ಚಂದ್ರಯಾನ -3 ಉಡಾವಣೆಗೆ ಕ್ಷಣಗಣನೆ: ಶುಭಕೋರಿದ ಖಾದರ್

By
1 Min Read

ಬೆಂಗಳೂರು: ಚಂದ್ರಯಾನ-3 (Chandrayaan-3) ಉಡಾವಣೆ ಯಶಸ್ವಿಯಾಗಲಿ ಎಂದು ಸ್ಪೀಕರ್ ಯು.ಟಿ ಖಾದರ್ (UT Khader) ಸದನದಲ್ಲಿ ಶುಭ ಹಾರೈಸಿದ್ದಾರೆ.

ಸದನದ ಪರವಾಗಿ ಚಂದ್ರಯಾನ-3ರ ಉಡಾವಣೆ ಯಶಸ್ವಿಯಾಗಲಿ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಸಂಭ್ರಮದ ಕ್ಷಣಗಳಲ್ಲಿ ನಾವು ಹೆಮ್ಮೆಪಡೋಣ. ಇಸ್ರೋ (ISRO) ಉಡಾವಣೆ ಮಾಡುತ್ತಿರುವ ಚಂದ್ರಯಾನ ಯಶಸ್ವಿ ಆಗಲಿ ಎಂದು ಶುಭಕೋರೋಣ ಎಂದು ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ದೆಹಲಿ ಪ್ರವಾಹ – ಸುಪ್ರೀಂ ಕೋರ್ಟ್‍ವರೆಗೂ ಉಕ್ಕಿ ಹರಿದ ಯಮುನೆ

ಶ್ರೀಹರಿಕೋಟಾದ ಸತೀಶ್ ಧವನ್ ಅಂತರಿಕ್ಷ ಕೇಂದ್ರದಿಂದ ಚಂದ್ರಯಾನ-3 ಉಪಗ್ರಹ ಶುಕ್ರವಾರ (ಇಂದು) ಮಧ್ಯಾಹ್ನ ಉಡಾವಣೆ ಆಗಲಿದೆ. ಬಾಹುಬಲಿ ರಾಕೆಟ್ ಎಂದೇ ಹೆಸರಾದ ಜಿಎಲ್‍ಎಲ್‍ವಿ ಮಾರ್ಕ್ 3 ರಾಕೆಟ್ ಇದನ್ನು ಹೊತ್ತೊಯ್ಯಲಿದೆ. ಚಂದ್ರನ ಮಣ್ಣನ್ನು ಅಧ್ಯಯನ ನಡೆಸಲು ಹಾಗೂ ಚಂದ್ರನ ಕಂಪನಗಳನ್ನು ದಾಖಲಿಸಲಿಸುವ ಉದ್ದೇಶ ಸೇರಿದಂತೆ ಹಲವು ಮಹತ್ವಾಕಾಂಕ್ಷೆಯ ಉದ್ದೇಶದಿಂದ ವಿಜ್ಞಾನಿಗಳು ಈ ಉಪಗ್ರಹ ಉಡಾವಣೆಗೆ ಸಿದ್ಧತೆ ನಡೆಸಿದ್ದಾರೆ. ಇದನ್ನೂ ಓದಿ: ಇಂದು ಚಂದ್ರಯಾನ-3 ಉಡಾವಣೆ – ನಿಮಗೆ ತಿಳಿದಿರಲೇ ಬೇಕಾದ 10 ಅಂಶಗಳು

Web Stories

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್