ವಾಷಿಂಗ್ಟನ್: 3 ವರ್ಷದ ಬಾಲಕ ಆಕಸ್ಮಿಕವಾಗಿ ಶೂಟ್ ಮಾಡಿ ತಾಯಿಯನ್ನೇ ಕೊಂದಿರುವ ಘಟನೆ ಅಮೆರಿಕದ ಚಿಕಾಗೋದಲ್ಲಿ ನಡೆದಿದೆ.
ಬಾಲಕ ತನ್ನ ತಂದೆಯ ಗನ್ ಹಿಡಿದುಕೊಂಡು ಆಟವಾಡುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಗನ್‌ನ ಟ್ರಿಗರ್ ಒತ್ತಿದ್ದು, ಇದರಿಂದ ಹಾರಿದ ಬುಲೆಟ್ ತಾಯಿಗೆ ತಗುಲಿ ಆಕೆ ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕ ತನ್ನ ಪೋಷಕರ ಕಾರಿನಲ್ಲಿ ಹಿಂದುಗಡೆ ಸೀಟಿನಲ್ಲಿ ಕುಳಿತಿದ್ದಾಗ ಎಡುರುಗಡೆ ಕೂತಿದ್ದ ಪೋಷಕರಿಂದ ಗನ್‌ಅನ್ನು ತೆಗೆದುಕೊಂಡಿದ್ದಾನೆ. ಬಳಿಕ ಏನೂ ತಿಳಿಯದ ಬಾಲಕ ಗನ್ ಟ್ರಿಗರ್ ಅನ್ನು ಒತ್ತಿದ್ದಾನೆ. ಅಕಸ್ಮಾತ್ ಆಗಿ ನಡೆದ ಘಟನೆಗೆ ತಾಯಿ ಬಲಿಯಾಗಿದ್ದಾಳೆ. ಗುಂಡು ಮಹಿಳೆಯ ಕುತ್ತಿಗೆ ಹೊಕ್ಕಿದ್ದು, ತಕ್ಷಣ ಆಕೆಯ ಪತಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾನೆ. ದುರದೃಷ್ಟವಶಾತ್ ಆಕೆ ಮೃತಪಟ್ಟಿದ್ದಾಳೆ. ಇದನ್ನೂ ಓದಿ: ನನ್ನ ಸಾವಿಗೆ ಕಾರಣರಾದವರನ್ನು ಯಾವುದೇ ಕಾರಣಕ್ಕೂ ಬಿಡ್ಬೇಡಿ: ವೀಡಿಯೋ ಮಾಡಿ ವ್ಯಕ್ತಿ ಆತ್ಮಹತ್ಯೆ


 
			 
		 
		 
                                
                              
		