Asia Cup 2023: ಮಳೆಯಲ್ಲೂ ಶ್ರಮಿಸಿದ ಕ್ರೀಡಾಂಗಣ ಸಿಬ್ಬಂದಿಗೆ 42 ಲಕ್ಷ ರೂ. ಬಹುಮಾನ ಘೋಷಿಸಿದ ಜಯ್‌ ಶಾ

Public TV
2 Min Read

– ಕ್ರಿಕೆಟ್ ಅಭಿಮಾನಿಗಳಿಂದ ಭಾರೀ ಮೆಚ್ಚುಗೆ

ಕೊಲಂಬೊ: 2023ರ ಏಷ್ಯಾ ಕಪ್‌ (Asia Cup 2023) ಟೂರ್ನಿ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಟೀಂ ಇಂಡಿಯಾ (Team India) 8ನೇ ಬಾರಿಗೆ ಚಾಂಪಿಯನ್‌ ಪಟ್ಟಕ್ಕೇರಿದೆ. ಈ ನಡುವೆ ಮಾನವೀಯತೆ ಮೆರೆದಿರುವ ಬಿಸಿಸಿಐ ಕಾರ್ಯದರ್ಶಿ ಹಾಗೂ ಏಷ್ಯನ್‌ ಕ್ರಿಕೆಟ್‌ ಕೌನ್ಸಿಲ್‌ ಅಧ್ಯಕ್ಷ ಜಯ್‌ ಶಾ (Jay Shah) ಟೂರ್ನಿಯ ಯಶಸ್ಸಿಗೆ ಕಾರಣಾದ ಕ್ರೀಡಾಂಗಣ ಸಿಬ್ಬಂದಿಗೆ 42 ಲಕ್ಷ ರೂ. ಬಹುಮಾನ ಘೋಷಿಸಿದ್ದಾರೆ.

ಏಷ್ಯಾ ಕಪ್ ಪ್ರಶಸ್ತಿಯನ್ನು ಗೆದ್ದಿದ್ದು ಭಾರತವೇ ಆದರೂ ಹೃದಯ ಗೆದ್ದದ್ದು ಮಾತ್ರ ಕೊಲೊಂಬೊ ಪ್ರೇಮದಾಸ ಕ್ರೀಡಾಂಗಣದ ಸಿಬ್ಬಂದಿ. ಅನಿರೀಕ್ಷಿತ ಮಳೆ, ಗುಡುಗು-ಸಿಡಿಲಿನ ಆರ್ಭಟದ ನಡುವೆಯೂ ಮೈದಾನ ಮತ್ತು ಪಿಚ್‌ ಅನ್ನು ನೆನೆಯದಂತೆ ನೋಡಿಕೊಂಡು, ಮೈದಾನಕ್ಕೆ ನೀರು ಬಂದರೂ ಅದನ್ನು ಹರಸಾಹಸದಿಂದ ಒಣಗಿಸಿ, ಆಟಕ್ಕೆ ಅಣಿಗೊಳಿಸಿದ ಅವರು, ಟೂರ್ನಿ ಯಶಸ್ವಿಯಾಗಲು ಪ್ರಮುಖ ಕಾರಣರಾಗಿದ್ದಾರೆ. ಕೋಟ್ಯಂತರ ಕ್ರಿಕೆಟ್‌ ಅಭಿಮಾನಿಗಳು ಅವರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಮಳೆಯ (Rain) ಹನಿ ನೆಲಕ್ಕೆ ಬೀಳುತ್ತಿದ್ದಂತೆಯೇ ಚುರುಕುತನದಿಂದ ಕೆಲಸ ಮಾಡುತ್ತಾ ಇಡೀ ಮೈದಾನವನ್ನ ಟಾರ್ಪಾಲ್‌ಗಳಿಂದ ಮುಚ್ಚುತ್ತಿದ್ದರು. ಇದೀಗ ಅವರಿಗೆ ಬಹುಮಾನ ಘೋಷಣೆ ಮಾಡಲಾಗಿದೆ. ಏಷ್ಯಾಕಪ್​ ಟೂರ್ನಿಯ ಪಂದ್ಯಗಳು ನಡೆದ ಮೈದಾನದ ಪಿಚ್​ ಕ್ಯುರೇಟರ್​ ಮತ್ತು ಸಿಬ್ಬಂದಿಗೆ 50 ಸಾವಿರ ಡಾಲರ್​​ (42 ಲಕ್ಷ ರೂ.) ಬಹುಮಾನವನ್ನು ಘೋಷಿಸಲಾಗಿದೆ. ಇದನ್ನೂ ಓದಿ: Asia Cup 2023 Final: ಲಂಕಾ ದಹನ – ಭಾರತಕ್ಕೆ 8ನೇ ಬಾರಿಗೆ ಚಾಂಪಿಯನ್‌ ಕಿರೀಟ

