ಡಾಲಿ ಧನಂಜಯ ಹುಟ್ಟು ಹಬ್ಬಕ್ಕೆ ‘ಉತ್ತರಕಾಂಡ’ ಸಿನಿಮಾದ ಖದರ್ ಲುಕ್

Public TV
1 Min Read

ವಿಜಯ್ ಕಿರಗಂದೂರು ಅರ್ಪಿಸುವ,ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ನಿರ್ಮಿಸುತ್ತಿರುವ ” ಉತ್ತರಕಾಂಡ” ಚಿತ್ರದ ನಾಯಕನಾಗಿ ಡಾಲಿ ಧನಂಜಯ ಅಭಿನಯಿಸುತ್ತಿದ್ದಾರೆ.  ಈ ಹಿಂದೆ ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಡಾಲಿ ಧನಂಜಯ ನಾಯಕನಾಗಿ ನಟಿಸಿದ್ದ “ರತ್ನನ ಪ್ರಪಂಚ” ಚಿತ್ರ ಸಹ ಪ್ರಚಂಡ ಯಶಸ್ಸು ಕಂಡಿತ್ತು. ಇದೇ ಕಾಂಬಿನೇಶನ್ ನಲ್ಲಿ “ಹೊಯ್ಸಳ” ಚಿತ್ರ ಸಹ ಬರುತ್ತಿದ್ದು, ಮೂರನೇ ಚಿತ್ರವಾಗಿ “ಉತ್ತರಕಾಂಡ” ನಿರ್ಮಾಣವಾಗಲಿದೆ.

“ದಯವಿಟ್ಟು ಗಮನಿಸಿ”, ” ರತ್ನನ ಪ್ರಪಂಚ” ದಂತಹ ವಿಭಿನ್ನ ಚಿತ್ರಗಳ ನಿರ್ದೇಶಕ ರೋಹಿತ್ ಪದಕಿ ನಿರ್ದೇಶನದಲ್ಲಿ ಈ ಚಿತ್ರ ಮೂಡಿಬರುತ್ತಿದೆ. ಕೆಲವು ದಿನಗಳ ಹಿಂದೆ ಈ ಚಿತ್ರದ ಪೋಸ್ಟರ್ ಬಿಡುಗಡೆಯಾಗಿತ್ತು. ಆದರೆ ನಾಯಕ ಯಾರು ? ಎಂಬ ಕುತೂಹಲವಿತ್ತು‌. ಆ ಕುತೂಹಲಕ್ಕೆ ಈಗ ತೆರೆ ಬಿದ್ದಿದೆ. ಚಿತ್ರದ ನಾಯಕನಾಗಿ ಡಾಲಿ ಧನಂಜಯ ಅಭಿನಯಿಸುತ್ತಿದ್ದಾರೆ. ಧನಂಜಯ ಅವರ ಹುಟ್ಟುಹಬ್ಬದ ದಿನದಂದೇ ಕೆ.ಆರ್.ಜಿ ಸ್ಟುಡಿಯೋಸ್ ಸಂಸ್ಥೆ ಈ ಸುದ್ದಿಯನ್ನು ಹಂಚಿಕೊಂಡು, ನಾಯಕನಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದೆ. ಇದನ್ನೂ ಓದಿ:ಮೂರನೇ ವಾರ ನಾಮಿನೇಷನ್‌ ಸ್ಟಾರ್ಟ್‌: ಉದಯ್‌ ಸೂರ್ಯಗೆ ಮನೆಯಿಂದ ಗೇಟ್‌ ಪಾಸ್?

“ಉತ್ತರ ಕಾಂಡ” ಉತ್ತರ ಕರ್ನಾಟಕದ ಗ್ಯಾಂಗ್ ಸ್ಟರ್ ಕಥೆ ಆಧರಿಸಿದೆ.‌ ಉತ್ತರ ಕರ್ನಾಟಕದಲ್ಲೇ ಹೆಚ್ಚಿನ ಭಾಗದ ಚಿತ್ರೀಕರಣ ನಡೆಯುತ್ತದೆ. “ಹೊಯ್ಸಳ” ಚಿತ್ರದ ನಂತರ, ಜನವರಿಯಲ್ಲಿ ಈ ಚಿತ್ರದ ಚಿತ್ರೀಕರಣ ಆರಂಭವಾಗುತ್ತದೆ ಎಂದು ನಿರ್ದೇಶಕ ರೋಹಿತ್   ತಿಳಿಸಿದ್ದಾರೆ. ಚರಣ್ ರಾಜ್ “ಉತ್ತರ ಕಾಂಡ” ಚಿತ್ರಕ್ಕೆ ಸಂಗೀತ ನೀಡುತ್ತಿದ್ದು, ಸ್ವಾಮಿ  ಛಾಯಾಗ್ರಹಣ ಹಾಗೂ ದೀಪು ಎಸ್ ಕುಮಾರ್  ಸಂಕಲನ ಹಾಗೂ ವಿಶ್ವಾಸ್ ಅವರ ಕಲಾ ನಿರ್ದೇಶನವಿರುತ್ತದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *