ಟೆಹ್ರಾನ್: ಇರಾನ್‌ನ (Iran) ಡ್ರೋನ್ ಉತ್ಪಾದನಾ ಘಟಕದ (Drone Production Plant) ಮೇಲೆ ಅಮೆರಿಕ ದಾಳಿ ಮಾಡಿರುವ ಫೋಟೊ ಬಿಡುಗಡೆ ಮಾಡಿದೆ.
ಡ್ರೋನ್ ಉತ್ಪಾದನಾ ಘಟಕ ದ್ವಂಸದ ಪೋಟೋವನ್ನು ಅಮೆರಿಕ ಸೇನೆ (US Forces) ಬಿಡುಗಡೆ ಮಾಡಿದೆ. ಮಾ.3 ರಂದು ದಾಳಿಗೂ ಮುನ್ನ ಘಟಕ ಹೇಗಿತ್ತು ಮತ್ತು ಮಾ.12 ರಂದು ದಾಳಿ ಬಳಿಕ ಹೇಗಾಗಿದೆ ಎಂಬ ಎರಡು ಚಿತ್ರಗಳನ್ನು ರಿಲೀಸ್ ಮಾಡಲಾಗಿದೆ. ಇದನ್ನೂ ಓದಿ: ಹಾರ್ಮುಜ್ ಜಲಸಂಧಿ ದಾಟಲು ಇರಾನ್ ಸಮ್ಮತಿ – ಭಾರತಕ್ಕೆ ಬರಲಿವೆ ಇನ್ನೆರಡು LPG ಟ್ಯಾಂಕರ್
The Esfahan Khomeynishahr Drone Production Plant produced Shahed one-way attack drones that have been used by the Iranian regime to attack targets across the region. The photo dated March 3, 2026, shows the plant before U.S. strikes. The photo taken on March 12, 2026 shows the… pic.twitter.com/nXxYpv2eyw
— U.S. Central Command (@CENTCOM) March 20, 2026
ಪ್ರದೇಶದಾದ್ಯಂತ ಇರಾನ್ ಬಳಸುವ ಶಹೀದ್ ಏಕಮುಖ ದಾಳಿ ಡ್ರೋನ್‌ಗಳನ್ನು ತಯಾರಿಸುತ್ತಿದ್ದ ಎಸ್ಫಹಾನ್-ಖೊಮೇನಿಶಹರ್ ಡ್ರೋನ್ ಉತ್ಪಾದನಾ ಘಟಕವು ಯುಎಸ್ ಪಡೆಗಳ ನಿಖರ ದಾಳಿಯಲ್ಲಿ ತೀವ್ರವಾಗಿ ಹಾನಿಗೊಳಗಾಯಿತು. ಆಪರೇಷನ್ ಎಪಿಕ್ ಫ್ಯೂರಿಯ ಭಾಗವಾಗಿ ಇರಾನ್‌ನ ಕ್ಷಿಪಣಿ ಮೂಲಸೌಕರ್ಯಗಳ ಮೇಲೆ ನಡೆದ ಬೃಹತ್ ದಾಳಿಯ ಪರಿಣಾಮದ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿದೆ.
ಯುಎಸ್ ಪಡೆ ಪ್ರಕಟಿಸಿದ ಉಪಗ್ರಹ ದೃಶ್ಯಾವಳಿಗಳು, ಮಾ.3 ರಂದು ಯುಎಸ್ ದಾಳಿ ಮಾಡುವ ಮೊದಲು ಇರಾನಿನ ಎಸ್ಫಹಾನ್-ಖೊಮೇನಿಶಹರ್ ಡ್ರೋನ್ ಉತ್ಪಾದನಾ ಘಟಕವನ್ನು ತೋರಿಸಿವೆ. ಮಾರ್ಚ್ 12 ರಂದು ಯುಎಸ್ ಪಡೆಗಳು ನಿಖರವಾದ ಯುದ್ಧಸಾಮಗ್ರಿಗಳೊಂದಿಗೆ ಸೌಲಭ್ಯದ ಮೇಲೆ ದಾಳಿ ಮಾಡಿದ ನಂತರದ ಚಿತ್ರಗಳನ್ನು ಸಹ ಬಿಡುಗಡೆ ಮಾಡಿದೆ. ಇದನ್ನೂ ಓದಿ: ಹಾರ್ಮುಜ್ ಜಲಸಂಧಿ ಬಳಿ ರಾಂಚಿ ವ್ಯಕ್ತಿ ಸಾವು – ಮೃತದೇಹ ತರಲು ಸಹಾಯ ಕೋರಿದ ಕುಟುಂಬ

