ಜ್ಯೂಸ್ ಜಾಕಿಂಗ್ ಎಂದರೇನು? – ಸಾರ್ವಜನಿಕ ಸ್ಥಳಗಳಲ್ಲಿ ಮೊಬೈಲ್‌ ಚಾರ್ಜಿಂಗ್‌ ಮಾಡದಂತೆ ಕೇಂದ್ರ ಎಚ್ಚರಿಕೆ ನೀಡಿದ್ದು ಏಕೆ?

Public TV
3 Min Read

– ಯುಎಸ್‌ಬಿ ಚಾರ್ಜರ್ ಬಳಸಿಯೇ ಮೊಬೈಲ್‌ನಲ್ಲಿರೋ ಡೇಟಾ ಕದಿಯುತ್ತಾರೆ ಸೈಬರ್‌ ಕಳ್ಳರು

ನವದೆಹಲಿ: ಡಿಜಿಟಲ್‌ ಯುಗದಲ್ಲಿ ಒತ್ತಡದ ಜೀವನವೇ ಹೆಚ್ಚು. ಪ್ರತಿದಿನ ನೂರೆಂಟು ಕೆಲಸ, ಮನೆಯಿಂದ ಹೊರಡುವ ಅವಸರದಲ್ಲಿ ಫೋನ್‌ ಚಾರ್ಜ್‌ ಮಾಡಲು ಮರೆತೇ ಹೋಗುತ್ತೆ. ಅಲ್ಲೇ ಹೊರಗೆ ಚಾರ್ಜ್‌ ಮಾಡಿಕೊಂಡರೆ ಆಯ್ತು ಅನ್ನೋದು ಅನೇಕರಿಗೆ ಅಭ್ಯಾಸ ಆಗಿಬಿಟ್ಟಿದೆ. ಪ್ರಯಾಣದ ವೇಳೆ ಅಥವಾ ಪ್ರಯಾಣಕ್ಕೂ ಮುನ್ನ ಚಾರ್ಜಿಂಗ್‌ ಪಾಯಿಂಟ್‌ಗಳಲ್ಲಿ (Charging Portals) ಫೋನ್‌ ಸಿಕ್ಕಿಸಿ ಬ್ಯಾಟರಿ ತುಂಬಿಸಿಕೊಳ್ಳುತ್ತಾರೆ. ಆದ್ರೆ ಇದು ಎಲ್ಲ ಸಂದರ್ಭದಲ್ಲೂ ಒಳ್ಳೆಯದಲ್ಲ. ಏಕೆಂದರೆ ಸಾರ್ವಜನಿಕ ಸ್ಥಳಗಳಲ್ಲಿ ಮೊಬೈಲ್‌ ಚಾರ್ಜ್‌ ಮಾಡುವ ವೇಳೆ ಯುಸ್‌ಬಿ ಚಾರ್ಜರ್‌ (USB Charger) ಬಳಸಿಯೇ ನಿಮ್ಮ ಮೊಬೈಲ್‌ನಲ್ಲಿರುವ ಡೇಟಾಗಳನ್ನು ಕಳವು ಮಾಡುವ ಸೈಬರ್‌ ಖದೀಮರು ಹುಟ್ಟಿಕೊಂಡಿದ್ದಾರೆ.

