ಮೇ 16ರ ಬಳಿಕ ಕೊರೊನಾ ಮುಕ್ತ ಆಗುತ್ತಾ ಭಾರತ?

Public TV
1 Min Read

ನವದೆಹಲಿ: ಭಾರತದಲ್ಲಿ ಮೇ 16ರ ಬಳಿಕ ಹೊಸ ಕೊರೊನಾ ಸೋಂಕಿತರು ಇರುವುದಿಲ್ಲ ಎಂದು ಸಂಶೋಧನಾ ಅಧ್ಯಯನ ವರದಿ ಹೇಳಿದೆ. ನೀತಿ ಆಯೋಗದ ಸದಸ್ಯ, ವೈದ್ಯಕೀಯ ನಿರ್ವಹಣೆ ಸಂಬಂಧಿಸಿದ ಪ್ರಮುಖ ಅಧಿಕಾರಿ ವಿ.ಕೆ.ಪಾಲ್ ನೇತೃತ್ವದಲ್ಲಿ ನಡೆದ ಅಧ್ಯಯನದಲ್ಲಿ ಈ ಅಂಶವನ್ನು ಉಲ್ಲೇಖಿಸಲಾಗಿದೆ.

ಲಾಕ್‍ಡೌನ್ ಮೂಲಕ ಕೊರೊನಾ ಸೋಂಕು ಹರಡುವ ಚೈನ್ ಕಟ್ ಆಗಿದ್ದು, ದ್ವಿಗುಣಗೊಳ್ಳುವ ಅವಧಿ ಹೆಚ್ಚಾಗಿದೆ. ನಿರಂತರ ಪರೀಕ್ಷೆಗಳಿಂದ ಸೋಂಕಿತರ ಪ್ರಮಾಣದ ಮೇ 16ರೊಳಗೆ ಹೆಚ್ಚಾಗಲಿದ್ದು, ಆ ಬಳಿಕ ಹೊಸ ಪ್ರಕರಣಗಳ ಪತ್ತೆ ಅನುಮಾನ ಎನ್ನಲಾಗಿದೆ.

ಅಧ್ಯಯನದ ಪ್ರಕಾರ, ಮೇ 3ರ ಬಳಿಕ ದಿನವೊಂದಕ್ಕೆ 1,500 ಹೊಸ ಪ್ರಕರಣಗಳು ಕಾಣಸಿಗಬಹುದು. ಮೇ 12ರ ಬಳಿಕ ಇದು 1,000ಕ್ಕೆ ಇಳಿಕೆಯಾಗಲಿದೆ. ಮೇ 16ರ ಬಳಿಕ ಹೊಸ ಪ್ರಕರಣಗಳ ಪತ್ತೆ ಅನುಮಾನ ಎಂದು ಅಂದಾಜಿಸಲಾಗಿದೆ. ಒಟ್ಟಾರೆ ಭಾರತದಲ್ಲಿ ಸೋಂಕಿತರ ಸಂಖ್ಯೆ 35 ಸಾವಿರಕ್ಕೆ ಏರಿಕೆಯಾಗಬಹುದು ಎಂದು ವಿಶ್ಲೇಷಿಸಲಾಗಿದೆ.

ಈ ವರದಿಯನ್ನು ಕೆಲವು ಸ್ವತಂತ್ರ ತಜ್ಞರು ನಿರಾಕರಿಸಿದ್ದಾರೆ. ಮೇ 16ರ ಬಳಿಕ ನಿಯಂತ್ರಣಕ್ಕೆ ಬರುವುದಾದರೆ ಅದರ ಲಕ್ಷಣಗಳು ಗೋಚರವಾಗಬೇಕಿತ್ತು. ಮಹಾರಾಷ್ಟ್ರ, ದೆಹಲಿ, ಗುಜರಾತ್‍ನಲ್ಲಿ ಕೊರೊನಾ ಸೋಂಕು ಗಣನೀಯ ಏರಿಕೆ ಇನ್ನೂ ಕಂಡು ಬರುತ್ತಿದೆ. ಯಾವ ಆಧಾರದ ಮೇಲೆ ಸಂಶೋಧನೆ ನಡೆದಿದೆ ಎಂಬುದು ಗೊತ್ತಿಲ್ಲ ಎಂದು ತಜ್ಞರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *