ಅಮೆರಿಕದಲ್ಲಿ ಓದಬೇಕೇ? – ವಿಶ್ವವಿದ್ಯಾಲಯಗಳ ಜೊತೆ ಮಾತನಾಡಿ, ಅನುಮಾನ ಬಗೆಹರಿಸಿಕೊಳ್ಳಿ

Public TV
3 Min Read

ಚೆನ್ನೈ: ಭಾರತದ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ 100ಕ್ಕೂ ಹೆಚ್ಚು ಅಮೆರಿಕದ ವಿಶ್ವವಿದ್ಯಾಲಯಗಳು ಮತ್ತು ಕಾಲೇಜು ಪ್ರತಿನಿಧಿಗಳೊಂದಿಗೆ ಮಾತನಾಡಲು ಚೆನ್ನೈನಲ್ಲಿರುವ ಅಮೆರಿಕ ರಾಯಭಾರ ಕಚೇರಿ  ಯುಎಸ್ಎ  ಯುನಿವರ್ಸಿಟಿ ವರ್ಚುಯಲ್ ಫೇರ್ಸ್ ಆಯೋಜಿಸಿದೆ.

ಈ ಕಾರ್ಯಕ್ರಮದಲ್ಲಿ  ವಿದ್ಯಾರ್ಥಿಗಳು ಮತ್ತು ಅವರ ಪೋಷಕರು  ಅಮೆರಿಕ ವಿಶ್ವವಿದ್ಯಾಲಯಗಳಲ್ಲಿ ಕ್ಯಾಂಪಸ್ ಲೈಫ್, ಹಣಕಾಸು ನೆರವಿನ ಆಯ್ಕೆಗಳು, ಅರ್ಜಿ ಸಲ್ಲಿಸುವ ಪ್ರಕ್ರಿಯೆಗಳು ಮತ್ತು ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಸುರಕ್ಷತೆಯ ಮುನ್ನೆಚ್ಚರಿಕೆಗಳ ಕುರಿತು ಮಾಹಿತಿ ಪಡೆಯಬಹುದು.

ಅಮೆರಿಕದ ಮೂಲೆ ಮೂಲೆಯಲ್ಲಿರುವ ಉನ್ನತ ಶಿಕ್ಷಣ ಸಂಸ್ಥೆಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದು, ಸ್ನಾತಕ, ಸ್ನಾತಕೋತ್ತರ ಮತ್ತು ಡಾಕ್ಟೊರಲ್ ಮಟ್ಟಗಳ ವಿಸ್ತಾರ ಶ್ರೇಣಿಯ ಶೈಕ್ಷಣಿಕ ಕಾರ್ಯಕ್ರಮಗಳ ವಿವರಗಳನ್ನು ನೀಡುತ್ತವೆ. ಭಾಗವಹಿಸಲು ಯಾವುದೇ ಯಾವುದೇ ನೋಂದಣಿ ಶುಲ್ಕವಿಲ್ಲ. ಇದನ್ನೂ ಓದಿ: ಕೋಲಾರದಲ್ಲಿ ಭಾರೀ ಮಳೆ- ಬೆಳೆಗಳು ಜಲಾವೃತ, ಸಂಕಷ್ಟದಲ್ಲಿ ರೈತರು

ಅಮೆರಿಕದಲ್ಲಿ  ಮಾಸ್ಟರ್ಸ್ ಅಥವಾ ಪಿಎಚ್.ಡಿ. ಕಾರ್ಯಕ್ರಮಗಳಿಗೆ ಸೇರಲು ಬಯಸುವವರಿಗೆ ಎಜುಕೇಷನ್ ಯು.ಎಸ್.ಎ. ಯು.ಎಸ್. ಯೂನಿವರ್ಸಿಟಿ ಗ್ರಾಜುಯೇಟ್ ವರ್ಚುಯಲ್ ಫೇರ್ ಆಗಸ್ಟ್ 27ರಂದು ಶುಕ್ರವಾರ ಸಂಜೆ ಭಾರತೀಯ ಕಾಲಮಾನ 5:30ರಿಂದ ರಾತ್ರಿ 10:30ರವರೆಗೆ ನಡೆಯಲಿದೆ. ಆಸಕ್ತರು ಈ ವೆಬ್ ಸೈಟ್ ಮೂಲಕ  ನೋಂದಾಯಿಸಿಕೊಳ್ಳಬಹುದು: www.educationusa.events/undergraduatefair