ಸೈಬರ್‌ ಖದೀಮರು ದುರುದ್ದೇಶಪೂರಿತವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಯುಎಸ್‌ಬಿ ಚಾರ್ಜಿಂಗ್‌ ಪೋರ್ಟ್‌ಗಳನ್ನು ಬಳಸಿಕೊಳ್ಳುತ್ತಿದ್ದಾರೆ ಅನ್ನೋ ಬೆಚ್ಚಿ ಬೀಳಿಸುವ ಸಂಗತಿ ಬೆಳಕಿಗೆ ಬಂದಿದೆ. ಅದಕ್ಕಾಗಿಯೇ ಸಾರ್ವಜನಿಕ ಸ್ಥಳಗಳಾದ ವಿಮಾನ ನಿಲ್ದಾಣಗಳು, ಕೆಫೆಗಳು, ಹೋಟೆಲ್‌ಗಳು ಮತ್ತು ಬಸ್ ನಿಲ್ದಾಣಗಳಲ್ಲಿ ಫೋನ್ ಚಾರ್ಜಿಂಗ್ ಪೋರ್ಟಲ್‌ಗಳನ್ನು ಬಳಸದಂತೆ ಸಾರ್ವಜನಿಕರಿಗೆ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ. ಅಲ್ಲದೇ ʻಯುಎಸ್‌ಬಿ ಚಾರ್ಜರ್‌ ಹಗರಣಗಳ’ (USB Charger Scam) ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದೆ. ಇದನ್ನೂ ಓದಿ: ಆಪಲ್‌ ಐಫೋನ್‌ಗೆ ಭರ್ಜರಿ 16,584 ಕೋಟಿ ರೂ. ದಂಡ

ಜ್ಯೂಸ್‌-ಜಾಕಿಂಗ್‌ ಅಂದ್ರೆ ಏನು?
ಜ್ಯೂಸ್‌ ಜಾಕಿಂಗ್‌ ಅಂದರೆ ಇದು ಸೈಬರ್‌ ದಾಳಿಯ ಒಂದು ತಂತ್ರ. ವೈರಸ್‌ ಇರುವ ಯುಎಸ್‌ಬಿ ಸ್ಟೇಷನ್‌ಗಳಲ್ಲಿ (USB stations) ಚಾರ್ಜಿಂಗ್‌ ಉಪಕರಣ ಬಳಸುವುದರಿಂದ, ಬಳಕೆದಾರರು ʻಜ್ಯೂಸ್‌-ಜಾಂಕಿಂಗ್‌ʼ (Juice Jacking) ಎನ್ನುವ ಸೈಬರ್‌ ದಾಳಿಗೆ ತುತ್ತಾಗುವ ಸಾಧ್ಯತೆ ಇದೆ. ಸೈಬರ್‌ ಖದೀಮರು ಬಳಕೆದಾರರ ದತ್ತಾಂಶಗಳನ್ನು (ಡೇಟಾ) ಕದಿಯಲು ಅಥವಾ ತಮ್ಮ ಉಪಕರಣಗಳಿಗೆ ಸಂಪರ್ಕಿಸಿರುವ ಮಾಲ್‌ವೇರ್‌ಗಳನ್ನು (ವೈರಸ್‌) ಬಳಕೆದಾರರ ಸಾಧನಗಳಲ್ಲಿ ಇನ್‌ಸ್ಟಾಲ್‌ ಮಾಡಲು ಈ ಚಾರ್ಜಿಂಗ್‌ ಸ್ಟೇಷನ್‌ಗಳನ್ನು ಬಳಸುತ್ತಾರೆ. ಈ ಬಗ್ಗೆ ಬಳಕೆದಾರರಿಗೆ ಸಣ್ಣ ಅನುಮಾನವೂ ಬಾರದಂತೆ ನೋಡಿಕೊಳ್ಳುತ್ತಾರೆ. ಈ ರೀತಿ ಸ್ಟೇಷನ್‌ಗಳಲ್ಲಿ ಮೊಬೈಲ್‌ಗಳನ್ನು ಚಾರ್ಜ್‌ಗೆ ಹಾಕಿದಾಗ ಸೈಬರ್‌ ಕಳ್ಳರು ಮೊಬೈಲ್‌ಗಳಿಂದ ಸುಲಭವಾಗಿ ಡೇಟಾಗಳನ್ನ ಎಗರಿಸುತ್ತಾರೆ. ಅಥವಾ ಸಂಪರ್ಕಿತ ಉಪಕರಣಗಳಲ್ಲಿ ಮಾಲ್‌ವೇರ್‌ ಅಥವಾ ransomware ಅನುಷ್ಟಾನಗೊಳಿಸುತ್ತಾರೆ. ಇದರಿಂದ ನಿಮ್ಮ ಪಾಸ್‌ವರ್ಡ್‌ ಲಾಕ್‌ ಓಪನ್‌ ಮಾಡಬಹುದು. ಬಳಿಕ ಡೇಟಾಗಳನ್ನ ಅಪಾಯಕಾರಿ ಕೃತ್ಯಗಳಿಗೆ ಬಳಸುವ ಸಾಧ್ಯತೆಗಳಿಗೆ ಎಂದು ಹೇಳಲಾಗಿದೆ. ಇದನ್ನೂ ಓದಿ:ಕೆಂಪು ಸಮುದ್ರದ ಅಡಿಯಲ್ಲಿದ್ದ 3 ಡೇಟಾ ಕೇಬಲ್‌ಗಳಿಗೆ ಕತ್ತರಿ – ವಿಶ್ವಾದ್ಯಂತ ಇಂಟರ್‌ನೆಟ್‌ ಸೇವೆಯಲ್ಲಿ ವ್ಯತ್ಯಯ

