ಯುಪಿಯಲ್ಲಿ ‘ಬುಲ್ಡೋಜರ್ ಬಾಬಾ’ ಅಬ್ಬರ – ಮೋದಿ, ಯೋಗಿ ಆರ್ಭಟಕ್ಕೆ ಧೂಳೀಪಟ

Public TV
2 Min Read

ಲಕ್ನೋ: ಉತ್ತರ ಪ್ರದೇಶದಲ್ಲಿ ‘ಬುಲ್ಡೋಜರ್ ಬಾಬಾ’ ಎಂದೇ ಖ್ಯಾತರಾಗಿದ್ದ ಯೋಗಿ ಆದಿತ್ಯಾನಾಥ್ ಕಮಾಲ್ ಮಾಡಿದ್ದಾರೆ. 2024ರ ಲೋಕಸಭೆ ಚುನಾವಣೆಗೆ ಸೆಮಿಫೈನಲ್ ಎಂದೇ ಪರಿಗಣಿತವಾಗಿದ್ದ ಉತ್ತರಪ್ರದೇಶ ಎಲೆಕ್ಷನ್‌ನಲ್ಲಿ ಬಿಜೆಪಿ ಗೆದ್ದು ಬೀಗಿದೆ.

ಎಕ್ಸಿಟ್ ಪೋಲ್‌ಗಳು ಹೇಳಿದಂತೆಯೇ ಯೋಗಿ-ಮೋದಿ ಜೋಡಿ ಉತ್ತರ ಪ್ರದೇಶದಲ್ಲಿ ಅದ್ವಿತೀಯ ಎನಿಸುವಷ್ಟರ ಮಟ್ಟಿಗೆ ಮೋಡಿ ಮಾಡಿದೆ. ಕಳೆದ ಬಾರಿಯಷ್ಟು ಸೀಟ್ ಗಳಿಸದೇ ಇದ್ದರೂ, ಭಾರೀ ಬಹುಮತ ಗಳಿಸಿದೆ. ಈ ಮೂಲಕ ಉತ್ತರ ಪ್ರದೇಶದ ಇತಿಹಾಸದಲ್ಲೇ 37 ವರ್ಷಗಳ ಬಳಿಕ ಮೊದಲ ಬಾರಿಗೆ, ಒಂದೇ ಪಕ್ಷ ಸತತ ಎರಡನೇ ಬಾರಿ ಅಧಿಕಾರವನ್ನು ಕೈವಶ ಮಾಡಿಕೊಂಡಿದೆ.

ಎಷ್ಟೇ ಕಸರತ್ತು ಮಾಡಿದರೂ ಈ ಬಾರಿಯೂ ಸಮಾಜವಾದಿ ಪಕ್ಷಕ್ಕೆ ಅಧಿಕಾರ ಗಗನ ಕುಸುಮವಾಗಿದೆ. ಮಾಯಾವತಿ ನೇತೃತ್ವದ ಬಿಎಸ್‌ಪಿ ಇದೇ ಮೊದಲ ಬಾರಿಗೆ ಒಂದಂಕಿ ಕುಸಿದು ಪಾತಳಕ್ಕೆ ಜಾರಿದೆ. ಕಾಂಗ್ರೆಸ್ ಪಕ್ಷವಂತೂ ಹೆಚ್ಚು ಕಡಿಮೆ ಮಾಯವಾಗುವ ಹಂತ ತಲುಪಿದೆ. ಪ್ರಿಯಾಂಕಾ ಗಾಂಧಿ ನಾಯಕತ್ವ ಪರೀಕ್ಷೆ ಇಲ್ಲಿ ವಿಫಲವಾಗಿದೆ. ಇದನ್ನೂ ಓದಿ: ಬಿಜೆಪಿಗೆ ಗೆಲುವು – 4 ದಾಖಲೆ ಬರೆದ ಸಿಎಂ ಯೋಗಿ

ಸಿಎಂ ಯೋಗಿ ಆದಿತ್ಯನಾಥ್ ಅವರೇ ಮತ್ತೆ ಮುಖ್ಯಮಂತ್ರಿ ಆಗುವುದು ಖಚಿತವಾಗಿದೆ. ಇಲ್ಲಿ ಮತ್ತೊಂದು ವಿಶೇಷವಿದೆ. ಜನರಿಂದ ಆಯ್ಕೆಯಾದ ಶಾಸಕರೊಬ್ಬರು ಉತ್ತರ ಪ್ರದೇಶದ ಸಿಎಂ ಆಗುತ್ತಿರುವುದು 15 ವರ್ಷದಲ್ಲಿ ಇದೇ ಮೊದಲು. ಜೊತೆಗೆ ನೋಯ್ಡಾಗೆ ಭೇಟಿಕೊಟ್ಟ ಸಿಎಂ ಗೆಲ್ಲಲ್ಲ ಎಂಬ ಮೂಢ ನಂಬಿಕೆಯನ್ನು ಯೋಗಿ ಆದಿತ್ಯನಾಥ್ ಸುಳ್ಳು ಮಾಡಿದ್ದಾರೆ.

ರೈತ ಹತ್ಯಾಕಾಂಡಕ್ಕೆ ಸಾಕ್ಷಿಯಾಗಿದ್ದ ಲಖಿಂಪುರದಲ್ಲಿಯೂ ಬಿಜೆಪಿ ಕ್ಲೀನ್ ಸ್ವೀಪ್ ಮಾಡಿದೆ. ಉತ್ತರಪ್ರದೇಶದ ಬಿಜೆಪಿ ಉಸ್ತುವಾರಿಗಳ ಪೈಕಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕೂಡ ಒಬ್ಬರು. ಯುವ ಅಧ್ಯಕ್ಷ ತೇಜಸ್ವಿ ಸೂರ್ಯ ಕೂಡ ಪ್ರಚಾರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಇದನ್ನೂ ಓದಿ: Bulldozer is Back – ಟ್ರೆಂಡ್‌ ಆಯ್ತು ಬುಲ್ಡೋಜರ್‌

ಮತ್ತೆ ಯೋಗಿ ಸರ್ಕಾರ್:
ಒಟ್ಟು ಸ್ಥಾನಗಳು 403, ಬಹುಮತಕ್ಕೆ 202
ಬಿಜೆಪಿ – 253
ಅಪ್ನಾದಳ – 11
ನಿಷಾದ್ – 06
ಎಸ್‌ಪಿ – 114
ಆರ್‌ಎಲ್‌ಡಿ – 09
ಎಸ್‌ಬಿಎಸ್‌ಪಿ – 05
ಬಿಎಸ್‌ಪಿ – 01
ಕಾಂಗ್ರೆಸ್ – 02
ಎಂಐಎಂ – 00
ಇತರರು – 00 ಇದನ್ನೂ ಓದಿ: 5 ವರ್ಷ ಪೂರ್ಣಗೊಳಿಸಿ ಮತ್ತೆ ಅಧಿಕಾರಕ್ಕೇರಿದ ಮೊದಲ ಯುಪಿ ಸಿಎಂ ಯೋಗಿ

 

2017 ಫಲಿತಾಂಶ:
ಬಿಜೆಪಿ 312, ಬಿಎಸ್‌ಪಿ 19, ಎಸ್‌ಪಿ+ಕಾಂಗ್ರೆಸ್ 54, ಇತರರು- 18

Share This Article
Leave a Comment

Leave a Reply

Your email address will not be published. Required fields are marked *