Ayodhya Deepotsav: ಶ್ರೀರಾಮ ಜನ್ಮಭೂಮಿಯಲ್ಲಿ ದೀಪೋತ್ಸವ – ಅಯೋಧ್ಯೆ ಬೆಳಗಿದ 24 ಲಕ್ಷ ಹಣತೆಗಳು

Public TV
1 Min Read

ಲಕ್ನೋ (ಅಯೋಧ್ಯೆ): ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ (Ayodhya) ದೀಪಾವಳಿ ಹಬ್ಬದ (Deepavali Featival) ಸಂಭ್ರಮ ಮುಗಿಲು ಮುಟ್ಟಿದೆ. ಎಲ್ಲೆಲ್ಲೂ ದೀಪಗಳ ಬೆಳಕಿನಲ್ಲಿ ರಾಮನಾಮದ ಘೋಷಣೆ ಮೊಳಗಿದೆ.

ಉತ್ತರ ಪ್ರದೇಶ (Uttar Pradesh) ಸರ್ಕಾರದಿಂದ ಸರಯೂ ನದಿ ದಂಡೆಯಲ್ಲಿ ದೀಪೋತ್ಸವ ಆಯೋಜಿಸಲಾಗಿತ್ತು. ಸಿಎಂ ಯೋಗಿ ಆದಿತ್ಯನಾಥ್ (Yogi Adityanath) ಸೇರಿದಂತೆ 50ಕ್ಕೂ ಹೆಚ್ಚು ದೇಶಗಳ ರಾಯಭಾರಿಗಳು ಸಂಭ್ರಮದಲ್ಲಿ ಭಾಗಿಯಾಗಿದ್ದರು. ಬರೋಬ್ಬರಿ 24 ಲಕ್ಷ ಹಣತೆಗಳು ಅಯೋಧ್ಯೆಯನ್ನು ಬೆಳಗಿದ್ದು, ಗಿನ್ನಿಸ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲಾಯಿತು. ಇದನ್ನೂ ಓದಿ: ಮಧ್ಯಪ್ರದೇಶ ಚುನಾವಣೆ – 450 ರೂ.ಗೆ ಎಲ್‌ಪಿಜಿ, ಹೆಣ್ಣುಮಕ್ಕಳಿಗೆ ಉಚಿತ ಶಿಕ್ಷಣ ಘೋಷಿಸಿದ ಬಿಜೆಪಿ

2017ರಿಂದ ರಾಮಮಂದಿರ (RamaMandir) ಪ್ರದೇಶದಲ್ಲಿ ದೀಪೋತ್ಸವ ಆಯೋಜಿಸಲಾಗುತ್ತಿದೆ ಮತ್ತು ಪ್ರತಿ ವರ್ಷ ಹೊಸ ದಾಖಲೆ ಸೃಷ್ಟಿಸುತ್ತಿದೆ. 2022ರಲ್ಲಿ ಅಯೋಧ್ಯೆಯ ಸರಯೂ ನದಿ ತೀರದಲ್ಲಿ 16 ಲಕ್ಷ ಹಣತೆ ಬೆಳಕಿಸಲಾಗಿತ್ತು. ಈ ಬಾರಿ 25,000 ಸ್ವಯಂಸೇವಕರು ಒಟ್ಟು 51 ಘಾಟ್‌ಗಳಲ್ಲಿ 24 ಲಕ್ಷ ಹಣತೆ ಅಯೋಧ್ಯೆಯಲ್ಲಿ ಬೆಳಗಿಸಿದ್ದಾರೆ. ಇದನ್ನೂ ಓದಿ: ಕೂಡಿ ಬಾಳುವ ಸಂಸ್ಕೃತಿ ನಮಗೆ ಬಂದಿದ್ದೇ ಹಿಂದೂ ಧರ್ಮದಿಂದ: ಜಾವೇದ್ ಅಖ್ತರ್

2017ರಲ್ಲಿ 51,000 ಹಣತೆಗಳನ್ನು ಹಚ್ಚಲಾಗಿತ್ತು. 2019ರಲ್ಲಿ 4.10 ಲಕ್ಷ ಹಣತೆಗಳನ್ನು ಬೆಳಗಿದ್ದು, 2020ರಲ್ಲಿ 6 ಲಕ್ಷಕ್ಕೂ ಹೆಚ್ಚು, 2021ರಲ್ಲಿ 9 ಲಕ್ಷಕ್ಕೂ ಅಧಿಕ, 2022ರಲ್ಲಿ ಸುಮಾರು 15 ಲಕ್ಷ ದೀಪಗಳನ್ನು ಹಚ್ಚಲಾಗಿತ್ತು. ಇದು ವಿಶ್ವ ದಾಖಲೆಗೆ ಸಾಕ್ಷಿಯಾಗಿತ್ತು. ಈ ವರ್ಷ 2023ರಲ್ಲಿ 24 ಲಕ್ಷ ದೀಪ ಹಚ್ಚುವ ಮೂಲಕ ಹೊಸ ಗಿನ್ನಿಸ್ ದಾಖಲೆ ಬರೆಯಲಾಗಿದೆ. ಇದನ್ನೂ ಓದಿ: ಮತ್ತೆ ಚರ್ಚೆಯಲ್ಲಿ ಏಕರೂಪ ನಾಗರಿಕ ಸಂಹಿತೆ – ಉತ್ತರಾಖಂಡದಲ್ಲಿ ಮೊದಲು ಕಾನೂನು ಜಾರಿಗೆ ಸಿದ್ಧತೆ

Share This Article