ಪಾಕಿಸ್ತಾನದಲ್ಲಿ ಪೆಟ್ರೋಲ್‌ ದರ 55 ರೂ. ಏರಿಕೆ- ಈಗ 1 ಲೀಟರ್‌ ಪೆಟ್ರೋಲ್‌ಗೆ 321 ರೂ.

1 Min Read

ಇಸ್ಲಾಮಾಬಾದ್: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಕೊಲ್ಲಿ ಯುದ್ಧದ (Iran War) ಹಿನ್ನೆಲೆಯಲ್ಲಿ ಪಾಕಿಸ್ತಾನ (Pakistan) ಸರ್ಕಾರ ಪ್ರತಿ ಲೀಟರ್‌ ಪೆಟ್ರೋಲ್, ಡೀಸೆಲ್ ಬೆಲೆಯನ್ನು 55 ಪಾಕಿಸ್ತಾನ ರೂಪಾಯಿ (PKR)ಏರಿಕೆ ಮಾಡಿದೆ.

ಹೊಸ ಬೆಲೆಗಳ ಅನ್ವಯ ಪೆಟ್ರೋಲ್‌ ಬೆಲೆ 321.17 ರೂ. ಆಗಿದ್ದರೆ ಡೀಸೆಲ್‌ ಬೆಲೆ 275.70 ರೂ.ನಿಂದ ರಿಂದ 335.86 ರೂ.ಗೆ ಏರಿಕೆಯಾಗಲಿದೆ.

ಸಂಘರ್ಷ ಹೆಚ್ಚಾದ ನಂತರ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆಗಳು ಭಾರೀ ಏರಿಕೆಯಾದ ಬೆನ್ನಲ್ಲೇ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದನ್ನೂ ಓದಿ: ಅಮೆರಿಕದ ರಕ್ಷಣಾ ಸಂಸ್ಥೆಗಳಿಗೆ ಶಸ್ತ್ರಾಸ್ತ್ರ ಉತ್ಪಾದನೆ ನಾಲ್ಕು ಪಟ್ಟು ಹೆಚ್ಚಿಸುವಂತೆ ಟ್ರಂಪ್ ಆದೇಶ

ಅಂತರರಾಷ್ಟ್ರೀಯ ಹಣಕಾಸು ನಿಧಿ (IMF) ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ತಕ್ಷಣ ಹೆಚ್ಚಿಸುವಂತೆ ಒತ್ತಾಯಿಸಿತ್ತು.

ದೇಶದಲ್ಲಿ ಇಂಧನ ಕೊರತೆಯಾಗಬಹುದು ಎಂಬ ಸುದ್ದಿ ಹಬ್ಬಿದ್ದರಿಂದ ಪಾಕಿಸ್ತಾನದಲ್ಲಿ ಈಗ ಪೆಟ್ರೋಲ್‌ ತುಂಬಿಸಲು ಬಂಕ್‌ಗಳ ಮುಂದೆ ಜನ ಸಾಲುಗಟ್ಟಿ ನಿಂತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಬಂಕ್‌ ಮುಂದೆ ವಾಹನಗಳು ಸಾಲುಗಟ್ಟಿ ನಿಂತಿರುವ ವಿಡಿಯೋಗಳು ವೈರಲ್‌ ಆಗಿವೆ.

Share This Article