ಭಾರತ-ಪಾಕ್‌ ಪರಿಸ್ಥಿತಿಯನ್ನ ಅಮೆರಿಕ ಸೂಕ್ಷ್ಮವಾಗಿ ಗಮನಿಸ್ತಿದೆ – ಕದನ ವಿರಾಮ ಕುಸಿಯಬಹುದು: ಮಾರ್ಕೊ ರೂಬಿಯೊ

Public TV
1 Min Read

– ಯುದ್ಧ ನಿಲ್ಲಿಸಿದ್ದು ನಾನೇ ನಾನೇ – ಟ್ರಂಪ್‌ ಅದೇ ರಾಗ

ವಾಷಿಂಗ್ಟನ್‌: ಭಾರತ ಮತ್ತು ಪಾಕಿಸ್ತಾನ ನಡುವಿನ ಪರಿಸ್ಥಿತಿ (India-Pakistan Situation) ಹಾಗೂ ವಿಶ್ವದಾದ್ಯಂತ ಉದ್ವಿಗ್ನತೆ ಇರುವ ಇತರ ತಾಣಗಳ ಮೇಲೆ ಅಮೆರಿಕ ಪ್ರತಿದಿನ ನಿಗಾ ಇಡುತ್ತಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ (Marco Rubio) ಹೇಳಿದ್ದಾರೆ.

ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಭಾರತ ಮತ್ತು ಪಾಕಿಸ್ತಾನದ ನಡುವೆ ಸಂಘರ್ಷ ಏರ್ಪಡುವ ಸುಳಿವು ನೀಡಿದ್ದಾರೆ. ಇದನ್ನೂ ಓದಿ: ರಷ್ಯಾ ಮಾರಾಟ ಮಾಡಿದ್ದ ಅಲಾಸ್ಕಾ ಈಗ ಅಮೆರಿಕಾದ ಚಿನ್ನದ ಮೊಟ್ಟೆ!

ಭಾರತ ಮತ್ತು ಪಾಕಿಸ್ತಾನ ನಡುವಿನ ಕದನ ವಿರಾಮ (Ceasefires) ಒಪ್ಪಂದಗಳು ದುರ್ಬಲವಾಗಿವೆ. ಅವುಗಳನ್ನ ನಿರ್ವಹಣೆ ಮಾಡುವುದು ಸವಾಲಿನ ಕೆಲಸವಾಗಿದೆ. ಆದ್ದರಿಂದ ಕದನ ವಿರಾಮ ಶೀಘ್ರದಲ್ಲೇ ಸ್ಥಗಿತಗೊಳ್ಳಬಹುದು ಎಂದು ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ರಷ್ಯಾ-ಉಕ್ರೇನ್‌ ಯುದ್ಧ ನಿಲ್ಲಿಸಲು ಮುಂದಾದ ಟ್ರಂಪ್‌ಗೆ ಯುರೋಪಿಯನ್ ಒಕ್ಕೂಟ ಬೆಂಬಲ – ನಾಳೆಯ ಸಭೆ ಮೇಲೆ ನಿಗಾ

ಪ್ರತಿದಿನ ನಾವು ಭಾರತ-ಪಾಕಿಸ್ತಾನದ ನಡುವೆ ಏನಾಗುತ್ತಿದೆ? ಕಾಂಬೋಡಿಯಾ – ಥೈಲ್ಯಾಂಡ್‌ ನಡ್ವೆ ಏನಾಗುತ್ತಿದೆ? ಅನ್ನೋದರ ಮೇಲೆ ಕಣ್ಣಿಟ್ಟಿದ್ದೇವೆ. ಈ ನಿಟ್ಟಿನಲ್ಲಿ ನೋಡಿದಾಗ ಭಾರತ-ಪಾಕ್‌ ಕದನ ವಿರಾಮ ಸ್ಥಗಿತವಾಗಬಹುದು ಅನ್ನಿಸಿರುವುದಾಗಿ ತಿಳಿಸಿದರು.

ಟ್ರಂಪ್‌ ಹಾಡಿ ಹೊಗಳಿದ ರುಬಿಯೊ
ಇದೇ ವೇಳೆ ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧ ನಿಲ್ಲಿಸಿದ್ದು ಟ್ರಂಪ್‌ ಅಂತ ರೂಬಿಯೋ ಕೂಡ ಬೊಬ್ಬೆ ಹೊಡೆದಿದ್ದಾರೆ. ನಾವು ತುಂಬಾ ಅದೃಷ್ಟವಂತರು. ಶಾಂತಿ ಮತ್ತು ಶಾಂತಿ ಸಾಧನೆಯನ್ನೇ ತಮ್ಮ ಆಡಳಿತದ ಆದ್ಯತೆಯನ್ನಾಗಿ ಮಾಡಿಕೊಂಡ ಅಧ್ಯಕ್ಷರನ್ನ ಹೊಂದಿರುವುದಕ್ಕೆ ಕೃತಜ್ಞರಾಗಿರಬೇಕು ಎಂದು ಟ್ರಂಪ್‌ ಗುಣಗಾನ ಮಾಡಿದ್ದಾರೆ.

ಒಂದು ದಿನದ ಹಿಂದೆಯಷ್ಟೆ ಟ್ರಂಪ್‌ ಮಾಧ್ಯಮದಲ್ಲಿ ಮಾತನಾಡುವಾಗ ಭಾರತ ಮತ್ತು ಪಾಕ್‌ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಮತ್ತೆ ಹೇಳಿಕೊಂಡಿದ್ದರು. ಇದನ್ನೂ ಓದಿ: 2-3 ವಾರದ ನಂತ್ರ ಹೊಸ ಸುಂಕದ ಬಗ್ಗೆ ಯೋಚಿಸ್ತೀನಿ – ಭಾರತಕ್ಕೆ ಸಿಗುತ್ತಾ ಸುಂಕ ವಿನಾಯ್ತಿ?

 

Share This Article