ಅಮೆರಿಕದಿಂದ 3ನೇ ಹಂತದ ಗಡಿಪಾರು – ಇಂದು 112 ಮಂದಿ ಅಕ್ರಮ ವಲಸಿಗರು ಭಾರತಕ್ಕೆ

Public TV
1 Min Read

ನವದೆಹಲಿ: ಅಮೆರಿಕದಿಂದ ಗಡೀಪಾರಾದ ಭಾರತೀಯರನ್ನು ಹೊತ್ತ ಮೂರನೇ ವಿಮಾನವು ಭಾನುವಾರ ತಡರಾತ್ರಿ ಅಮೃತಸರಕ್ಕೆ ಬಂದಿಳಿದಿದೆ. ಈ ಬಾರಿ ತಮ್ಮದ ದೇಶದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ 112 ಭಾರತೀಯರನ್ನು ಡೊನಾಲ್ಡ್‌ ಟ್ರಂಪ್‌ ಸರ್ಕಾರ ಗಡಿಪಾರು ಮಾಡಿದೆ. 2ನೇ ಹಂತದಲ್ಲಿ 119 ಮಂದಿ ಅಕ್ರಮ ವಲಸಿಗರನ್ನು ಭಾರತಕ್ಕೆ ಗಡಿಪಾರು ಮಾಡಿದ ಬೆನ್ನಲ್ಲೇ 3ನೇ ಹಂತದಲ್ಲಿ 112 ಮಂದಿ ಅಕ್ರಮ ವಲಸಿಗರನ್ನು ಗಡಿಪಾರು ಮಾಡಿದೆ.

ಅಕ್ರಮ ವಲಸಿಗರನ್ನು ಹೊತ್ತ ಅಮೆರಿಕ ವಾಯುಪಡೆಯ ವಿಶೇಷ ವಿಮಾನ C17 ಗ್ಲೋಬ್‌ಮಾಸ್ಟರ್-III ಇಂದು (ಫೆ.16 ರಂದು) ತಡರಾತ್ರಿ ಅಮೃತಸರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ.

ಅಮೆರಿಕದಿಂದ ಗಡಿಪಾರು ಮಾಡಲಾದ 112 ಜನರಲ್ಲಿ ಪಂಜಾಬ್‌ನ 31, ಹರಿಯಾಣದ 44, ಗುಜರಾತ್‌ನ 33, ಉತ್ತರ ಪ್ರದೇಶದ ಇಬ್ಬರು ಮತ್ತು ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಿಂದ ತಲಾ ಒಬ್ಬರು ಇದ್ದಾರೆ ಉನ್ನತ ಮೂಲಗಳು ತಿಳಿಸಿವೆ.

ಅಕ್ರಮವಾಗಿ ದೇಶವನ್ನು ಪ್ರವೇಶಿಸಿದ ಅಥವಾ ವೀಸಾ ಅವಧಿ ಮೀರಿದ ನಂತರ ಅಲ್ಲಿಯೇ ಉಳಿದುಕೊಂಡ ವ್ಯಕ್ತಿಗಳ ಮೇಲೆ ಟ್ರಂಪ್‌ ಸರ್ಕಾರ ನಡೆಸುತ್ತಿರುವ ಕಾರ್ಯಾಚರಣೆಯ ಭಾಗ ಇದಾಗಿದೆ.

Share This Article