ನಾಳೆಯಿಂದ ಸುಂಕ ಸಂಗ್ರಹ ನಿಲ್ಲಿಸಲಿದೆ ಅಮೆರಿಕ – 175 ಶತಕೋಟಿ ಡಾಲರ್‌ ನಷ್ಟದ ಆತಂಕ

2 Min Read

ವಾಷಿಂಗ್ಟನ್‌: ತನ್ನ ವಿರುದ್ಧ ತಿರುಗಿಬಿದ್ದವರಿಗೆ ಸುಂಕದ ಅಸ್ತ್ರ ಪ್ರಯೋಗಿಸುತ್ತಾ ಇತರ ರಾಷ್ಟ್ರಗಳನ್ನು ತನ್ನ ಅಧೀನದಲ್ಲಿಟ್ಟುಕೊಳ್ಳಲು ಯತ್ನಿಸುತ್ತಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಸುಂಕ ನೀತಿಗೆ ಮತ್ತೆ ಹಿನ್ನಡೆಯಾಗಿದೆ. ಕಾನೂನುಬಾಹಿರವಾಗಿ ಟ್ರಂಪ್‌ ವಿಧಿಸಿದ್ದ ಆಮದು ಸುಂಕ (Trump Tariffs) ಸಂಗ್ರಹವನ್ನ ಅಮೆರಿಕ ನಿಲ್ಲಿಸಲಿದೆ ಎಂದು ಯುಎಸ್ ಕಸ್ಟಮ್ಸ್ ಮತ್ತು ಗಡಿ ರಕ್ಷಣೆ ಸಚಿವಾಲಯ ತಿಳಿಸಿರುವುದಾಗಿ ವರದಿಯಾಗಿದೆ.

1977 ರ ಅಂತಾರಾಷ್ಟ್ರೀಯ ತುರ್ತು ಆರ್ಥಿಕ ಅಧಿಕಾರ ಕಾಯ್ದೆ (IEEPA) ದುರುಪಯೋಗಪಡಿಸಿಕೊಂಡು ಟ್ರಂಪ್‌ ವಿಧಿಸಿದ್ದ ಆಮದು ಸುಂಕ ಸಂಗ್ರಹ ಮಂಗಳವಾರ ಬೆಳಗ್ಗೆ 10:30 ರಿಂದ (ಅಮೆರಿಕ ಕಾಲಮಾನ ಬೆಳಗ್ಗೆ 12.01 ರಿಂದ) ಸ್ಥಗಿತಗೊಳ್ಳಲಿವೆ ಎಂದು ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಯುಎಸ್‌ ಸುಪ್ರೀಂ ಕೋರ್ಟ್‌ (US supreme court) ಟ್ರಂಪ್‌ ಜಾಗತೀಕ ಸುಂಕ ರದ್ದುಗೊಳಿಸಿ ತೀರ್ಪುಪ್ರಕಟಿಸಿದ 3 ದಿನಗಳ ನಂತರ ಈ ಬೆಳವಣಿಗೆ ನಡೆದಿದೆ. ಇದನ್ನೂ ಓದಿ: ಮುಂದುವರಿದ ಟ್ರಂಪ್‌ ಹುಚ್ಚಾಟ – ಎಲ್ಲಾ ದೇಶಗಳ ಮೇಲಿನ ಹೆಚ್ಚುವರಿ ಸುಂಕ 15% ಗೆ ಹೆಚ್ಚಿಸಿದ ಟ್ರಂಪ್‌

