18 ವರ್ಷ ತುಂಬುವುದು ಇಷ್ಟವಿಲ್ಲ ಅಂತ ಹುಟ್ಟುಹಬ್ಬಕ್ಕೂ ಮುನ್ನವೇ ಮಗನನ್ನು ಕೊಂದ ಮಹಿಳೆ

Public TV
1 Min Read

ವಾಷಿಂಗ್ಟನ್‌: 18 ವರ್ಷ ತುಂಬಲು ಇಷ್ಟವಿಲ್ಲದ ಕಾರಣ ಹುಟ್ಟುಹಬ್ಬಕ್ಕೂ ಮುನ್ನವೇ ಅಮೆರಿಕದ ಮಹಿಳೆಯೊಬ್ಬರು ತನ್ನ ಮಗನನ್ನು ಹತ್ಯೆ ಮಾಡಿರುವ ಘಟನೆ ನಡೆದಿದೆ.

ಮಿಚಿಗನ್‌ನ ಮಹಿಳೆ ಕೇಟೀ ಲೀ (39) ತನ್ನ ಮಗನ 18 ನೇ ಹುಟ್ಟುಹಬ್ಬದ ಮುನ್ನಾ ದಿನದಂದು ಆತನನ್ನು ಕೊಲೆ ಮಾಡಿದ್ದಾಳೆ. ತನ್ನ ಜೀವನವನ್ನು ತಾನೇ ಕೊನೆಗೊಳಿಸಲು ಪುತ್ರ ಬಯಸಿದ್ದ ಎಂದು ಪೊಲೀಸರ ಬಳಿ ಹೇಳಿಕೊಂಡಿದ್ದಾಳೆ.

ಕೊನೆ ನಡೆದಿರುವ ವಿಚಾರ ತಿಳಿದು ಪೊಲೀಸರು ಸ್ಥಳಕ್ಕೆ ಧಾವಿಸಿದಾಗ, ಆರೋಪಿ ಮಹಿಳೆ ಕೇಟೀ ಲೀ ಮನೆಯಲ್ಲಿ ತನ್ನ ಮಗನನ್ನು ಹತ್ಯೆ ಮಾಡಿ ಚಾಕು ಹಿಡಿದು ನಿಂತಿದ್ದಳು. ಅಪಾರ್ಟ್‌ಮೆಂಟ್‌ ಒಳಗೆ ಪೊಲೀಸರಿಗೆ ಆರೋಪಿ ಲೀ ಅವರ ಮಗ 17 ವರ್ಷದ ಆಸ್ಟಿನ್ ಡೀನ್ ಪಿಕಾರ್ಟ್ ಶವ ಸಿಕ್ಕಿದೆ.

ಸಾಯುವುದಕ್ಕಾಗಿ ನಾನು ಮತ್ತು ಮಗ ಇಬ್ಬರೂ ಅತಿಯಾಗಿ ಮಾತ್ರೆ ಸೇವಿಸಿದ್ದೆವು ಎಂದು ಮಹಿಳೆ ತಿಳಿಸಿದ್ದಾರೆ. ದೂರಿನ ಪ್ರಕಾರ, ಮಗ ಪ್ರಜ್ಞೆ ತಪ್ಪಿದ್ದಾಗ ಚಾಕುವಿನಿಂದ ಆತನ ಗಂಟಲು ಮತ್ತು ತೋಳಿನ ಭಾಗವನ್ನು ಚಾಕುವಿನಿಂದ ಆಕೆ ಕೊಯ್ದಿದ್ದಳು ಎಂದು ವರದಿಯಾಗಿದೆ.

ನಾನು ನನ್ನ ಮಗನ ಜೊತೆ ಇರಬೇಕು. ನನ್ನನ್ನೂ ಕೊಂದುಬಿಡಿ ಎಂದು ಆರೋಪಿ ಮಹಿಳೆ ಪೊಲೀಸರ ಮುಂದೆ ದುಃಖಿಸಿರುವ ಪ್ರಸಂಗವೂ ನಡೆದಿದೆ.

Share This Article