ಅಮೆರಿಕದಲ್ಲಿ ಅಸೋಸಿಯೇಟ್ ಅಥವಾ ಬ್ಯಾಚುಲರ್ ಪದವಿ ಕಾರ್ಯಕ್ರಮಗಳನ್ನು ಬಯಸುವ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಎಜುಕೇಷನ್ ಯು.ಎಸ್.ಎ., ಯು.ಎಸ್. ಯೂನಿವರ್ಸಿಟಿ ಅಂಡರ್ ಗ್ರಾಜುಯೇಟ್ ವರ್ಚುಯಲ್ ಫೇರ್ ಅನ್ನು ಸೆಪ್ಟೆಂಬರ್ 3ರಂದು ಶುಕ್ರವಾರ ಭಾರತೀಯ ಕಾಲಮಾನ ಸಂಜೆ 5.30ರಿಂದ ರಾತ್ರಿ 10.30ರವರೆಗೆ ಆಯೋಜಿಸಿದೆ. ಇದನ್ನೂ ಓದಿ: ಅಘ್ಘಾನ್ ಪ್ರಜೆಗಳಲ್ಲಿ ಇ-ವೀಸಾವಿದ್ದರೆ ಮಾತ್ರ ಭಾರತ ಪ್ರವೇಶ

ಚೆನ್ನೈನ ಯು.ಎಸ್. ಕಾನ್ಸುಲ್ ಜನರಲ್ ಜ್ಯುಡಿತ್ ರೇವಿನ್ ಪ್ರತಿಕ್ರಿಯಿಸಿ, ಯು.ಎಸ್. ವಿಶ್ವವಿದ್ಯಾಲಯಗಳು ಭಾರತದ ವಿದ್ಯಾರ್ಥಿಗಳನ್ನು ಅವರ ಕಠಿಣ ಪರಿಶ್ರಮ, ಪ್ರತಿಭೆ ಮತ್ತು ಯು.ಎಸ್. ತರಗತಿಗೆ ಅವರ ಸಾಂಸ್ಕೃತಿಕ ಮತ್ತು ಬೌದ್ಧಿಕ ಕೊಡುಗೆಗಾಗಿ ನಿಜಕ್ಕೂ ಗೌರವಿಸುತ್ತವೆ. ಯುನೈಟೆಡ್ ಸ್ಟೇಟ್ಸ್ ನಲ್ಲಿ 4,500ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳು ಕಲ್ಪಿಸಿಕೊಳ್ಳಬಲ್ಲ ಅಧ್ಯಯನ ಕ್ಷೇತ್ರದಲ್ಲೂ ಕಾರ್ಯಕ್ರಮಗಳನ್ನು ನೀಡುತ್ತಿವೆ ಎಂದರು.

ನಾವು ಭಾರತೀಯ ವಿದ್ಯಾರ್ಥಿಗಳನ್ನು ಮತ್ತು ಅವರ ಪೋಷಕರನ್ನು ನಮ್ಮ ಮುಂಬರುವ ಉಚಿತ ಎಜುಕೇಷನ್ ಯು.ಎಸ್.ಎ. ಫೇರ್ಸ್ ನಲ್ಲಿ ಭಾಗವಹಿಸಲು ಆಹ್ವಾನಿಸುತ್ತೇವೆ. ನೀವು ನೇರವಾಗಿ 100 ಯು.ಎಸ್.ಉನ್ನತ ಶಿಕ್ಷಣ ಸಂಸ್ಥೆಗಳೊಂದಿಗೆ ಸಂವಹನ ನಡೆಸಬಹುದು ಮತ್ತು ಭಾರತೀಯ ವಿದ್ಯಾರ್ಥಿಗಳಿಗೆ ಏಕೆ ಯುನೈಟೆಡ್ ಸ್ಟೇಟ್ಸ್ ಆದ್ಯತೆಯ ಆಯ್ಕೆಯಾಗಿ ಉಳಿದಿದೆ ಎಂದು ಅರಿಯಬಹುದು ಎಂದು ತಿಳಿಸಿದರು.

ಯುನೈಟೆಡ್ ಸ್ಟೇಟ್ಸ್-ಇಂಡಿಯಾ ಎಜುಕೇಷನಲ್ ಫೌಂಡೇಷನ್ ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಡಂ ಗ್ರೊಸ್ಕಿ ಮಾತನಾಡಿ, ವಿಶ್ವದಾದ್ಯಂತ ಈ ಅಸಾಧಾರಣ ಸಮಯದಲ್ಲಿ ಎಜುಕೇಷನ್ ಯು.ಎಸ್.ಎ. ಇಂಡಿಯಾ ವಿದ್ಯಾರ್ಥಿಗಳಿಗೆ ಯು.ಎಸ್.ನ ಉನ್ನತ ಶಿಕ್ಷಣದ ಕುರಿತಾದ ಮಾಹಿತಿಯನ್ನು ನಮ್ಮ ಹಲವು ಆನ್ಲೈನ್ ಸಂಪನ್ಮೂಲಗಳಾದ ಮುಂದಿನ ವರ್ಚುಯಲ್ ಮೇಳಗಳ ಮೂಲಕ ದೊರೆಯುವಂತೆ ಮಾಡುತ್ತಿದೆ. ನಾವು ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಯುನೈಟೆಡ್ ಸ್ಟೇಟ್ಸ್ ನಲ್ಲಿ ಅಧ್ಯಯನ ನಡೆಸುವ ಅವರ ಕನಸುಗಳಿಗೆ ಹತ್ತಿರವಾಗಬೇಕೆಂದು ಆಹ್ವಾನಿಸುತ್ತೇವೆ ಎಂದರು.

