ಉತ್ತರ ಕನ್ನಡ | ಕರ್ನಲ್‌ ಕಂಬದ ಬಳಿ ಗುಡ್ಡ ಕುಸಿತ – ಮಳೆಗೆ ಜಿಲ್ಲೆಯಲ್ಲಿ 5 ಮನೆಗಳು ಸಂಪೂರ್ಣ ನಾಶ

Public TV
1 Min Read

ಕಾರವಾರ: ಉತ್ತರ ಕನ್ನಡ (Uttara Kannada) ಜಿಲ್ಲೆಯಲ್ಲಿ ಅಲ್ಪ ಮಳೆ (Rain) ಕಡಿಮೆಯಾದರೂ ಅಲ್ಲಲ್ಲಿ ಭೂ ಕುಸಿತದ (Landslide) ಆತಂಕ ತಂದೊಡ್ಡಿದೆ. ಜಿಲ್ಲೆಯಲ್ಲಿ ಈವರೆಗೆ ಮಳೆಯಿಂದ 167 ಮನೆಗಳು ಅಲ್ಪ ಹಾನಿಗೊಳಗಾಗಿವೆ. ಐದು ಮನೆಗಳು ಸಂಪೂರ್ಣ ಕುಸಿದು ಬಿದ್ದಿವೆ. ಯಲ್ಲಾಪುರ ಹಾಗೂ ಜೋಯಿಡಾ ಭಾಗದಲ್ಲೇ ಅತೀ ಹೆಚ್ಚು ಮನೆಗಳು ಹಾನಿಯಾಗಿವೆ.

ಹೊನ್ನಾವರದ ಕರ್ನಲ್ ಕಂಬದ ಬಳಿ ಗುಡ್ಡ ಕುಸಿತ
ಹೊನ್ನಾವರ ಪಟ್ಟಣದ ರಾಷ್ಟ್ರೀಯ ಹೆದ್ದಾರಿಯ ಕರ್ನಲ್ ಕಂಬದ ಹತ್ತಿರ ಗುಡ್ಡ ಕುಸಿದಿದೆ. ಗುಡ್ಡ ಕುಸಿತದಿಂದ ವಾಹನ ಸಂಚಾರಕ್ಕೆ ಯಾವುದೇ ಅಡ್ಡಿ ಉಂಟಾಗಿಲ್ಲ.

ಐ.ಆರ್.ಬಿ ಸಿಬ್ಬಂದಿ ತೆರವುಗೊಳಿಸುವ ಕೆಲಸ ಮಾಡಿದ್ದಾರೆ. ಗುಡ್ಡ ಕುಸಿತ ಸ್ಥಳದಲ್ಲಿ ಹೋಟೆಲ್ ಕೂಡ ಇರುವುದರಿಂದ ಮಳೆಗಾಲದಲ್ಲಿ ಕುಸಿಯುವ ಆತಂಕ ಎದುರಾಗಿದೆ. ಕಳೆದ ವರ್ಷದ ಮಳೆಗಾಲದಲ್ಲಿ ಕೆಲವು ದಿನ ಹೋಟೆಲ್ ಬಂದ್ ಮಾಡಲಾಗಿತ್ತು. ಮಳೆಗಾಲ ಕಳೆಯುವ ತನಕ ಗುಡ್ಡದ ಸಮೀಪದ ಜನರಿಗೆ ಆತಂಕ ಉಂಟಾಗಿದೆ. ಸ್ಥಳಕ್ಕೆ ತಹಸೀಲ್ದಾ‌ರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Share This Article