ಈ ಬಾರಿ ಏಷ್ಯಾಕಪ್ ಟೂರ್ನಿಯಲ್ಲಿ ನಡೆದ ಬಹುತೇಕ ಎಲ್ಲಾ ಪಂದ್ಯಗಳಿಗೂ ಮಳೆ ಅಡಚಣೆ ಉಂಟು ಮಾಡಿತ್ತು. ಅದರಲ್ಲೂ ಭಾರತ ಮತ್ತು ಪಾಕಿಸ್ತಾನ ನಡುವಿನ ಗ್ರೂಪ್‌ ಹಂತದ ಪಂದ್ಯ ಹಾಗೂ ಸೂಪರ್‌ ಫೋರ್‌ ಪಂದ್ಯದ ವೇಳೆ ಮೈದಾನ ಒಣಗಿಸಲು ಹರಸಾಹಸ ಪಟ್ಟಿದ್ದರು. ಈ ಕಾರ್ಯವನ್ನ ಮೆಚ್ಚಿಕೊಂಡಿರುವ ಬಿಸಿಸಿಐ ಹಾಗೂ ಎಸಿಸಿ ಸಿಬ್ಬಂದಿಗೆ ಬಹುಮಾನ ಘೋಷಣೆ ಮಾಡಿದೆ. ಇದನ್ನೂ ಓದಿ:  Asia Cup 2023: ಒಂದೇ ಒಂದು ಕ್ಯಾಚ್‌ ಹಿಡಿದ ಜಡೇಜಾ, 6 ವಿಕೆಟ್‌ ಕಿತ್ತ ಸಿರಾಜ್‌ಗೆ ಲಕ್ಷ ಲಕ್ಷ ಬಹುಮಾನ

ಈ ಕುರಿತು ಎಕ್ಸ್‌ (ಟ್ವಿಟ್ಟರ್‌) ಖಾತೆಯಲ್ಲಿ ಟ್ವೀಟ್‌ ಮಾಡಿರುವ ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ, ಕ್ರಿಕೆಟ್​​ನ ಎಲೆ ಮರೆಯ ತಾರೆಗಳಿಗೆ ಅಭಿನಂದನೆಗಳು. ಟೂರ್ನಿಯನ್ನು ಅತ್ಯಂತ ಯಶಸ್ವಿಯಾಗಿಸಲು ಸಾಧ್ಯವಾಗಿಸಿದ ಅವರಿಗೆ 42 ಲಕ್ಷ ರೂಪಾಯಿ ಬಹುಮಾನ ಘೋಷಿಸಲು ಹರ್ಷವಾಗುತ್ತಿದೆ. ಶ್ರೀಲಂಕಾ ಕ್ರಿಕೆಟ್ ಮಂಡಳಿ ಜೊತೆ ಈ ಕಾರ್ಯ ಮಾಡುತ್ತಿದ್ದೇವೆ ಬರೆದುಕೊಂಡಿದ್ದಾರೆ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್