ಸದ್ಯಕ್ಕೆ ಸುಂಕ ಸಂಗ್ರಹ ನಿಲ್ಲಿಸಲಾಗುತ್ತಿದೆ ಎಂದಷ್ಟೇ ಹೇಳಿಕೆಯಲ್ಲಿ ತಿಳಿಸಲಾಗಿದೆ. ಮಧ್ಯಂತರದಲ್ಲಿ ಮತ್ತೆ ಸುಂಕ ಸಂಗ್ರಹ ಮುಂದುವರಿಸುವುದಕ್ಕಾಗಲಿ ಅಥವಾ ಸಂಗ್ರಹಿಸಿರುವ ಸುಂಕ ಆಮದುದಾರರಿಗೆ ಮರುಪಾವತಿ ಮಾಡುವ ಬಗ್ಗೆಯಾಗಲಿ ವಿವರಣೆ ನೀಡಿಲ್ಲ. ಇದನ್ನೂ ಓದಿ: ಟ್ರಂಪ್‌ ಸುಂಕ ರದ್ದುಗೊಳಿಸಿದ ಯುಎಸ್ ಸುಪ್ರೀಂ ಕೋರ್ಟ್ – ಭಾರತ ಫಸ್ಟ್‌ ರಿಯಾಕ್ಷನ್‌

Donald Trump 2

ಅಲ್ಲದೇ ಕೋರ್ಟ್‌ ತೀರ್ಪು ಐಇಇಪಿಎ ಅಡಿಯಲ್ಲಿ ವಿಧಿಸಲಾದ ಸುಂಕಗಳಿಗೆ ಮಾತ್ರ ಅನ್ವಯಿಸುತ್ತದೆ. ಸೆಕ್ಷನ್‌ 232 ರಾಷ್ಟ್ರೀಯ-ಭದ್ರತಾ ಅಧಿಕಾರಗಳು ಮತ್ತು ಸೆಕ್ಷನ್ 301 ಅನ್ಯಾಯದ-ವ್ಯಾಪಾರ ಕಾನೂನುಗಳ ಅಡಿಯಲ್ಲಿ ವಿಧಿಸಿದ ಸುಂಕಗಳಿಗೆ ಅನ್ವಯಿಸುವುದಿಲ್ಲ ಎಂದು ಹೇಳಿದೆ. ಹೀಗಾಗಿ ಯುಎಸ್‌ ಸುಪ್ರೀಂ ಕೋರ್ಟ್‌ ತೀರ್ಪಿನ ಬಳಿಕ ಸೆಕ್ಷನ್‌ 232 ಹಾಗೂ ಸೆಕ್ಷನ್‌ 301 ಅಡಿಯಲ್ಲಿ ಟ್ರಂಪ್‌ ವಿಧಿಸಿರುವ ಹೆಚ್ಚುವರಿ 15% ಸುಂಕವು ಯಥಾಸ್ಥಿತಿಯಲ್ಲಿ ಮುಂದುವರಿಯುತ್ತದೆ. ಇದನ್ನೂ ಓದಿ: ಅಮೆರಿಕ ನೇತೃತ್ವದ ʻಪ್ಯಾಕ್ಸ್ ಸಿಲಿಕಾʼ ಮೈತ್ರಿಕೂಟಕ್ಕೆ ಭಾರತ ಸೇರ್ಪಡೆ

175 ಶತಕೋಟಿ ಡಾಲರ್‌ ನಷ್ಟದ ಆತಂಕ
ಇನ್ನೂ ಅಮೆರಿಕದ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪಿನಿಂದ ಅಮೆರಿಕಕ್ಕೆ ಸುಮಾರು 175 ಶತಕೋಟಿ ಡಾಲರ್‌ನಷ್ಟು ಆದಾಯ ಲಾಸ್‌ ಆಗುವ ಆತಂಕ ಎದುರಾಗಿದೆ. ಇಷ್ಟು ದೊಡ್ಡ ಮೊತ್ತವನ್ನು ಅಮೆರಿಕ ಮರುಪಾವತಿ ಮಾಡುವ ಅಪಾಯಕ್ಕೆ ಸಿಲುಕಬಹುದು. ಏಕೆಂದ್ರೆ ಕೋರ್ಟ್‌ ರದ್ದುಗೊಳಿಸಿರುವ IEEPA ಸುಂಕಗಳು ಪ್ರತಿದಿನ 500 ದಶಲಕ್ಷ ಡಾಲರ್‌ಗಿಂತಲೂ ಹೆಚ್ಚು ಆದಾಯ ತರುತ್ತಿದ್ದವು ಎಂದು ಅರ್ಥಶಾಸ್ತ್ರಜ್ಞರು ಅಂದಾಜಿಸಿದ್ದಾರೆ.

Share This Article