ಟಿವಿ ಲೈವ್‌ನಲ್ಲೇ ಪತಿಗೆ ವಿಚ್ಛೇದನ ಘೋಷಿಸಿದ ನ್ಯೂಸ್‌ ಆ್ಯಂಕರ್‌

Public TV
1 Min Read

ನ್ಯೂಯಾರ್ಕ್: ʼಫಾಕ್ಸ್‌ʼ (Fox) ಸುದ್ದಿ ವಾಹಿನಿ ನಿರೂಪಕಿ (ಆ್ಯಂಕರ್‌) ಜೂಲಿ ಬಾಂಡೆರಾನ್‌ (Julie Banderas) ಅವರು ಟಿವಿ ಲೈವ್‌ನಲ್ಲೇ ತನ್ನ ಪತಿಗೆ ವಿಚ್ಛೇದನ ಘೋಷಿಸಿ ಪ್ರೇಕ್ಷಕರಲ್ಲಿ ಅಚ್ಚರಿ ಮೂಡಿಸಿದ್ದಾರೆ.

ವ್ಯಾಲೆಂಟೈನ್ಸ್‌ ಡೇ ಕುರಿತು ಟಿವಿ ವಾಹಿನಿಯೊಂದು ಕಾರ್ಯಕ್ರಮ ನಡೆಸುತ್ತಿತ್ತು. ಇದರಲ್ಲಿ ಪಾಲ್ಗೊಂಡಿದ್ದ ಜೂಲಿ ಬಾಂಡೆರಾನ್‌, ಲೈವ್‌ನಲ್ಲೇ ವಿಚ್ಛೇದನ ಘೋಷಿಸಿದ್ದಾರೆ. ಇವರು 2009ರಲ್ಲಿ ಆಂಡ್ರ್ಯೂ ಸ್ಯಾನ್ಸೋನ್‌ ಅವರನ್ನು ವಿವಾಹವಾಗಿದ್ದರು. ಇದನ್ನೂ ಓದಿ: ಧರ್ಮನಿಂದನೆ ಆರೋಪ – ಪಾಕ್ ವ್ಯಕ್ತಿಯನ್ನು ಜೈಲಿನಿಂದ ಎಳೆದೊಯ್ದು ಹತೈಗೈದ ಜನ

ಕಾರ್ಯಕ್ರಮದ ವೇಳೆ ವ್ಯಾಲೆಂಟೈನ್ಸ್‌ ಡೇ ಕುರಿತು ಕೀಳು ಪದವನ್ನು ನಿರೂಪಕಿ ಜೂಲಿ ಬಳಸಿದ್ದಾರೆ. ಇದು ಮೂರ್ಖತನ ಎಂದು ಸಹ ಜರಿದಿದ್ದಾರೆ. ನಾನು ವಿಚ್ಛೇದನವನ್ನು ಪಡೆಯುತ್ತಿದ್ದೇನೆ. ಆ ಬಗ್ಗೆ ಇಲ್ಲಿಯೇ ಮೊದಲ ಬಾರಿಗೆ ಹೇಳುತ್ತಿದ್ದೇನೆ ಎಂದು ಜೂಲಿ ಅವರು ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮುನ್ನಾ ದಿನವೇ ಜೂಲಿ ಅವರು ವಿಚ್ಛೇದನ ಪಡೆಯುವ ಬಗ್ಗೆ ಘೋಷಣೆ ಮಾಡುವುದಾಗಿ ಟ್ವೀಟ್‌ ಮಾಡಿದ್ದರು. ಜೊತೆ ಸೆಲ್ಫಿ ಫೋಟೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದರು. ಇದನ್ನೂ ಓದಿ: ನಾನು ಚಾಕೊಲೇಟ್‌ ಖರೀದಿಸದಿದ್ದರೂ ಪರ್ವಾಗಿಲ್ಲ..: ಕೂಡಿಟ್ಟಿದ್ದ ಹಣವನ್ನು ಟರ್ಕಿ ಭೂಕಂಪ ಸಂತ್ರಸ್ತರಿಗೆ ನೀಡಿದ 9ರ ಬಾಲಕ

ನಿರೂಪಕಿ ಜೂಲಿ ಅವರು 2009ರಲ್ಲಿ ಆಂಡ್ರ್ಯೂ ಸ್ಯಾನ್ಸೋನ್ ಅವರನ್ನು ಮದುವೆಯಾಗಿದ್ದರು. ಈ ದಂಪತಿಗೆ ಮೂರು ಮಕ್ಕಳಿದ್ದಾರೆ. ಕಳೆದ ವರ್ಷ ಡಿಸೆಂಬರ್‌ನಲ್ಲೇ ಸ್ಯಾನ್ಸೋನ್‌ಗೆ ವಿಚ್ಛೇದನ ನೀಡುವ ಬಗ್ಗೆ ಜೂಲಿ ಸುಳಿವು ನೀಡಿದ್ದರು.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *