ವೆನೆಜುವೆಲಾದ ಮಾದಕವಸ್ತು ಬೋಟ್‌ ಮೇಲೆ ಅಮೆರಿಕ ದಾಳಿ; ಮೂವರು ಸಾವು

Public TV
1 Min Read

ವಾಷಿಂಗ್ಟನ್: ವೆನೆಜುವೆಲಾದಿಂದ ಮಾದಕವಸ್ತುಗಳನ್ನು ಸಾಗಿಸುತ್ತಿತ್ತು ಎಂಬ ಆರೋಪದಲ್ಲಿ ಬೋಟ್‌ ಮೇಲೆ ದಾಳಿ ನಡೆಸಿ, ಹಡಗಿನಲ್ಲಿದ್ದ ಮೂವರನ್ನು ಯುಎಸ್‌ ಸೇನೆ ಕೊಂದಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.

ವೆನೆಜುವೆಲಾ ಈ ಬಗ್ಗೆ ದೃಢೀಕರಿಸಿತ್ತು. ಭಯೋತ್ಪಾದಕರು ಸಮುದ್ರ ಮಾರ್ಗವಾಗಿ ಅಕ್ರಮ ಮಾದಕವಸ್ತುಗಳನ್ನು ಸಾಗಿಸುತ್ತಿದ್ದಾಗ ದಾಳಿ ನಡೆದಿದೆ ಎಂದು ಟ್ರಂಪ್, ಟ್ರೂತ್ ಸೋಶಿಯಲ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಈ ಅತ್ಯಂತ ಹಿಂಸಾತ್ಮಕ ಮಾದಕವಸ್ತು ಕಳ್ಳಸಾಗಣೆಯು ಅಮೆರಿಕದ ರಾಷ್ಟ್ರೀಯ ಭದ್ರತೆ, ವಿದೇಶಾಂಗ ನೀತಿ ಮತ್ತು ಅಮೆರಿಕದ ಪ್ರಮುಖ ಹಿತಾಸಕ್ತಿಗಳಿಗೆ ಬೆದರಿಕೆ ಒಡ್ಡುತ್ತಿವೆ ಎಂದು ಟ್ರಂಪ್‌ ಹೇಳಿದ್ದಾರೆ. ಇದನ್ನೂ ಓದಿ: ಲಂಕಾ, ಪಾಕ್‌, ಅಫ್ಘಾನ್‌, ಬಾಂಗ್ಲಾ ಆಯ್ತು.. ಈಗ ನೇಪಾಳ ನರಕ – ಸೂಪರ್‌ ಪವರ್‌ ಭಾರತದ ಸುತ್ತ ಏನಾಗ್ತಿದೆ?

ಎರಡು ವಾರಗಳ ಹಿಂದೆ ವೆನೆಜುವೆಲಾದ ಮಾದಕವಸ್ತು ಸಾಗಿಸುವ ಸ್ಪೀಡ್‌ಬೋಟ್ ಮೇಲೆ ದಾಳಿ ನಡೆಸಿ 11 ಜನರನ್ನು ಹತ್ಯೆ ಮಾಡಲಾಗಿತ್ತು. ಈಗ ಮತ್ತೊಂದು ಮಿಲಿಟರಿ ದಾಳಿ ನಡೆದಿದೆ.

ಓವಲ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಟ್ರಂಪ್, ನಮ್ಮ ಬಳಿ ಪುರಾವೆಗಳಿವೆ. ಸಮುದ್ರ ಮಾರ್ಗದಲ್ಲಿ ಡ್ರಗ್‌ ಕಳ್ಳಸಾಗಣೆ ಹೆಚ್ಚಾಗಿದೆ. ಅಮೆರಿಕದ ಮಿಲಿಟರಿ ದಾಳಿಗಳನ್ನು ಭೂಪ್ರದೇಶಕ್ಕೂ ವಿಸ್ತರಿಸಬಹುದು ಎಂದು ಟ್ರಂಪ್ ಸುಳಿವು ನೀಡಿದ್ದಾರೆ.

ಈ ತಿಂಗಳ ಆರಂಭದಲ್ಲಿ ಮೊದಲ ದಾಳಿ ನಡೆಸಿದ ನಂತರ, ಕೆರಿಬಿಯನ್‌ನಲ್ಲಿ ಅಮೆರಿಕದ ಮಿಲಿಟರಿಗೆ ಕಡಿಮೆ ಹಡಗುಗಳು ಕಾಣಿಸಿಕೊಂಡಿವೆ. ಆದರೆ, ಭೂಮಾರ್ಗದ ಮೂಲಕ ಮಾದಕವಸ್ತುಗಳನ್ನು ಕಳ್ಳಸಾಗಣೆ ಮಾಡಲಾಗುತ್ತಿದೆ ಎಂದು ಟ್ರಂಪ್‌ ತಿಳಿಸಿದ್ದಾರೆ. ಇದನ್ನೂ ಓದಿ: ಅಕ್ರಮ ವಲಸಿಗರ ಬಗ್ಗೆ ಮೃದು ಧೋರಣೆ ತೋರುವ ಸಮಯ ಮುಗಿದಿದೆ: ಕನ್ನಡಿಗನ ಹತ್ಯೆ ಬಗ್ಗೆ ಟ್ರಂಪ್‌ ರಿಯಾಕ್ಷನ್‌

Share This Article