ಚಿರತೆಯನ್ನು ಸಜೀವ ದಹನ ಮಾಡಿದ್ದ 150 ಗ್ರಾಮಸ್ಥರ ವಿರುದ್ಧ FIR ದಾಖಲು

Public TV
1 Min Read

ಡೆಹರಾಡೂನ್: ಅರಣ್ಯಾಧಿಕಾರಿಗಳು ಹಿಡಿದ ಚಿರತೆಯೊಂದನ್ನು ಸಜೀವ ದಹನ ಮಾಡಿದ್ದ 150 ಗ್ರಾಮಸ್ಥರ ವಿರುದ್ಧ ಪ್ರಕರಣ ದಾಖಲಾದ ಘಟನೆ ಉತ್ತರಖಂಡದಲ್ಲಿ ನಡೆದಿದೆ.

ಉತ್ತರಖಂಡದ ಪೌರಿ ಗಾರ್ವಾಲ್ ಜಿಲ್ಲೆಯ ಹಳ್ಳಿಯೊಂದರ ಅರಣ್ಯದಲ್ಲಿ 7 ವರ್ಷದ ಗಂಡು ಚಿರತೆಯನ್ನು ಅಧಿಕಾರಿಗಳು ಸೆರೆಹಿಡಿದಿದ್ದರು. ಈ ವಿಷಯ ತಿಳಿದ ಜನರ ಗುಂಪೊಂದು ಸ್ಥಳಕ್ಕೆ ಧಾವಿಸಿ ಅಧಿಕಾರಿಗಳ ಸಮ್ಮುಖದಲ್ಲಿ ಸಜೀವ ದಹನ ಮಾಡಿದ್ದಾರೆ.

crime

ಈ ತಿಂಗಳ ಆರಂಭದಲ್ಲಿ ಚಿರತೆಯೊಂದರಿಂದ ಮಹಿಳೆಯೊಬ್ಬರು ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ಸ್ಥಳೀಯರು ಆಕ್ರೋಶಗೊಂಡಿದ್ದರು. ಆದರೆ, ಮಹಿಳೆಯ ಮೇಲೆ ಮಾರಣಾಂತಿಕ ದಾಳಿ ನಡೆಸಿದ ಚಿರತೆ ಅದೇ ಚಿರತೆಯೇ ಎಂಬುದು ಸ್ಪಷ್ಟವಾಗಿಲ್ಲ. ಸ್ಥಳೀಯ ಗ್ರಾಮ ಪ್ರಧಾನ್ ಮತ್ತು ಇತರ 150 ಜನರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ ಮತ್ತು ಇತರ ಸಂಬಂಧಿತ ಕಾನೂನುಗಳ ಅಡಿಯಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ.

ಜಿಲ್ಲಾ ಅರಣ್ಯಾಧಿಕಾರಿ ಮುಖೇಶ್ ಶರ್ಮಾ ಮಾತನಾಡಿ, ಮೇ 15 ರಂದು ಜಿಲ್ಲೆಯ ಸಪ್ಲೋಡಿ ಗ್ರಾಮದಲ್ಲಿ ಸುಷ್ಮಾ ದೇವಿ(47) ಅವರನ್ನು ಚಿರತೆ ಕೊಂದಿತು. ಈ ಹಿನ್ನೆಲೆಯಲ್ಲಿ ಅರಣ್ಯ ಅಧಿಕಾರಿಗಳು ಚಿರತೆಯನ್ನು ಹಿಡಿಯಲು ಎರಡು ವಿಭಿನ್ನ ಸ್ಥಳಗಳಲ್ಲಿ ಬೋನ್‍ಗಳನ್ನು ಇರಿಸಿದ್ದರು. ಇದನ್ನೂ ಓದಿ: ಅಜ್ಮೀರ್ ದರ್ಗಾ ದೇವಾಲಯವಾಗಿತ್ತು – ಸಮೀಕ್ಷೆಗೆ ಹಿಂದೂ ಸಂಘಟನೆ ಆಗ್ರಹ

POLICE JEEP

ಇದರಲ್ಲಿ ಒಂದು ಬೋನಿಗೆ ಚಿರತೆ ಸಿಕ್ಕಿಬಿದ್ದಿತ್ತು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ಅಲ್ಲಿ ಅವರು ಸ್ಥಳೀಯರೊಂದಿಗೆ ಮಾತನಾಡಿದರು, ಆದರೆ ಸ್ಥಳೀಯ ಗ್ರಾಮ ಪ್ರಧಾನ್ ನೇತೃತ್ವದಲ್ಲಿ ಕೋಪಗೊಂಡ ಗುಂಪು ಪಂಜರದ ಮೇಲೆ ದಾಳಿ ಮಾಡಿದೆ. ಪೆಟ್ರೋಲ್ ಸುರಿದು ಒಣ ಹುಲ್ಲಿನ ಮೇಲೆ ಎಸೆದು ಬೆಂಕಿ ಹಚ್ಚಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿಗಳು ಅವರನ್ನು ತಡೆಯಲು ಪ್ರಯತ್ನಿಸಿದರೂ ವಿಫಲವಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಗುಜರಿಗೆ ಹಾಕೋ ಬಿಎಂಟಿಸಿ ವಾಯವ್ಯ ಸಾರಿಗೆ ಮಾರಾಟ- 50 ಸಾವಿರ ರೂ.ಗೊಂದು ಬಸ್

Share This Article
Leave a Comment

Leave a Reply

Your email address will not be published. Required fields are marked *