‘ಬ್ಯಾಟ್ ಔಟ್ ಆಫ್ ಹೆಲ್ ಆಲ್ಬಂ’ನ ಯುಎಸ್ ರಾಕ್ ಸ್ಟಾರ್ ಮೀಟ್ ಲೋಫ್ ಇನ್ನಿಲ್ಲ

Public TV
1 Min Read

ವಾಷಿಂಗ್ಟನ್: ಬ್ಯಾಟ್ ಔಟ್ ಆಫ್ ಹೆಲ್ ಆಲ್ಬಂನ ಯುಎಸ್ ರಾಕ್ ಸ್ಟಾರ್ ಮೀಟ್ ಲೋಫ್(74) ನಿಧನರಾಗಿದ್ದಾರೆ.

ಮೈಕೆಲ್ ಲೀ ಅಡೆ ಎಂದು ಫೇಮಸ್ ಆಗಿರುವ ಮೀಟ್ ಲೋಫ್ ಅವರು ಆರು ದಶಕಗಳ ಕಾಲ ಅಮೇರಿಕನ್ ಸಂಗೀತ ಮತ್ತು ನಟಯನ್ನೇ ಉಸಿರಾಗಿಸಿಕೊಂಡಿದ್ದರು. ಜಗತ್ತಿನಾದ್ಯಂತ 100 ಮಿಲಿಯನ್‍ಗಿಂತಲೂ ಹೆಚ್ಚು ಆಲ್ಬಂಗಳನ್ನು ಮಾರಾಟ ಮಾಡಿದ್ದಾರೆ. ಇದನ್ನೂ ಓದಿ: ಸುಪ್ರೀಂ ಕೋರ್ಟ್ ಎದುರೇ ಬೆಂಕಿ ಹಚ್ಚಿಕೊಂಡು ವ್ಯಕ್ತಿ ಆತ್ಮಹತ್ಯೆಗೆ ಯತ್ನ

ಮೀಟ್ ಲೋಫ್ ಅವರ ಹಿಟ್‍ಗಳಲ್ಲಿ “ಬ್ಯಾಟ್ ಆಫ್ ಹೆಲ್” ನಿಂದ ಸುಮಾರು 10-ನಿಮಿಷದ ಶೀರ್ಷಿಕೆ ಗೀತೆ, ಅದೇ ಆಲ್ಬಂನಿಂದ ಪ್ಯಾರಡೈಸ್ ಬೈ ದಿ ಡ್ಯಾಶ್‍ಬೋರ್ಡ್ ಲೈಟ್ ಮತ್ತು ಐ ಡ್ ಡು ಎನಿಥಿಂಗ್ ಫಾರ್ ಲವ್ (ಆದರೆ ಅದನ್ನು ನಾನು ಮಾಡುವುದಿಲ್ಲ), 1993 ಆಲ್ಬಮ್ “ಬ್ಯಾಟ್ ಔಟ್ ಆಫ್ ಹೆಲ್, ಬ್ಯಾಕ್ ಇನ್ ಟೂ ಹೆಲ್ ಬಹಳ ಖ್ಯಾತಿ ಪಡೆದಿದೆ.

Meat Loaf

ಅವರ ಹೃದಯ ನಿಮ್ಮ ಆತ್ಮದಲ್ಲಿ ಸದಾ ಎಂದೆಂದಿಗೂ ರಾಕಿಂಗ್ ಆಗಿರುತ್ತದೆ ಅದನ್ನು ನಿಲ್ಲಿಸಬೇಡಿ. ಮೀಟ್ ಲೋಫ್ ಅವರು ನಿಧನದ ಸುದ್ದಿಯನ್ನು ಘೋಷಿಸಲು ನಮ್ಮ ಹೃದಯಕ್ಕೆ ಆಘಾತವಾಗುತ್ತಿದೆ ಎಂದು ಅವರ ಫೇಸ್‍ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ಇದನ್ನೂ ಓದಿ: ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳಲ್ಲ, ತಾವಿದ್ದಲ್ಲಿಂದಲೇ ನನಗೆ ಹರಸಿ: ನಿಖಿಲ್ ಕುಮಾರಸ್ವಾಮಿ

Share This Article
Leave a Comment

Leave a Reply

Your email address will not be published. Required fields are marked *