ಎಜುಕೇಷನ್ ಯುಎಸ್ಎ ಕುರಿತು
ಎಜುಕೇಷನ್ ಯು.ಎಸ್.ಎ, ಯು.ಎಸ್. ಉನ್ನತ ಶಿಕ್ಷಣದ ಅಧಿಕೃತ ಮೂಲವಾಗಿದೆ ಮತ್ತು ಯು.ಎಸ್. ಡಿಪಾರ್ಟ್ ಮೆಂಟ್ ಆಫ್ ಸ್ಟೇಟ್ ನ ಜಾಲದ ಸದಸ್ಯನಾಗಿದ್ದು ವಿಶ್ವದಾದ್ಯಂತ 425 ಅಂತಾರಾಷ್ಟ್ರೀಯ ವಿದ್ಯಾರ್ಥಿ ಸಲಹಾ ಕೇಂದ್ರಗಳನ್ನು ಹೊಂದಿದೆ. ಎಜುಕೇಷನ್ ಯು.ಎಸ್.ಎ. ಕೇಂದ್ರಗಳು ಶಿಕ್ಷಣ ಮೇಳಗಳು ಮತ್ತು ಶಾಲೆಗಳು, ಯೂನಿವರ್ಸಿಟಿಗಳು ಮತ್ತಿತರೆ ಸಾರ್ವಜನಿಕ ಕಾರ್ಯಕ್ರಮಗಳ ಮೂಲಕ ಆನ್ಲೈನ್ ಕಾರ್ಯಕ್ರಮ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಸಂಭವನೀಯ ವಿದ್ಯಾರ್ಥಿಗಳನ್ನು ತಲುಪುವ ಮೂಲಕ ಯುನೈಟೆಡ್ ಸ್ಟೇಟ್ಸ್ ನಲ್ಲಿ ಕಲಿಯುವ ಕುರಿತು ನಿಖರ, ಸಮಗ್ರ ಮತ್ತು ಪ್ರಸ್ತುತ ಮಾಹಿತಿ ನೀಡುತ್ತದೆ.

ಎಂಟು ಎಜುಕೇಷನ್ ಯು.ಎಸ್.ಎ ಕೇಂದ್ರಗಳು ಅಹಮದಾಬಾದ್, ಬೆಂಗಳೂರು, ಚೆನ್ನೈ, ಹೈದರಾಬಾದ್, ಕೊಲ್ಕತಾ, ಮತ್ತು ದೆಹಲಿಗಳಲ್ಲಿದ್ದು ಭಾರತದ ವಿವಿಧ ಸಂಸ್ಥೆಗಳಾದ ಯುನೈಟೆಡ್ ಸ್ಟೇಟ್ಸ್-ಇಂಡಿಯಾ ಎಜುಕೇಷನಲ್ ಫೌಂಡೇಷನ್(ಯು.ಎಸ್.ಐ.ಇ.ಎಫ್); ಇಂಡೋ ಅಮೆರಿಕನ್ ಎಜುಕೇಷನ್ ಸೊಸೈಟಿ, ಅಹಮದಾಬಾದ್; ಯಷ್ನ ಟ್ರಸ್ಟ್, ಬೆಂಗಳೂರು; ಮತ್ತು ವೈ-ಆಕ್ಸಿಸ್ ಫೌಂಡೇಷನ್(ವೈಎಎಫ್), ಹೈದರಾಬಾದ್ ಆಯೋಜಿಸುತ್ತವೆ.

 ಹೆಚ್ಚಿನ ಮಾಹಿತಿಗೆ ಇ ಮೇಲ್ edusa@yashnatrust.org ಅಥವಾ 98800 41115 ಸಂಖ್ಯೆಗೆ ಕರೆ ಮಾಡಿ.

Share This Article
Leave a Comment

Leave a Reply

Your email address will not be published. Required fields are marked *