ಕ್ಯಾರಕಾಸ್: ವೆನೆಜುವೆಲಾದ (Venezuela) ಮೇಲೆ ಅಮೆರಿಕ (USA) ಬಾಂಬ್ ದಾಳಿ ನಡೆಸಿದೆ. ಶನಿವಾರ ನಸುಕಿನ ಜಾವ ವೆನೆಜುವೆಲಾ ಕಾಲಮಾನ 2 ಗಂಟೆಯ ವೇಳೆಗೆ ರಾಜಧಾನಿ ಕ್ಯಾರಕಾಸ್(Caracas) ಮೇಲೆ ಅಮೆರಿಕದ ವಾಯುಸೇನೆ ಏರ್‌ಸ್ಟ್ರೈಕ್ ಮಾಡಿದೆ.
ಈ ದಾಳಿಯನ್ನು ಅಮೆರಿಕ ಖಚಿತಪಡಿಸಿದ್ದು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರು ವೆನೆಜುವೆಲಾದೊಳಗಿನ ಮಿಲಿಟರಿ ಸೌಲಭ್ಯಗಳು ಸೇರಿದಂತೆ ಸ್ಥಳಗಳ ಮೇಲೆ ದಾಳಿ ಮಾಡಲು ಆದೇಶಿಸಿದ್ದಾರೆ ಎಂದು ಅಮೆರಿಕದ ಅಧಿಕಾರಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಕನಿಷ್ಠ 7 ದೊಡ್ಡ ಸ್ಫೋಟಗಳು ಸಂಭವಿಸಿದ್ದು ರಾಜಧಾನಿಯಲ್ಲಿ ಈಗ ವಿದ್ಯುತ್ ಕಡಿತಗೊಂಡಿದೆ. ಹಲವು ಯುದ್ಧ ವಿಮಾನಗಳನ್ನು ಬಳಸಿ ಅಮೆರಿಕ ಈ ದಾಳಿ ನಡೆಸಿದೆ. ಇದನ್ನೂ ಓದಿ: ʻನೊಬೆಲ್ ಶಾಂತಿ ಪ್ರಶಸ್ತಿʼಯನ್ನ ಟ್ರಂಪ್‌ಗೆ ಅರ್ಪಿಸಿದ ವೆನೆಜುವೆಲಾದ ಕೊರಿನಾ ಮಚಾದೋ
Footage showing a massive explosion earlier at Higuerote Airport in the State of Miranda, Northern Venezuela, with the secondary explosions and fire suggesting a strike against a surface-to-air missile launcher with the Venezuelan Air Force. pic.twitter.com/VlSRMMdgE1
— OSINTdefender (@sentdefender) January 3, 2026
ವೆನೆಜುವೆಲಾದ ರಕ್ಷಣಾ ಸಚಿವ ವ್ಲಾಡಿಮಿರ್ ಪ್ಯಾಡ್ರಿನೊ ಲೋಪೆಜ್ ಅವರ ಮನೆಯನ್ನು ಗುರಿಯಾಗಿಸಿಕೊಂಡು ವೈಮಾನಿಕ ದಾಳಿ ನಡೆದಿದೆ. ರಾಜಧಾನಿ ಕ್ಯಾರಕಾಸ್‌ನ ಉತ್ತರದಲ್ಲಿರುವ ಲಾ ಗುಯಿರಾ ಬಂದರು ಮೇಲೆಯೂ ಬಾಂಬ್ ದಾಳಿ ನಡೆದಿದೆ. ಇದನ್ನೂ ಓದಿ: ನೈಜೀರಿಯಾದಲ್ಲಿ ಕ್ರೈಸ್ತರ ನರಮೇಧ – ಉಗ್ರರ ಮೇಲೆ ಅಮೆರಿಕ ಬಾಂಬ್ ದಾಳಿ
ಮಾದಕವಸ್ತು ಭಯೋತ್ಪಾದನೆ ಮತ್ತು ಮಾದಕವಸ್ತು ಕಳ್ಳಸಾಗಣೆಗೆ ವೆನೆಜುವೆಲಾ ಸಹಕಾರ ನೀಡುತ್ತಿದೆ ಎಂದು ಟ್ರಂಪ್ ಮೊದಲಿಂದಲೂ ಆರೋಪಿಸುತ್ತಾ ಬಂದಿದ್ದಾರೆ.
Footage which appears to show U.S. Army CH-47G “Chinook” Special Operations Helicopters, likely with the 160th Special Operations Aviation Regiment (SOAR), over the Venezuelan capital of Caracas. pic.twitter.com/60DCRoTeFQ
— OSINTdefender (@sentdefender) January 3, 2026
ಆರ್ಥಿಕ ನೀತಿಯಿಂದ ದಿವಾಳಿಯಾಗಿರುವ ವೆನೆಜುವೆಲಾವನ್ನು ಮಡುರೊ ಆಡಳಿತ ನಡೆಸುತ್ತಿದ್ದಾರೆ. ಮಡುರೊ ಸರ್ವಾಧಿಕಾರಿಯಾಗಿ ವರ್ತನೆ ತೋರುತ್ತಿದ್ದಾರೆ. ಅಷ್ಟೇ ವೆನೆಜುವೆಲಾ ರಷ್ಯಾ, ಚೀನಾ, ಇರಾನ್ ಜೊತೆ ಉತ್ತಮ ಸಂಪರ್ಕವನ್ನು ಹೊಂದಿದೆ. ಇದು ಅಮೆರಿಕ ಕೆಂಗಣ್ಣಿಗೆ ಕಾರಣವಾಗಿದೆ.
ಮಡುರೊ ಮಾದಕವಸ್ತು ಕಳ್ಳಸಾಗಣೆ ವಿರುದ್ಧ ಕ್ರಮ ಕೈಗೊಳ್ಳದೇ ಇದ್ದರೆ ನಾವು ದಾಳಿ ಮಾಡುತ್ತೇವೆ ಎಂದು ಟ್ರಂಪ್ ಎಚ್ಚರಿಕೆ ನೀಡಿದ್ದರು. ಈ ಎಚ್ಚರಿಕೆಯ ಬೆನ್ನಲ್ಲೇ ಟ್ರಂಪ್ ವೆನೆಜುವೆಲಾ ವಿರುದ್ಧ ಏರ್‌ಸ್ಟ್ರೈಕ್ ಮಾಡಿಸಿದ್ದಾರೆ.

