ರಷ್ಯಾದಿಂದ ಕಚ್ಚಾ ತೈಲ ಖರೀದಿಸುವಂತೆ ಅಮೆರಿಕ ಭಾರತದ ಜೊತೆ ಬೇಡಿಕೊಂಡಿದೆ: ಇರಾನ್‌

2 Min Read

ಟೆಹ್ರಾನ್‌: ರಷ್ಯಾದಿಂದ (Russia) ತೈಲ ಖರೀದಿಸುವಂತೆ ಅಮೆರಿಕ (India) ಭಾರತ ಸೇರಿದಂತೆ ಜಗತ್ತಿನ ಬಳಿ ಈಗ ಬೇಡಿಕೊಳ್ಳುತ್ತಿದೆ ಎಂದು ಇರಾನ್‌ ವಿದೇಶಾಂಗ ಸಚಿವ ಸಯ್ಯದ್ ಅಬ್ಬಾಸ್ ಅರಘ್ಚಿ(Abbas Araghchi) ಹೇಳಿದ್ದಾರೆ.

ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ ಅವರು, ರಷ್ಯಾದಿಂದ ಕಚ್ಚಾ ತೈಲ(Crude Oil) ಖರೀದಿಯನ್ನು ನಿಲ್ಲಿಸುವಂತೆ ಅಮೆರಿಕ ಒಂದು ತಿಂಗಳ ಕಾಲ ಬೆದರಿಸಿತ್ತು. ಈಗ ಇರಾನ್‌ (Iran) ಜೊತೆಗಿನ ಎರಡು ವಾರಗಳ ಯುದ್ಧದ ನಂತರ ಅಮೆರಿಕ ಭಾರತ ಸೇರಿದಂತೆ ಜಗತ್ತಿನ ಜೊತೆ ರಷ್ಯಾದಿಂದ ಕಚ್ಚಾ ತೈಲ ಖರೀದಿಸುವಂತೆ ಬೇಡಿಕೊಳ್ಳುತ್ತಿದೆ ಎಂದು ಬರೆದಿದ್ದಾರೆ.

ಇರಾನ್‌ ಮೇಲೆ ನಡೆಯುತ್ತಿರುವ ಅಕ್ರಮ ಯುದ್ಧವನ್ನು ಯುರೋಪ್‌ ಬೆಂಬಲಿಸುವ ಮೂಲಕ ರಷ್ಯಾ ವಿರುದ್ಧದ ಹೋರಾಟದಲ್ಲಿ ಅಮೆರಿಕದ ಬೆಂಬಲ ಪಡೆಯುವ ನಿರೀಕ್ಷೆಯಲ್ಲಿದೆ. ಇದು ಶೋಚನೀಯ ಎಂದು ಸಿಟ್ಟು ಹೊರಹಾಕಿದ್ದಾರೆ. ಇದನ್ನೂ ಓದಿ: ಮಧ್ಯಪ್ರಾಚ್ಯದ ಇತಿಹಾಸದಲ್ಲಿ ಭೀಕರ ದಾಳಿ – ಇರಾನಿನ ಕಿರೀಟ ಖಾರ್ಗ್ ದ್ವೀಪಕ್ಕೆ ಬಾಂಬ್‌

ಭಾರತ ಮತ್ತು ಅಮೆರಿಕ ವ್ಯಾಪಾರ ಒಪ್ಪಂದ ಮಾತುಕತೆ ಹಲವು ತಿಂಗಳಿನಿಂದ ನಡೆಯುತ್ತಾ ಬಂದಿದ್ದರೂ ಅಂತಿಮವಾಗಿರಲಿಲ್ಲ. ಭಾರತ ರಷ್ಯಾದಿಂದ ಕಚ್ಚಾ ತೈಲ ಖರೀದಿ ನಿಲ್ಲಿಸಬೇಕು ಎಂದು ಅಮೆರಿಕ ಷರತ್ತು ವಿಧಿಸಿತ್ತು. ಷರತ್ತು ವಿಧಿಸಿದ್ದರೂ ಭಾರತ ರಷ್ಯಾದಿಂದ ಕಚ್ಚಾ ತೈಲ ಖರೀದಿಯನ್ನು ನಿಲ್ಲಿಸಿರಲಿಲ್ಲ. ಇದನ್ನೂ ಓದಿ: ಇರಾನ್‌ನ ಹೊಸ ಸರ್ವೋಚ್ಚ ನಾಯಕ ಮೊಜ್ತಾಬಾ ಖಮೇನಿ ತಲೆಗೆ 92.47 ಕೋಟಿ ಬಹುಮಾನ

ಕಳೆದ ವಾರ ಅಮೆರಿಕ ರಷ್ಯಾದಿಂದ ಕಚ್ಚಾ ತೈಲ ಖರೀದಿಸಲು ಭಾರತಕ್ಕೆ 30 ದಿನಗಳ ಕಾಲ ಅನುಮತಿ ನೀಡಿರುವುದಾಗಿ ಹೇಳಿತ್ತು. ಈಗ ಕಚ್ಚಾ ತೈಲ ಬೆಲೆ ಭಾರೀ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ರಷ್ಯಾದಿಂದ ಯಾರೂ ಬೇಕಾದರೂ ಕಚ್ಚಾ ತೈಲವನ್ನು ಖರೀದಿಸಬಹುದು ಎಂದು ಹೇಳಿದೆ.  ಇದನ್ನೂ ಓದಿ: ಅಮೆರಿಕ ವಿನಾಯಿತಿ ನೀಡೋ ಮೊದಲೇ ಭಾರತದತ್ತ ಬರುತ್ತಿತ್ತು ರಷ್ಯಾದ ಹಡಗುಗಳು
Share This Article