ಲಕ್ನೋ: ಉತ್ತರ ಪ್ರದೇಶದ (Uttar Pradesh) ಮುಜಾಫರ್‌ನಗರದಲ್ಲಿ ಸ್ಪೆಷಲ್ ಟಾಸ್ಕ್ ಫೋರ್ಸ್ (ಎಸ್‌ಟಿಎಫ್) ತಂಡವು, 4 ಟೈಮ್ ಬಾಂಬ್‌ಗಳನ್ನು ವಶಪಡಿಸಿಕೊಂಡಿದ್ದು, ಇಬ್ಬರನ್ನು ಬಂಧಿಸಲಾಗಿದೆ.
ಬಂಧಿತರಲ್ಲಿ ಒಬ್ಬ ಆರೋಪಿಯ ಹೆಸರು ಜಾವೇದ್ ಎಂದು ಗುರುತಿಸಲಾಗಿದೆ. ಆತನಿಂದ ನಾಲ್ಕು ಬಾಂಬ್‌ಗಳನ್ನು (Time Bombs) ವಶಕ್ಕೆ ಪಡೆಯಲಾಗಿದೆ. ಇದನ್ನೂ ಓದಿ: ಬಣ್ಣದ ಕಾರ್ಖಾನೆಯಲ್ಲಿ ಭೀಕರ ಅಗ್ನಿ ದುರಂತ – 11 ಮಂದಿ ಸಜೀವ ದಹನ
ಇಬ್ಬರೂ ಆರೋಪಿಗಳನ್ನು ಎಸ್‌ಟಿಎಫ್ ಮತ್ತು ಗುಪ್ತಚರ ಸಂಸ್ಥೆಗಳು ಹೆಚ್ಚಿನ ವಿಚಾರಣೆ ನಡೆಸುತ್ತಿವೆ. ಬಾಂಬ್‌ಗಳನ್ನು ಡಿಫ್ಯೂಸ್ ಮಾಡಲು ಮೀರತ್‌ನಿಂದ ಬಾಂಬ್ ನಿಷ್ಕ್ರಿಯ ದಳವನ್ನು ಕರೆಸಲಾಯಿತು. ನಗರದ ಖಲಾಪರ್ ಪ್ರದೇಶದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿಗಳಲ್ಲಿ ಒಬ್ಬನ ಕೈವಾಡ 2013ರ ಮುಜಾಫರ್‌ನಗರ ಗಲಭೆಯಲ್ಲಿಯೂ ಇತ್ತು. 2013ರಲ್ಲಿಯೂ ಆರೋಪಿಗಳಿಂದ ಬಾಂಬ್‌ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಇದನ್ನೂ ಓದಿ: ಚುನಾವಣಾ ಬಾಂಡ್ ರದ್ದು; ಮೋದಿ ಭ್ರಷ್ಟ ನೀತಿಗಳಿಗೆ ಮತ್ತೊಂದು ಉದಾಹರಣೆ ಎಂದ ರಾಹುಲ್ ಗಾಂಧಿ