ಸುರಕ್ಷಿತವಾಗುವುದು ಹೇಗೆ?
* ಎಲೆಕ್ಟ್ರಿಕಲ್ ವಾಲ್ ಔಟ್‌ಲೆಟ್‌ಗಳಿಗೆ (ಗೋಡೆಗಳಿಗೆ ಅಳವಡಿಸಿದ ಪ್ಲಗ್‌ ಪಾಯಿಂಟ್‌) ಗಳಿಂದ ಚಾರ್ಜ್‌ ಮಾಡುವುದಕ್ಕೆ ಆದ್ಯತೆ ನೀಡಿ.
* ಇಲ್ಲದಿದ್ದರೆ ವೈಯಕ್ತಿಕ ಕೇಬಲ್‌ ಅಥವಾ ಪವರ್‌ ಬ್ಯಾಂಕ್‌ಗಳನ್ನು ಜೊತೆಯಲ್ಲೇ ಕೊಂಡು ಹೋಗಿ.
* ನಿಮ್ಮ ಮೊಬೈಲ್‌ ಅನ್ನು ಲಾಕ್‌ ಮಾಡಿ ಮತ್ತು ಅಪರಿಚಿತ ಸಾಧನಗಳೊಂದಿಗೆ ಪೇರಿಂಗ್‌ ಮಾಡಲಾಗದಂತೆ ಆಯ್ಕೆಯಲ್ಲಿ ಡಿಸೆಬಲ್‌ ಮಾಡಿ
* ಚಾರ್ಜ್‌ ಮಾಡುವ ಸಂದರ್ಭದಲ್ಲಿ ನಿಮ್ಮ ಮೊಬೈಲ್‌ ಸ್ವಿಚ್‌ ಆಫ್‌ ಆಗಿರುವಂತೆ ನೋಡಿಕೊಳ್ಳಿ.
* ಒಂದು ವೇಳೆ ಸೈಬರ್‌ ವಂಚನೆಯ ಪ್ರಕರಣಗಳು ಬೆಳಕಿಗೆ ಬಂದಾಗ ಅಂತಗ ಘಟನೆಗಳನ್ನು www.cybercrime.gov.in ವೆಬ್‌ಸೈಟ್‌ ಮೂಲಕ ದೂರು ನೀಡಿ, ಅಥವಾ ಸಹಾಯವಾಣಿ 1930ಗೆ ಕರೆ ಮಾಡಿ. ಇದನ್ನೂ ಓದಿ: ನಾರಿಶಕ್ತಿ ಅಪಮಾನಗೊಳಿಸುವ ʻಸ್ತ್ರೀ ದ್ವೇಷಿʼಗಳಿರುವುದು ಬೇಸರ – ಶಾಮನೂರು ಶಿವಶಂಕರಪ್ಪ ವಿರುದ್ಧ ಸೈನಾ ನೆಹ್ವಾಲ್‌ ಕಿಡಿ

Share This Article