಕಿ ಇರುವ 2,438 ರೈತರಿಗೆ 31.65 ಕೋಟಿ ರೂ.ಗಳನ್ನು ಪಾವತಿಸಬೇಕಿದೆ. ಬಾಕಿ ಹಣವನ್ನೂ ಪಾವತಿಸುವಂತೆ ಸೂಚನೆ ನೀಡಲಾಗಿದೆ ಎಂದು ವಿವರಿಸಿದ್ದಾರೆ. ಇದನ್ನೂ ಓದಿ: 138ಕ್ಕೆ ಆಲೌಟ್‌ – 27 ವರ್ಷಗಳಲ್ಲಿ ಭಾರತಕ್ಕೆ ಮೊದಲ ಸರಣಿ ಸೋಲು; 110 ರನ್‌ ಗೆಲುವಿನೊಂದಿಗೆ ಸರಣಿ ಗೆದ್ದ ಲಂಕಾ

ನಾಫೆಡ್‌ನಿಂದ ರಾಜ್ಯಕ್ಕೆ 691 ಕೋಟಿ ರೂ. ಬರಬೇಕಿದ್ದು, ಶೀಘ್ರ ಹಣ ಬಿಡುಗಡೆ ಮಾಡುವಂತೆ ಕೋರಿ ಕೇಂದ್ರ ಕೃಷಿ ಹಾಗೂ ರೈತರ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌವ್ಹಾಣ್ ಅವರಿಗೆ ಪತ್ರ ಬರೆದಿದ್ದಾರೆ. ಇದನ್ನೂ ಓದಿ: ಶೀಘ್ರದಲ್ಲೇ ವೈದ್ಯಕೀಯ ಕಾಲೇಜುಗಳಿಗೆ 650 ಸಹಾಯಕ ಪ್ರಾಧ್ಯಾಪಕರು, 1,200 ದಾದಿಯರ ನೇಮಕ: ಶರಣಪ್ರಕಾಶ್‌ ಪಾಟೀಲ್ 

ಕೊಬ್ಬರಿ ಮಾರಾಟ ಮಾಡಿದ ರೈತರಿಗೆ ಹಣ ಬಿಡುಗಡೆಗೆ ಸಹಕರಿಸಿದ ಸಚಿವ ಸೋಮಣ್ಣ ಅವರಿಗೆ ಶಾಸಕ ಜಿ.ಬಿ ಜ್ಯೋತಿಗಣೇಶ್ ಅಭಿನಂದನೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ವಿನೇಶ್ ತರಬೇತಿಗೆ ಕೇಂದ್ರ 75 ಲಕ್ಷ ರೂ. ಖರ್ಚು ಮಾಡಿದೆ – ಮನ್ಸುಖ್ ಮಾಂಡವಿಯಾ ಮಾಹಿತಿ

Share This Article