ಚುನಾವಣೆಗೆ ಮಾಡಿದ್ದ ಸಾಲ ತೀರಿಸಲು ಪತ್ನಿಯನ್ನು ಮಾರಿದ ಪತಿ

Public TV
1 Min Read

ಲಕ್ನೋ: ಚುನಾವಣೆಗಾಗಿ ಮಾಡಿದ್ದ ಸಾಲ ತೀರಿಸಲು ಪತಿ ಆತನ ಸ್ನೇಹಿತರಿಗೆ ತನ್ನನ್ನು ಮಾರಿದ್ದಾನೆ, ಎಂದು ಉತ್ತರಪ್ರದೇಶದ ಸ್ಥಳೀಯ ಮುಖಂಡರೊಬ್ಬರ ಪತ್ನಿ ಆರೋಪಿಸಿದ್ದಾರೆ.

ಉತ್ತರಪ್ರದೇಶದ ಪೊಲೀಸ್ ಠಾಣೆಯಲ್ಲಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ತನ್ನ ಮನೆಯಲ್ಲೇ ತನ್ನ ಮೇಲೆ ಅತ್ಯಾಚಾರ ಎಸಗಲಾಗಿದೆ ಎಂದೂ ಆಕೆ ಆರೋಪಿಸಿದ್ದಾರೆ. ಪೊಲೀಸರು ಇದೀಗ ಪತಿ ಮತ್ತು ಆತನ ಸ್ನೇಹಿತರು ಮತ್ತು ಸಂಬಂಧಿಕರ ಮೇಲೆ ಸಾಮೂಹಿಕ ಅತ್ಯಾಚಾರ, ಕ್ರಿಮಿನಲ್ ಬೆದರಿಕೆ ಮತ್ತು ಐಪಿಸಿಯ ಇತರ ಗಂಭೀರ ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

BRIBE

ದೂರಿನಲ್ಲಿ ಏನಿದೆ?: ಮಾರ್ಚ್ 10ರಂದು ಮತ ಎಣಿಕೆ ಮುಗಿದ ಗಂಟೆಗಳ ನಂತರ, ನನ್ನ ಗಂಡ ತನ್ನ ಸ್ನೇಹಿತನೊಬ್ಬನನ್ನು ಮನೆಗೆ ಕರೆದುಕೊಂಡು ಬಂದು ಆತನು ಕೊಟ್ಟ ಹಣಕ್ಕಾಗಿ ಅವನ ಜೊತೆ ಲೈಂಗಿಕ ಕ್ರೀಯೆ ನಡೆಸುವಂತೆ ಪತಿ ಒತ್ತಾಯಿಸಿದ. ಇದಕ್ಕೆ ಒಪ್ಪದಿದ್ದಾಗ ನನಗೆ ಹೊಡೆದಿದ್ದಾರೆ. ಈ ವಿಚಾರವನ್ನು ನನ್ನ ಗಂಡನ ಸಂಬಂಧಿಕರಿಗೆ ತಿಳಿಸಿದೆ ಇದಕ್ಕೆ ಅವರು ನನ್ನನ್ನು ನಿಂದಿಸಿದರು ಎಂದು ಮಹಿಳೆ ತನ್ನ ದೂರಿನಲ್ಲಿ ತಿಳಿಸಿದ್ದಾಳೆ. ಇದನ್ನೂ ಓದಿ : ಮಹಾತ್ಮ ಗಾಂಧಿ ಧರ್ಮಪತ್ನಿ ಕೂಡ ತಲೆಗೆ ಸೆರಗು ಹಾಕುತ್ತಿದ್ದರು: ಹಿಜಬ್‌ ಬೆಂಬಲಿಸಿದ ಹೆಚ್‌ಡಿಕೆ

ದೂರಿನ ಆಧಾರದ ಮೇಲೆ, ಪೋಲೀಸರು ಸೆಕ್ಷನ್ 376ಡಿ, 342, 452, 506 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸಂತ್ರಸ್ತ ಮಹಿಳೆ ತನ್ನ ಪತಿ ಹಾಗೂ ಇತರ ಮೂವರ ವಿರುದ್ಧ ದೂರು ನೀಡಿದ್ದು ಪ್ರಕರಣವನ್ನು ದಾಖಲಿಸಿಕೊಂಡಿದ್ದೇವೆ. ತನಿಖೆ ನಡೆಯುತ್ತಿದೆ ಎಂದು  ಪೊಲೀಸರು ಹೇಳಿದ್ದಾರೆ. ಇತ್ತ ಪತಿ, ಪತ್ನಿ ಮಾಡಿರುವ ಆರೋಪಗಳನ್ನು ಅಲ್ಲಗಳೆದಿದ್ದಾನೆ.

Share This Article
Leave a Comment

Leave a Reply

Your email address will not be published. Required fields are marked *