ಸಂಬಂಧಿ ಮೇಲೆ ನಿರಂತರ ಅತ್ಯಾಚಾರ – ವೀಡಿಯೊ ಮಾಡಿ ಪೋಸ್ಟ್‌ ಮಾಡ್ತಿದ್ದ ಕಾಮುಕ ಅರೆಸ್ಟ್‌

1 Min Read

ಲಕ್ನೋ: ಸಂಬಂಧಿಯ ಮೇಲೆಯೇ ನಿರಂತರ ಅತ್ಯಾಚಾರ ಎಸಗಿ, ವೀಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ (Social Media) ಹಂಚಿಕೊಂಡಿದ್ದ ಕಾಮುಕನನ್ನು ಉತ್ತರ ಪ್ರದೇಶದ (Uttar Pradesh) ಪೊಲೀಸರು (Police) ಬಂಧಿಸಿದ್ದಾರೆ.

ಬಲ್ಲಿಯಾ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಮಹಿಳೆ ಮೇಲೆ ಅದೇ ಊರಿನ 40 ವರ್ಷದ ವ್ಯಕ್ತಿ ಈ ಕೃತ್ಯ ಎಸಗಿದ್ದಾನೆ. ಆಕೆಯ ಆಕ್ಷಾಪಾರ್ಹ ವೀಡಿಯೋಗಳನ್ನು ರೆಕಾರ್ಡ್‌ ಮಾಡಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾನೆ. ಅಲ್ಲದೇ ಆಕೆಯ ಕುಟುಂಬದ ವಿರುದ್ಧ ಸುಳ್ಳು ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾಳೆ. ಇದನ್ನೂ ಓದಿ: ಕೋಲಾರ | ಮದುವೆ ನಿರಾಕರಿಸಿದ್ದಕ್ಕೆ ಎರಡು ಮಕ್ಕಳ ತಾಯಿಯನ್ನು ಕೊಂದ ವಿವಾಹಿತ!

ದೂರಿನ ಆಧಾರದ ಮೇಲೆ, ಜ.3 ರಂದು ಆರೋಪಿಯ ವಿರುದ್ಧ ಅತ್ಯಾಚಾರ, ಕ್ರಿಮಿನಲ್ ಬೆದರಿಕೆ ಮತ್ತು ಐಟಿ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಬಲಿಯಾ ಎಸ್‌ಪಿ ಓಂವೀರ್ ಸಿಂಗ್ ಅವರು ನೀಡಿದ ಸುಳಿವಿನ ಮೇರೆಗೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ತಂದೆ ಎದುರೇ ಕೊಳದಲ್ಲಿ ಮುಳುಗಿ ಪ್ರಾಣ ಬಿಟ್ಟ ಬಾಲಕರು!

Share This Article