– ಒಪ್ಪಂದದ ಬೆನ್ನಲ್ಲೇ ಜಪಾನ್ ಮೇಲಿನ ಟ್ಯಾರಿಫ್ 10% ಇಳಿಸಿದ ಅಮೆರಿಕ ಅಧ್ಯಕ್ಷ
ನ್ಯೂಯಾರ್ಕ್: ತಿಂಗಳುಗಳ ಕಾಲ ನಡೆದ ಮಾತುಕತೆಗಳ ನಂತರ, ಜಪಾನ್ (Japan) ಜೊತೆ ಬೃಹತ್ ವ್ಯಾಪಾರ ಒಪ್ಪಂದವನ್ನು ಮಾಡಿಕೊಂಡಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಘೋಷಿಸಿದ್ದಾರೆ.
ಘೋಷಿಸಲಾದ ಒಪ್ಪಂದದ ಪ್ರಕಾರ, ಅಮೆರಿಕವು ಜಪಾನಿನ ರಫ್ತಿನ ಮೇಲೆ ಶೇ.15 ರಷ್ಟು ಸುಂಕವನ್ನು ವಿಧಿಸಿದೆ. ಜಪಾನ್, ಅಮೆರಿಕದಲ್ಲಿ 550 ಬಿಲಿಯನ್ ಡಾಲರ್ ಹೂಡಿಕೆ ಮಾಡುತ್ತದೆ ಎಂದು ಟ್ರಂಪ್ ತಿಳಿಸಿದ್ದಾರೆ. ಇದನ್ನೂ ಓದಿ: ಮುಂಬೈ ದಾಳಿಯ ರುವಾರಿ, ಸಂಸತ್ ಮೇಲಿನ ದಾಳಿಯ ಸಂಚುಕೋರ ಲಷ್ಕರ್ ಉಗ್ರ ಪಾಕಿಸ್ತಾನದ ಆಸ್ಪತ್ರೆಯಲ್ಲಿ ಸಾವು
ನಾವು ಜಪಾನ್ ಜೊತೆ ಬೃಹತ್ ಒಪ್ಪಂದವನ್ನು ಪೂರ್ಣಗೊಳಿಸಿದ್ದೇವೆ. ಬಹುಶಃ ಇದುವರೆಗೆ ಮಾಡಿಕೊಂಡ ಅತಿದೊಡ್ಡ ಒಪ್ಪಂದ ಇದಾಗಿದೆ ಎಂದು ಟ್ರಂಪ್ ತಮ್ಮ ಟ್ರುತ್ ಸೋಶಿಯಲ್ ಪ್ಲಾಟ್‌ಫಾರ್ಮ್‌ನಲ್ಲಿ ಬರೆದುಕೊಂಡಿದ್ದಾರೆ.
ನನ್ನ ನಿರ್ದೇಶನದ ಮೇರೆಗೆ ಜಪಾನ್ ಅಮೆರಿಕದಲ್ಲಿ 550 ಬಿಲಿಯನ್ ಡಾಲರ್‌ಗಳನ್ನು ಹೂಡಿಕೆ ಮಾಡುತ್ತದೆ. ಅದು ಲಾಭದ 90% ಪಡೆಯುತ್ತದೆ. ಜಪಾನ್ ಅಮೆರಿಕದ ಕಾರುಗಳು, ಅಕ್ಕಿ ಮತ್ತು ಕೆಲವು ಕೃಷಿ ಉತ್ಪನ್ನಗಳ ರಫ್ತಿಗೆ ಸಹ ಮುಕ್ತವಾಗಲಿದೆ. ಈ ಒಪ್ಪಂದವು ಲಕ್ಷಾಂತರ ಉದ್ಯೋಗಗಳನ್ನು ಸೃಷ್ಟಿಸುತ್ತದೆ ಎಂದು ಟ್ರಂಪ್ ತಿಳಿಸಿದ್ದಾರೆ. ಇದನ್ನೂ ಓದಿ: ಸೈಬರ್ ದಾಳಿಗೆ 158 ವರ್ಷದ ಹಳೆಯ ಕಂಪನಿ ಬಂದ್ – 700 ಮಂದಿ ಮನೆಗೆ
ಆಗಸ್ಟ್ 1 ರಿಂದ ಹೊಸ ತೆರಿಗೆ ನೀತಿ ಜಾರಿ ಜಾರಿಯಾಗಲಿದೆ. ಈ ಮೊದಲು ಜಪಾನ್‌ಗೆ 25% ಟ್ಯಾರಿಫ್ ಅನ್ನು ಟ್ರಂಪ್ ವಿಧಿಸಿದ್ದರು.