ಡಿಕೆಶಿ ಅವಶ್ಯಕತೆ ನಮಗಿಲ್ಲ, ಆ ಬಗ್ಗೆ ನಾವು ಯೋಚಿಸಿಯೂ ಇಲ್ಲ: ಸೋಮಣ್ಣ

1 Min Read

ಚಿಕ್ಕಮಗಳೂರು: ಡಿ.ಕೆ ಶಿವಕುಮಾರ್ (D.K Shivakumar) ಅವರ ಅವಶ್ಯಕತೆ (BJP) ಬಿಜೆಪಿಗಿಲ್ಲ. ಆ ಬಗ್ಗೆ ನಾವು ಯೋಚಿಸಿಯೂ ಇಲ್ಲ ಎಂದು ಕೇಂದ್ರ ಸಚಿವ ವಿ.ಸೋಮಣ್ಣ (V. Somanna) ಹೇಳಿದ್ದಾರೆ.

ಬಾಳೆಹೊನ್ನೂರಿನ ರಂಭಾಪುರಿ ಪೀಠದಲ್ಲಿ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ಈ ವೇಳೆ, ಡಿಕೆಶಿಗೆ ಬಿಜೆಪಿಯಿಂದ ಬೆಂಬಲದವಿದೆ ಎಂಬ ವದಂತಿ ಬಗ್ಗೆ ಪ್ರತಿಕ್ರಿಯಿಸಿದರು. ಅವರ ಅವಶ್ಯಕತೆ ನಮಗಿಲ್ಲ. ಅದರ ಬಗ್ಗೆ ನಾವು ಚಿಂತನೆಯನ್ನು ಕೂಡ ಮಾಡಿಲ್ಲ. ಬಿಜೆಪಿ ಬಲಿಷ್ಠವಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಕ್ಯಾಂಪ್‌ನಿಂದ 6 ಸಚಿವರ ದೆಹಲಿ ದಂಡೆಯಾತ್ರೆ

ಕುರ್ಚಿಗಾಗಿ ಕಾಂಗ್ರೆಸ್ ಪಕ್ಷದಲ್ಲಿ ನಡೆಯುತ್ತಿರುವ ಬೆಳವಣಿಗೆ ಬಗ್ಗೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ನಾಟಕ ಮಾಡುತ್ತಿದ್ದಾರೆ. ಲಜ್ಜೆಗೆಟ್ಟ, ಭ್ರಷ್ಟಾಚಾರ, ಮರ್ಯಾದಿ ಬಿಟ್ಟ ಸರ್ಕಾರ ಯಾವುದಾದರೂ ಇದ್ದರೆ ಅದು ರಾಜ್ಯದ ಕಾಂಗ್ರೆಸ್ ಸರ್ಕಾರ. ಭ್ರಷ್ಟಾಚಾರಕ್ಕೆ ಮತ್ತೊಂದು ಹೆಸರೇ ಸಿಎಂ ಸಿದ್ದರಾಮಯ್ಯ. ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಆರೋಪ ಮಾಡಿದ್ದ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಒಂದೇ ಒಂದು ತನಿಖೆ ಮಾಡಲಿಲ್ಲ. ಎಲ್ಲಾ ಕಾಮಗಾರಿಯಲ್ಲೂ 60% ಕಮಿಷನ್ ದಂಧೆ ಮುಂದುವರಿದಿದೆ ಎಂದು ಆರೋಪಿಸಿದ್ದಾರೆ.

ಜನರ ಭಾವನೆಗೆ ಬೆಲೆ ಕೊಡದೆ ಆಡಳಿತ ನಡೆಸುತ್ತಿರುವ ಸರ್ಕಾರ ಇದಾಗಿದೆ. ಈ ಸರ್ಕಾರದ ಪಾಪದ ಕೊಡ ತುಂಬಿ ಹೋಗಿದೆ. ಕೆಲವೇ ದಿನಗಳಲ್ಲಿ ಪ್ರಾಯಶ್ಚಿತ ಆಗುತ್ತೆ. ನಾನು ಸಿದ್ದರಾಮಯ್ಯ ಇಬ್ಬರೂ ಕೂಡ ಒಟ್ಟಿಗೆ ಮಂತ್ರಿಗಳಾಗಿದ್ದವರು. ಇಷ್ಟೊಂದು ಬಲಹೀನ, ಭ್ರಷ್ಟ ಸರ್ಕಾರ ನಾನೆಲ್ಲೂ ನೋಡಿಲ್ಲ. ಸರ್ಕಾರ ವಿಸರ್ಜನೆ ಮಾಡಿ ಜನಾದೇಶಕ್ಕೆ ಹೋಗಲಿ ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ನನ್ನನ್ನು ದೆಹಲಿಗೆ ಬರುವಂತೆ ಕರೆದಿಲ್ಲ: ಡಿಕೆಶಿ

Share This Article